ಇಂಡಿ

ಕೋವಿಡ್‌ನಿಂದ ಮೃತರ ಕುಟುಂಬಸ್ಥರಿಗೆ ಪರಿಹಾರ ಧನ ವಿತರಣೆ

ಕೋವಿಡ್‌ನಿಂದ ಮೃತರ ಕುಟುಂಬಸ್ಥರಿಗೆ ಪರಿಹಾರ ಧನ ವಿತರಣೆ


ಇಂಡಿ 14: ಕೋವಿಡ್‌ನಿಂದ ಇತ್ತೀಚೆಗೆ ಮೃತರಾದ ತಾಲೂಕಿನ ವಿವಿಧ ಗ್ರಾಮಗಳ ಮೃತರ ಕುಟುಂಬಸ್ಥರಿಗೆ ಸರಕಾರದಿಂದ ಬಂದ 1 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ಅನ್ನು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶಿರಸ್ತೇದಾರ ಎಸ್‌.ಆರ್‌. ಮುಜಗೊಂಡ ಹಾಗೂ ಬಳ್ಳೊಳ್ಳಿ ಕಂದಾಯ ನೀರೀಕ್ಷರಾದ ಗುರುಶಾಂತ ಬಿರಾದಾರ ತಲಾ ಒಂದು ಲಕ್ಷ ರೂ. ಚಕ್ ವಿತರಣೆ ಮಾಡಿದರು. 

ತಾಲೂಕಿನ ಪಡನೂರ ಗ್ರಾಮದ ರೇವತಿ ಮಠ, ಹಂಜಗಿ ಗ್ರಾಮದ ಮದೀನಾ ಪಾಂಡು, ತಡವಲಗಾ ಗ್ರಾಮದ ಭಾಗೀರಥಿ ಪಾಟೀಲ ಮತ್ತು ಸಾವಿತ್ರಿ ಪವಾರ, ಶಿರಶ್ಯಾಡ ಗ್ರಾಮದ ಕಸ್ತೂರಿಬಾಯಿ ಬಡಿಗೇರ, ನಿಂಬಾಳ ಗ್ರಾಮದ ರೋಶನ್‌ಬಿ ಭಾಗಾಯತ್ ಕುಟುಂಬಸ್ಥರಿಗೆ ಮಂಗಳವಾರ ಚೆಕ್ ವಿತರಣೆ ಮಾಡಲಾಯಿತು. 

ಪೋಟೊ ಕ್ಯಾಪ್ಸನ್ 14 ಇಂಡಿ 05: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್‌ನಿಂದ ಮೃತರಾದ ಮೃತರ ಕುಟುಂಬಸ್ಥರಿಗೆ ಸರಕಾರದಿಂದ ಬಂದ 1 ಲಕ್ಷ ರೂ ಪರಿಹಾರ ಧನವನ್ನು ಮಂಗಳವಾರ ಶಿರಸ್ತೇದಾರ ಎಸ್‌.ಆರ್‌. ಮುಜಗೊಂಡ ಹಾಗೂ ಬಳ್ಳೊಳ್ಳಿ ಕಂದಾಯ ನೀರೀಕ್ಷರಾದ ಗುರುಶಾಂತ ಬಿರಾದಾರ ವಿತರಿಸಿದರು. 


ಸುದ್ದಿ ಓದಿ