ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ಜಿಲ್ಲಾ ಸಮ್ಮೇಳನ
ಲೋಕದರ್ಶನ ವರದಿ
ಬಳ್ಳಾರಿ 26: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ನ ಜಿಲ್ಲಾ ಸಮ್ಮೇಳನವನ್ನು 8ನೇ ಸಮ್ಮೇಳನವನ್ನು ನಡೆಸುವ ಕುರಿತು ಕೂಲಂಕುಷ ಚರ್ಚೆಯ ನಂತರ ಮುಂದಿನ ಸೆಪ್ಟೆಂಬರ್ 24, 25, ್ಘ 26ದಿನಾಂಕಗಳಂದು ಬಳ್ಳಾರಿಯಲ್ಲಿ ನಡೆಸಲು ನಿರ್ಣಯಿಸಲಾಯಿತು. ಇದರ ಪೂರ್ವಭಾವಿಯಾಗಿ ಸೆಪ್ಟಂಬರ್ 1.ರಿಂದ 03. ರವರೆಗೆ ಜಿಲ್ಲಾದ್ಯಂತ ಪ್ರಚಾರ ಜಾಥಾಗಳನ್ನು ಕೈಗೊಳ್ಳಲು ನಿರ್ಣಯಿಸಲಾಗಿದೆ.
ಉಚ್ಛನ್ಯಾಯಾಲಯದ ಆದೇಶದನ್ವಯ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಲು, ಸ್ವಚ್ಛ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಮತ್ತು ನಗರ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳ ಬಾಡಿಗೆ ಹೆಚ್ಚಿಸಬೇಕು. ಗ್ರಾಮಾಂತರ ಕೇಂದ್ರಗಳಲ್ಲಿ ಹೆಚ್ಚಿನ ಸೌಕರ್ಯವಿರುವ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಸೂಕ್ತ ರೀತಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದೆ. ಮಾನ್ಯ ಬಾಂಬೇ ಉಚ್ಛನ್ಯಾಯಾಲಯವು, (ನಾಗಪುರ ಪೀಠ) "ಅಂಗನವಾಡಿ ಕಾರ್ಯಕರ್ತೆಯರು ಕೈಗಾರಿಕಾ ವಿವಾದ ಕಾಯ್ದೆ 1947ರಡಿ ಕಾರ್ಮಿಕರೇ (ಕಲಂ 2ಎಸ್), ಎಂದು ಅದೇ ರೀತಿ ಋಆಖ ಯೋಜನೆ ಕಾರ್ಮಿಕ ಕಾಯ್ದೆಗೆ ಒಳಪಡುತ್ತದೆ." (ಣಚಿಛಟಟಜಟಿಣ ಗಟಿಜಜಡಿ 2ಎ ಠ ಋ ಂಛಿಣ) ಎಂದು ತೀರ್ು ನೀಡಿರುವ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆ ಏನೆಂದರೆ, ಕಾರ್ಮಿಕರಿಗೆ ಇರತಕ್ಕಂತಹ ಕಾನೂನುಬದ್ಧ ಸವಲತ್ತುಗಳಾದ ಕನಿಷ್ಠ ವೇತನ, ರಜಾವೇತನ, ಬೋನಸ್, ಉಪಧನ, (ಕಚಿಥಿಟಜಟಿಣ ಠ ಉಡಿಚಿಣಣಣಥಿ) ಮುಂತಾದ ಸವಲತ್ತುಗಳನ್ನು ಒದಗಿಸಲು ಸೂಕ್ತ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರವನ್ನು ಕೋರಲಾಗುವುದು.
ಯಶಸ್ವಿ ರೀತಿ ವಿವಿಧ ತಾಲ್ಲೂಕ ಕೇಂದ್ರಗಳಲ್ಲಿ ಸಮ್ಮೇಳನವನ್ನು ಮಾಡಿದ್ದಕ್ಕಾಗಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎ.ಆರ್.ಎಂ.ಇಸ್ಮಾಯಿಲ್ ಅವರು ರಾಜ್ಯದಲ್ಲಿನ ಬಹುದೊಡ್ಡ ಮಹಿಳಾ ಸಂಘಟನೆಯಾಗಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹಕ್ಕುಗಳಿಗಾಗಿ ನಡೆದಿರುವ ಹೋರಾಟವನ್ನು ಇನ್ನಷ್ಟು ಸಂಘಟನಾತ್ಮಕವಾಗಿ ಬಲಪಡಿಸಬೇಕು. ಆದ್ದರಿಂದ 8ನೇ ಜಿಲ್ಲಾ ಸಮ್ಮೇಳನವನ್ನು ದೊಡ್ಡ ರೀತಿಯಲ್ಲಿ ಯಶಸ್ವಿಗೊಳಿಸಲು ಎಲ್ಲರೂ ಶ್ರಮವಹಿಸಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಆಹ್ವಾನವಿತ್ತರು.
ಸಭೆಯಲ್ಲಿ ಬಳ್ಳಾರಿ ಸೇರಿದಂತೆ ಸಿರುಗುಪ್ಪ, ಸಂಡೂರು, ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿ, ಹೂವಿನಹಡಗಲಿ ಮುಂತಾದ ತಾಲ್ಲೂಕುಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಕಾ. ಎ.ಆರ್.ಎಂ.ಇಸ್ಮಾಯಿಲ್ ರವರು ವಹಿಸಿದ್ದರು. ಅರ್ಕಾಣಿ ಇವರು ಸ್ವಾಗತಿಸಿದರು. ಈ.ಮಂಗಮ್ಮ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಫಾತಿಮಾ ಇವರು ವಂದಿಸಿದರು. ಜಿಲ್ಲೆಯ ಎಐಟಿಯುಸಿ ಮುಖಂಡರಾದ ಹೆಚ್.ವೀರಣ್ಣ, ಗುಡಿಹಳ್ಳಿ ಹಾಲೇಶ್, ಶಾಂತರಾಜ್ಜೈನ್ ಮತ್ತು ಂಋಈ ಮುಖಂಡರಾದ ಕಟ್ಟೆಬಸಪ್ಪ, ವಿಶ್ವನಾಥಸ್ವಾಮಿ, ವೀರೇಶ್, ಮುಕ್ಕಣ್ಣ, ಬಸವರಾಜ, ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಸಂಘಟನೆಯ ಮುಖ್ಯಸ್ಥರಾದ ಮಂಗಮ್ಮ, ಆರ್ಕಾಣಿ, ರೇಣುಕಾಪಾಟೀಲ್, ಕಲಾವತಿ, ಎರ್ರಮ್ಮ, ಫಾತಿಮಾ, ನಾಗರತ್ನ, ಇಂದಿರಾ, ಮೀನಾಕುಮಾರಿ, ಕವಿತ, ಅಂಬಿಕಾ, ಸುಮ, ಬಸಮ್ಮ, ಸವಿತಾ, ಶಾಂತಮ್ಮ, ಸ್ವರೂಪ ರಾಣಿ, ಇನ್ನಿತರರು ಹಾಜರಿದ್ದರು.