ಬಳ್ಳಾರಿ

ವಿವಿಧ ಕಾಮಗಾರಿಗಳ ಪರೀಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು

ವಿವಿಧ ಕಾಮಗಾರಿಗಳ ಪರೀಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು


ಬಳ್ಳಾರಿ 20: ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ನಗರದ ನಲ್ಲಚೇರವು ಪ್ರದೇಶದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಬುಧವಾರ ಪರೀಶೀಲನೆ ನಡೆಸಿದರು. 

13 ಎಕರೆ ಪ್ರದೇಶದಲ್ಲಿ 1.85 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನಲ್ಲಚೇರವು ಕೆರೆ ಕಾಮಗಾರಿ, 7.5 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ನಡೆಯುತ್ತಿರುವ ಹಾಕಿ ಕ್ರೀಡಾಂಗಣ, ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರೀಶೀಲಿಸಿದರು. 

ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅನೇಕ ಸಲಹೆಸ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಮಾಜಿ ಸಂಸದರಾದ ಜೆ.ಶಾಂತಾ, ಸಣ್ಣಫಕೀರ​‍್ಪ,ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೋಹನ್,ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್ ರಾಠೋಡ ಸೇರಿದಂತೆ ಇನ್ನೀತರರು ಇದ್ದರು. 


ಪೌರಕಾರ್ಮಿಕನ ಮನೆಗೆ ಭೇಟಿ: ಧೈರ್ಯ ತುಂಬಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು: ಬಳ್ಳಾರಿ ಮಹಾನಗರ ಪಾಲಿಕೆಯ ಪೌರಕಾರ್ಮಿಕ ನಾರಾಯಣಪ್ಪ ಅವರು ತಮ್ಮ ಮಗಳು ಮದುವೆಗಾಗಿ ಖರೀದಿಸಿಟ್ಟಿದ್ದ ಚಿನ್ನಾಭರಣಗಳು ಹಾಗೂ ಹಣ ದೋಚಿ ಕಳ್ಳರು ಪರಾರಿ ಆಗಿರುವ ಘಟನೆಯ ಸುದ್ದಿ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಪೌರಕಾರ್ಮಿಕ ನಾರಾಯಣಪ್ಪ ಅವರ ಮನೆಗೆ ಬುಧವಾರ ಭೇಟಿ ನೀಡಿ ಸಾಂತ್ವಾನ ಹೇಳಿದರು. 


ಕಳ್ಳತನ ಮಾಡಿರುವವರು ಈಗಾಗಲೇ ಸಿಕ್ಕಿಬಿದ್ದಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೌರಕಾರ್ಮಿಕ ನಾರಾಯಣಪ್ಪ ಅವರು ನಮಗೆ 30 ವರ್ಷಗಳಿಂದ ಚಿರಪರಿಚಿತರು; ಅವರು ಧೈರ್ಯ ನೀಡಿದ್ದೇನೆ;ಯಾವುದೇ ರೀತಿಯಿಂದ ಎದೆಗುಂದದಿರಲು. ಅವರಿಗೆ ಮದುವೆ ಸಹಾಯ ಸೇರಿದಂತೆ ಎಲ್ಲ ರೀತಿಯ ಸಹಾಯ ಒದಗಿಸುವುದಾಗಿ ಅವರು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಮಾಜಿ ಸಂಸದ ಸಣ್ಣಫಕೀರ​‍್ಪ ಮತ್ತಿತರರು ಇದ್ದರು. 

--- 


ಸುದ್ದಿ ಓದಿ