ಬಳ್ಳಾರಿ

ಕ್ಷಯರೋಗಿಗಳಿಗೆ ರೆಡ್ಡಿಯವರಿಂದ ಪೌಷ್ಠಿಕಾಂಶಭರಿತ ಆಹಾರ ಕಿಟ್ ವಿತರಣೆ

ಕ್ಷಯರೋಗಿಗಳಿಗೆ ರೆಡ್ಡಿಯವರಿಂದ ಪೌಷ್ಠಿಕಾಂಶಭರಿತ ಆಹಾರ ಕಿಟ್ ವಿತರಣೆ

ಬಳ್ಳಾರಿ.ನ.02: ಬಳ್ಳಾರಿ ತಾಲೂಕಾ ಮೋಕಾ ಹೋಬಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಸುಮಾರು 17 ಜನ ಕ್ಷಯರೋಗಿಗಳನ್ನು ಆರು ತಿಂಗಳು ದತ್ತು ತೆಗೆದುಕೊಂಡು ಪ್ರತಿ ತಿಂಗಳು ಪೌಷ್ಠಿಕಾಂಶಭರಿತ ಆಹಾರ ಕಿಟ್ಗಳನ್ನು ವಿತರಣೆ ಮಾಡುವ ವ್ಯವಸ್ಥೆ ಮಾಡಿದ್ದಾರೆಂದು ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ಧನ ತಿಳಿಸಿದರು. 

ಇಂದು ಬೆಳಿಗ್ಗೆ ಮೋಕಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯರೋಗ ನಿಮರ್ೂಲನ ಇಲಾಖೆ ಪ್ರಧಾನಮಂತ್ರಿ ಕ್ಷಯರೋಗ ಮುಕ್ತ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಮಾತನಾಡಿದ ಅವರು, 2025ರೊಳಗೆ ದೇಶದಲ್ಲಿ ಟಿ.ಬಿ ಕಾಯಿಲೆಯನ್ನು ಸಂಪೂರ್ಣವಾಗಿ ಮುಕ್ತದೇಶವನ್ನಾಗಿ ಮಾಡಲು ಈ ರೀತಿ ದಾನಿಗಳಿಂದ ಪೌಷ್ಠಿಕ ಆಹಾರವನ್ನು ನೀಡಲಾಗುವುದೆಂದರು. ನೀ ಕ್ಷಯ ಮಿತ್ರ ಯೋಜನೆಯಲ್ಲಿ ಪ್ರತಿ ತಿಂಗಳು ಐದುನೂರು ಕ್ಷಯರೋಗಿಗಳಿಗೆ ಸಕರ್ಾರದಿಂದ ಪೌಷ್ಟಿಕ ಆಹಾರಕ್ಕಾಗಿ ಸಹಾಯಧನವನ್ನು ನೀಡಿತ್ತಿದೆ. 

ಸತ್ಯನಾರಾಯಣರೆಡ್ಡಿಯಂತ ದಾನಿಗಳು ಇದೇ ರೀತಿ ಮುಂದೆ ಬಂದು ಕ್ಷಯರೋಗ ನಿಮರ್ೂಲನೆಗೆ ಸಹಕರಿಸಿಬೇಕೆಂದರು. ಕ್ಷಯರೋಗಿಗಳಿಗೆ ಸರಿಯಾದ ಸಮಯದಲ್ಲಿ ಪೌಷ್ಟಿಕ ಆಹಾರ ಮತ್ತು ಔಷಧ ದೊರೆತಲ್ಲಿ ಅವರು ಆರು ತಿಂಗಳೊಳಗೆ ರೋಗಮುಕ್ತರಾಗುತ್ತಾರೆಂದರು. 

ಕ್ಷಯರೋಗ ನಿಮರ್ೂಲನಾ ಅಧಿಕಾರಿ ಇಂದ್ರಾಣಿ, ತಾಲೂಕಾ ಆರೋಗ್ಯಾಧಿಕಾರಿ ಡಾ|| ಮೋಹನ್ಕುಮಾರಿ, ಮೋಕಾ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಡಾ|| ಭಾರತಿ, ಡಾ|| ಅಜರ್ುನ ಮುನಿಷ್, ಡಾ|| ನತೀಶ್, ಡಾ|| ಸಂಜಯ್ ಮತ್ತು ಮುಖಂಡರಾದ ಚಿಂತಕುಂಟೆ ಹೊನ್ನಪ್ಪ ಸಿಬ್ಬಂದಿಗಳಾದ ವೆಂಕಟೇಶ್, ಬಸವರಾಜ, ಓಬಳರೆಡ್ಡಿ, ಶೇಷಗಿರಿ, ಸಿ. ಮಂಜುನಾಥ್, ಪಂಪಾಪತಿ ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ಹಲವರಿದ್ದರು.  



 

ಸುದ್ದಿ ಓದಿ