ವಿಜಯಪುರ

ಶಾಲಾ ಮಕ್ಕಳಿಗೆ ಸ್ಕೊಲ್ ಬ್ಯಾಗ್ ವಿತರಣೆ

ಶಾಲಾ ಮಕ್ಕಳಿಗೆ ಸ್ಕೊಲ್ ಬ್ಯಾಗ್ ವಿತರಣೆ

ಲೋಕದರ್ಶನ ವರದಿ 

ವಿಜಯಪುರ 22 :  ನಗರದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 30 ವಿವೇಕನಗರದಲ್ಲಿ ಶಾಲಾ ಮಕ್ಕಳಿಗೆ ಸ್ಕೊಲ್ ಬ್ಯಾಗ್ ಗಳನ್ನು ವಿತರಿಸಲಾಯಿತು. ದಾನಿಗಳಾದ ವಿನಾಯಕ ಪ್ರಕಾಶ ವಿಶ್ವಕರ್ಮ ಇವರು ತಮ್ಮ ಮಗ ಕೃಷ್ಣನ ಜನ್ಮ ದಿನದ ಖುಷಿಗಾಗಿ ಸಿಹಿ ಹಾಗು ಶಾಲಾ ಬ್ಯಾಗಳನ್ನು ವಿತರಿಸಿ ಮಕ್ಕಳೆಲ್ಲರೂ ಚೆನ್ನಾಗಿ ವಿದ್ಯೆಯನ್ನು ಕಲಿತು ಉತ್ತಮ ನಾಗರಿಕರಾಗಬೇಕೆಂದು ಕರೆ ಕೊಟ್ಟರು. ಮುಖ್ಯ ಗುರುಮಾತೆಯರಾದ ಕೆ. ಸುನಂದಾರವರು ಅವರಿಗೆ ಧನ್ಯವಾದ ಅರ​‍್ಿಸಿದರು. ಮಗುವಿನ ತಾಯಿ ಮನ್ವಿತಾ ವಿಶ್ವಕರ್ಮ, ಗುರುಗಳಾದ ಟಿ.ಸಿ ನಾಟಿಕಾರ ಹಾಗೂ ಅಡಿಗೆ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ