ಜಿಲ್ಲಾ ಮಟ್ಟಕ್ಕೆ ಬಾಲಕರ ಕಬ್ಬಡ್ಡಿ ಆಯ್ಕೆ
ಲೋಕದರ್ಶನ ವರದಿ
ಕೊಟ್ಟೂರು 13: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಕೊಟ್ಟೂರೇಶ್ವರ ಪದವಿ ಪೂರ್ವ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದರು.
ಇದೇ ಆಗಸ್ಟ್ 5 ಮತ್ತು 6ನೇ ದಿನಾಂಕದಂದು ನೆಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾ ಕೂಟದಲ್ಲಿ ಬಾಲಕರ ಕಬ್ಬಡ್ಡಿ ಪಂದ್ಯದಲ್ಲಿ ಪ್ರಥಮ ಸ್ಥಾನ, ಬಾಲಕಿಯರ ಕಬ್ಬಡ್ಡಿ ಪಂದ್ಯದಲ್ಲಿ ಪ್ರಥಮ ಸ್ಥಾನ, ವಾಲಿಬಾಲ್ ಬಾಲಕರ ಪ್ರಥಮಸ್ಥಾನ, ವಾಲಿಬಾಲ್ ಗರ್ಲ್ಸ್ ದ್ವಿತೀಯ ಸ್ಥಾನ, ಟೇಬಲ್ ಟೆನ್ನಿಸ್ ಬಾಲಕರ ದ್ವಿತೀಯ ಸ್ಥಾನ, ಟೇಬಲ್ ಟೆನ್ನಿಸ್ ಬಾಲಕಿಯರ ದ್ವಿತೀಯ ಸ್ಥಾನ, ಚೆಸ್ ಬಾಲಕರ ಪ್ರಥಮ ಸ್ಥಾನ, ಚೆಸ್ ಬಾಲಕಿಯರ ಪ್ರಥಮ ಸ್ಥಾನ, ಬಾಲ್ ಬ್ಯಾಡ್ಮಿಂಟನ್ ಬಾಲಕರ ಪ್ರಥಮ ಸ್ಥಾನ, ಷಟಲ್ ಬ್ಯಾಡ್ಮಿಂಟನ್ ಬಾಲಕರ ಪ್ರಥಮ ಸ್ಥಾನ, ಷಟಲ್ ಬ್ಯಾಡ್ಮಿಂಟನ್ ಬಾಲಕಿಯರ ದ್ವಿತೀಯ ಸ್ಥಾನ, ಥ್ರೋ ಬಾಲ್ ಬಾಲಕರ ದ್ವಿತೀಯ ಸ್ಥಾನ, ಥ್ರೋ ಬಾಲ್ ಬಾಲಕಿಯರ ದ್ವಿತೀಯ ಸ್ಥಾನ, ಖೋ ಖ್ಹೋ ಬಾಲಕರ ಪ್ರಥಮ ಸ್ಥಾನ, ಖೋ ಖ್ಹೋ ಬಾಲಕಿಯರ ದ್ವಿತೀಯ ಸ್ಥಾನವನ್ನು ಪಡೆದು ಗುಂಪು ಆಟದಲ್ಲಿ ನಮ್ಮ ಕೊಟ್ಟೂರೇಶ್ವರ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳು ತಾಲೂಕು ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರು ಹರ್ಷದಿಂದ ತಿಳಿಸಿದರು. ಈ ವಿಜಯಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೆ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಿಗೆ ಎಲ್ಲಾ ಉಪನ್ಯಾಸಕರಿಗು ಹಾಗು ಬೋಧಕ ಬೋಧಕೇತರ ಸಿಬ್ಬಂದಿಯವರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರುಗಳು ತಿಳಿಸಿದರು.