ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
ಲೋಕದರ್ಶನ ವರದಿ
ಬಳ್ಳಾರಿ 02: ನಗರದ 29ನೇ ವಾರ್ಡ್ ಕೌಲ್ಬಜಾರ್ ಬಂಡಿಹಟ್ಟಿ ಪ್ರದೇಶದ ಮಹಾತ್ಮಗಾಂಧಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಬಳ್ಳಾರಿ ಕಿರಾಣಿ ಮತ್ತು ಜನರಲ್ ಮರ್ಚಂಟ್ಸ್ ಅಸೋಷಿಯೇಷನ್ವತಿಯಿಂದ 265 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಮವಸ್ತ್ರವನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಎಸ್.ಎಂ ವೇಣುಗೋಪಾಲ್ ಮಾತನಾಡುತ್ತಾ ಬಡ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಕನ್ನಡ ನಾಣ್ನುಡಿಯಂತೆ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಆದ್ದರಿಂದ ಎಲ್ಲರು ವಿದ್ಯಾಭ್ಯಾಸವನ್ನು ಪಡೆಯಬೇಕೆಂದು ಹೇಳಿದರು. ಮುಂದಿನ ದಿನಗಳಲ್ಲಿ ನಮ್ಮ ಸಂಘದಿಂದ ವಿದ್ಯಾಭ್ಯಾಸಕ್ಕೆ ಬೇಕಾದ ನೋಟ್ ಪುಸ್ತಕಗಳು ಸೇರಿದಂತೆ ಸಮವಸ್ತ್ರಗಳನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಕಿರಾಣಿ ಮತ್ತು ಜನರಲ್ ಮರ್ಚಂಟ್ಸ್ ಅಸೋಷಿಯೇಷನ್ನ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ಬಿ ವೀರಾಂಜಿನೇಯಲು, ಸಿರಾಜ್ಜಾಹೀರ್, ಜಂಟಿ ಕಾರ್ಯದರ್ಶಿಪಿ ಲಕ್ಷ್ಮಿನಾರಾಯಣ ಯಾದವ್, ಕೋಶಾಧ್ಯಕ್ಷರಾದ ಹನುಮಾನ್ ಚೋಪ್ರ, ನಿರ್ದೇಶಕರಾದ ಕಾರ್ತೀಕ, ಕಿಶೋರ್, ರಾಜ್ಕುಮಾರ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿ ಮಹೇಶ್, ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು