ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಬೆಳಗಾವಿ/ಉಗರಗೋಳ : ಜಿಲ್ಲೆಯ ಸೌದತ್ತಿಯ ಪವಿತ್ರಕ್ಷೇತ್ರವಾದ ಯಲ್ಲಮ್ಮನ ಸನ್ನಿಧಿಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ ಅವರು ಗುರುವಾರ ತಮ್ಮ ಕುಟುಂಬ ಸಮೇತವಾಗಿ ಭೇಟಿ ನೀಡಿ ಯಲ್ಲಮ್ಮನ ದರ್ಶನ ಪಡೆದರು.
ಗುರುವಾರ ಸವದತ್ತಿಯ ಯಲ್ಲಮ್ಮನ ಸನ್ನಿಧಿಗೆ ಆಗಮಿಸಿ ದೇವಿಯ ದರ್ಶನ ಪಡೆದ ನಂತರ ಮಾಧ್ಯಮದವರ ಜೊತೆ ಮಾತನಾಡಿದರು. ಯಲ್ಲಮ್ಮನಗುಡ್ಡದಲ್ಲಿ ರೂ. 215 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಿರುವ ಟೆಂಡರ್‌ಗೆ ಅನುಮೋದನೆ ಸಿಕ್ಕಿದೆ. ಬೇಗ ಕಾಮಗಾರಿ ಆರಂಭಿಸಿ, 11 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದೆ. ಕಾಲಮಿತಿಯಲ್ಲಿ ಅದನ್ನು ಅನುಷ್ಠಾನಗೊಳಿಸಿ, ಭಕ್ತರಿಗೆ ಆಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಮಗಳು ರೂಹಿ ಜನಿಸಿದ ಹಿನ್ನೆಲೆಯಲ್ಲಿ, ಕುಟುಂಬ ಸಮೇತವಾಗಿ ಯಲ್ಲಮ್ಮನ ಸನ್ನಿಧಿಗೆ ಬಂದು ದೇವಿ ದರ್ಶನ ಪಡೆದಿರುವೆ, ಶ್ರೀಕ್ಷೇತ್ರ ಇದೊಂದು ಜಾಗೃತವಾದ ಪುಣ್ಯ ಕ್ಷೇತ್ರವಾಗಿದ್ದು ಇಲ್ಲಿಗೆ ಬರುವಂತ ಭಕ್ತರು ಭಯ, ಭಕ್ತಿ, ಶ್ರೇಧ್ದೆಯಿಂದ ಶ್ರೀದೇವಿಯಲ್ಲಿ ಬೇಡಿಕೊಂಡು ಪುಣಿತರಾಗಬೇಕೆಂದು ಹೇಳಿದರು.
ಈ ವೇಳೆ ಶ್ರೀಮತಿ ಅಂಕೀತಾ, ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಕಾರ್ಯಧರ್ಶಿ ಪ್ರಭಾವತಿ ಫಕೀರಪೂರ, ಅಯ್ಯನ್, ರೂಹಿ, ಮದು, ಸವದತ್ತಿ ನಗರಸಭೆ ಪೌರಾಯುಕ್ತ ಸಂಗನಬಸಯ್ಯ, ಮಲ್ಲು ಜಕಾತಿ, ಅಲ್ಲಮಪ್ರಭು ಪ್ರಭುನವರ, ಮಂಜುನಾಥ ಅಂಗಡಿ, ಅಮೀನ ಗೋರಿನಾಯ್ಕ್, ಪ್ರಭು ಹಂಜಗಿ, ಸದಾನಂದ ಈಟಿ, ಜಗದನಗೌಡ ಪೊಲೇಶಿ, ಮಂಜುನಾಥಗೌಡ ಸಂಧಿಮನಿ, ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಉಪಸ್ಥಿತರಿದ್ದರು.