ಬಳ್ಳಾರಿ

ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸ್ಟೇಷನರಿ ಬ್ಯಾಗ್, ಟೂಲ್‌ಕಿಟ್ ವಿತರಣೆ

ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸ್ಟೇಷನರಿ ಬ್ಯಾಗ್, ಟೂಲ್‌ಕಿಟ್ ವಿತರಣೆ

ಲೋಕದರ್ಶನ ವರದಿ 

ಕಂಪ್ಲಿ 26: ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಕ್ಷೇತ್ರದಲ್ಲಿಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು. 


ಇಲ್ಲಿನ ಗೊಗ್ಗ ಚನ್ನಬಸಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸರಬರಾಜಾಗಿರುವ ಸಮವಸ್ತ್ರ, ಸ್ಟೇಷನರಿ ಬ್ಯಾಗ್, ಟೂಲ್‌ಕಿಟ್‌ಗಳನ್ನು ಎಲೆಕ್ಟ್ರೀಷಿಯನ್ ಮತ್ತು ಫಿಟ್ಟರ್ ವಿಭಾಗದ 81ಜನ ಎಸ್ಸಿ ಹಾಗೂ 53ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಗುರುವಾರ ವಿತರಿಸಿ ಮಾತನಾಡಿ, ಸಮಾಜದಲ್ಲಿ ಶಿಕ್ಷಣಕ್ಕೆ ಉನ್ನತ ಸ್ಥಾನವಿದೆ ಹೆಚ್ಚಿನ ಆಸಕ್ತಿವಹಿಸಿ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುವ ಮೂಲಕ ಉತ್ತಮ ಅಂಕಗಳಿಸುವುದರ ಜೋತೆಗೆ ಉದ್ಯೋಗ ಪಡೆಯಬಹುದು.  ಶಿಕ್ಷಣಕ್ಕೆ ಪೂರಕವಾಗಿ ಮೊಬೈಲ್ ಸಾಧನ ಬಳಸಿಕೊಳ್ಳಿ.  ಎಂದರು.  


ಗಂಗಾವತಿಯ ಸರ್ಕಾರಿ ಐಟಿಐ ಪ್ರಾಚಾರ್ಯ ಡಿ.ಕೊಟ್ರೇಶ್, ಪೇಟೆ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಿ.ವೀರ​‍್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧೀರ್, ಮುಖಂಡ ಇಟಗಿ ಬಸವರಾಜಗೌಡ, ಐಟಿಐ ಕಾಲೇಜುಗಳಾದಗುರುಕೊಟ್ಟೂರೇಶ್ವರ. ಪ್ರಾಚಾರ್ಯ ಎನ್‌.ಎಂ.ಪತ್ರೆಯ್ಯಸ್ವಾಮಿ. ಐಟಿಐ ಕಾಲೇಜುಗಳಾದಗೊಗ್ಗಚನ್ನಬಸಯ್ಯ .ಗುರುಸಿದ್ದೇಶ್ವರ ಅನುದಾನಿತ.ವಿದ್ಯಾರಣ್ಯ. ಪ್ರಗತಿ.ಶ್ರೀಕಟ್ಟೆ ಬಸವೇಶ್ವರ.ವಿಕಾಸ ಐಟಿಐ ಪ್ರಾಚಾರ್ಯ ಎನ್‌.ಎಂ.ಪತ್ರೆಯ್ಯಸ್ವಾಮಿ ಸೇರಿ ಪಟ್ಟಣದ ಏಳು ಐಟಿಐ ಪ್ರಾಚಾರ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ