ಬೈಲಹೊಂಗಲ

ಸೋಂಕಿತರಿಗೆ ವಿವಿಧ ಸಾಮಗ್ರಿ ವಿತರಣೆ

ಸೋಂಕಿತರಿಗೆ ವಿವಿಧ ಸಾಮಗ್ರಿ ವಿತರಣೆ

ಬೈಲಹೊಂಗಲ 03: ಕೋವಿಡ್ ಸೋಂಕಿತರಿಗೆ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟನಿಂದ ಸೋಂಕಿತರ ನಿರ್ವಹಣೆಗಾಗಿ ಅಗತ್ಯವಿರುವ ವಿವಿಧ ಸಾಮಗ್ರಿಗಳನ್ನು ನೀಡಿರುವುದು ಮಾನವೀಯ ಕಾರ್ಯವಾಗಿದೆ ಎಂದು ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಹೇಳಿದರು. ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇವರಾಜ ಅರಸ ಬಡಾವಣೆಯಲ್ಲಿರುವ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟಿನ್ ಶ್ರೀಮತಿ ಚಿನ್ನಮ್ಮ ಬ ಹಿರೇಮಠ ವೃದಾಶ್ರಮದಲ್ಲಿರುವ 14 ಕೋವಿಡ್ ಸೋಂಕಿತರು ಹಾಗೂ 34 ಹಿರಿಯ ನಾಗರಿಕರಿಗೆ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ,  ವೃದಾಶ್ರಮದಲ್ಲಿರುವ ಕೋವಿಡ್ ಸೋಂಕಿತರಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳ ಮೌಲ್ಯದ ಸ್ಯಾನಿಟೈಜರ್, ಮಾಸ್ಕ್, ಪೇಸ್ ಶೀಲ್ಡ್, ಪಲ್ಸ್ ಆಕ್ಷಿಮೀಟರ್, ಪೀನೈಲ್, ರೆಸಪಿರೇಟರಿ ಸ್ಟೀಮರ್, ಗುಲ್ಕೋಮಿಟರ್, ಹ್ಯಾಂಡ್ ಗ್ಲೌಜ್, ಪಿಪಿಈ ಕಿಟ್ , ಔಷಧಿ ಹೀಗೆ ವಸ್ತುಗಳನ್ನು ಕೋವಿಡ್ ನಂತಹ ತುತರ್ು ಸಂದರ್ಭದಲ್ಲಿ ಸೋಂಕಿತರಿಗೆ ವಿತರಿಸುವ ಮೂಲಕ  ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆಂದು ತಿಳಿಸಿದರು 

ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ನ ಕಾರ್ಯದಶರ್ಿ ಡಾ.ಮಹಾಂತೇಶ ರಾಮಣ್ಣವರ ಮಾತನಾಡಿ, ಅಜಯ ಡ್ರಗ್ಡಿಸ್ಟ್ರಿಬ್ಯೂಟರ್ ಬೈಲಹೊಂಗಲನ ಮಾಲೀಕರಾದ ಅಜಯ ಸುಮಯ್ಯಾ ಪೂಜಾರಿ, ಮಕರಜ್ಯೋತಿ  ಮೇಡಿಕಲ್ಸ್ನ ಮಾಲೀಕರಾದ  ಮಹಾಂತೇಶ ಹಿಟ್ಟಣಗಿ, ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್, ಮುರಗೇಶ ಅಳಗುಂಡಗಿ, ಹುಬ್ಬಳ್ಳಿ, ಚಂದ್ರಶೇಖರ ಮನೂರ, ಡಾ.ರಮೇಶ ರಾಠೋಡ, ಡಾ.ದೇವೆಂದ್ರ ಹುಲ್ಲೋಳ್ಳಿ, ಡಾ.ಪ್ರಕಾಶ ಮತ್ತಿಕೊಪ್ಪ, ಉಮೇಶ ವಾಸುದೇವ ಮೊಕಾಶಿ, ಮಹಾಂತೇಶ ಪರಮಶೆಟ್ಟಿ, ಡಾ.ದುರ್ಗಪ್ಪ, ಬೈಲಹೊಂಗಲದ ಮಹಾಂತ ಟ್ರೇರ್ಸ್ನ ಮಾಲೀಕರಾದ ಮಹಾಂತೇಶ ಶಿಲವಂತರ, ಇವರೆಲ್ಲರ ಸಹಾಯದಿಂದ ಅಗತ್ಯ ವಸ್ತುಗಳನ್ನು ವೃದ್ಧಾಶ್ರಮಕ್ಕೆ ನೀಡಲಾಗಿದೆ ಎಂದರು.ಸಂಯೋಜಕರಾದ ಎಂ.ಎಸ್.ಚೌಗಲಾ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಡಾ.ಡಿ.ಎನ್.ಮಿಸಾಳೆ, ಬೆಳಗಾವಿ ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರಾದ ಡಾ.ಅನಿಲ  ಪಾಟೀಲ, ಕಿರಣ ಚೌಗಲಾ  ಪ್ರವೀಣ ಹಿರೇಮಠ, ಕುಡಚಿ ನಗರ ಕುಟುಂಬ ಕಲ್ಯಾಣ ಕೇಂದ್ರದ ಸಿಬ್ಬಂದಿ ವರ್ಗ ಇದ್ದರುಬೈಲಹೊಂಗಲ- ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ದಿಂದ ದೇವರಾಜ ಅರಸ ಬಡಾವಣೆಯಲ್ಲಿರುವ ನಾಗನೂರು ಶಿವಬಸವೇಶ್ವರ ಟ್ರಸ್ಟಿನ್ ಚಿನ್ನಮ್ಮ ಬ ಹಿರೇಮಠ ವೃದಾಶ್ರಮದಲ್ಲಿರುವ  ಕೋವಿಡ್ ಸೋಂಕಿತರು ಹಾಗೂ  ಹಿರಿಯ ನಾಗರಿಕರಿಗೆ ವಿವಿಧ ಸಾಮಗ್ರಿಗಳನ್ನು ಬೆಳಗಾವಿ ಕಾರಂಜಿಮಠದ ಗುರು ಸಿದ್ಧಮಹಾಸ್ವಾಮೀಜಿ  ಹಾಗೂ ಗಣ್ಯರು ವಿತರಿಸಿದರು 

ಸುದ್ದಿ ಓದಿ