ಬಳ್ಳಾರಿ

ಜಿಲ್ಲಾ ಕಾಂಗ್ರೆಸ್ ಚರ್ಚಾ ಸಭೆ

ಜಿಲ್ಲಾ ಕಾಂಗ್ರೆಸ್ ಚರ್ಚಾ ಸಭೆ

ಬಳ್ಳಾರಿ. 12: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಮಹಮ್ಮದ್.ರಫೀಕ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳು ಮತ್ತು ಸಮಿತಿಯ ಇತರ ಸದಸ್ಯರುಗಳ ಸಮಕ್ಷಮದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಜೊತೆಗೆ ಮತ್ತು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಜೊತೆಗೆ,  ಇತ್ತೀಚಿನ ಕಾಂಗ್ರೆಸ್ ಪಕ್ಷದ ಬೆಳವಣಿಗೆ, ಬಳ್ಳಾರಿ ನಗರದ ಭೂತ್ ಕಮಿಟಿಗಳ ನೇಮಕದ ಬಗ್ಗೆ ಮತ್ತು ಪಕ್ಷದ ಬಲವರ್ಧನೆಗೆ ಕೈಗೊಳ್ಳಬೇಕಾದ ಅನೇಕ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. 

ಈ ಚರ್ಚಾ ಸಭೆಯಲ್ಲಿ ಉಪಾಧ್ಯಕ್ಷ ಶರ್ಮಸ್ ಸಾಬ್, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷ ಅಸುಂಡಿ ನಾಗರಾಜ ಗೌಡ, ಕಂಟೋನ್ಮೆಂಟ್ ಬ್ಲಾಕ್ ಅಧ್ಯಕ್ಷ ಪೆರಂ ವಿವೇಕ್, ಕಾರ್ಯದರ್ಶಿಗಳಾದ ಜೈ ಕುಮಾರ್ ನಾಯುಡು, ಕೆ.ತಾಯಪ್ಪ, ಅಲಿವೇಲು ಸುರೇಶ್, ಗೋನಾಳ್ ನಾಗಭೂಷಣ ಗೌಡ, ಮೇಟಿ ದಿವಾಕರ್ ಗೌಡ, ಶ್ರೀಮತಿ ಶಮೀಮ್ ಜಕ್ಲಿ, ಹಮೀದ್ ಭಾಷ ಮೊದಲಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ