ಬಳ್ಳಾರಿ

ಶಾಲೆ ಮಕ್ಕಳಿಗೆ ನೋಟು, ಪುಸ್ತಕ, ಇತರೆ ಕಲಿಕೆ ಸಾಮಗ್ರಿಗಳು ವಿತರಣೆ

ಶಾಲೆ ಮಕ್ಕಳಿಗೆ ನೋಟು, ಪುಸ್ತಕ, ಇತರೆ ಕಲಿಕೆ ಸಾಮಗ್ರಿಗಳು ವಿತರಣೆ

ಲೋಕದರ್ಶನ ವರದಿ

ಬಳ್ಳಾರಿ 21: ತಾಲೂಕ ಕಪಗಲ್ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸಂಗನಕಲ್ ಎಸ್ಸಿ ಕಾಲೋನಿಯ ಸರ್ಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ  ಒಟ್ಟು-320 ಮಕ್ಕಳಿಗೆ  ಗುರುವಾರ ಬೆಳಿಗ್ಗೆ 10:00 ಗಂಟೆಗೆ ಬಳ್ಳಾರಿ ಸೇವಾ ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ್ ಬಫ್ನ ಹಾಗೂ ಕಾರ್ಯದರ್ಶಿ ಟಿ ಶ್ರೀನಿವಾಸ್ ರಾವ್ ವಾಸು ನೇತೃತ್ವದಲ್ಲಿ ಕಪ್ಪಗಲ್ಲು ಮತ್ತು ಸಂಗನಕಲ್ಲು  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ನೋಟು ಪುಸ್ತಕಗಳು ಬ್ಯಾಗ್ ಇತರೆ ಕಲಿಕೆ ಸಾಮಗ್ರಿಗಳು  ವಿತರಿಸಲಾಯಿತು.   

ಈ ಕಾರ್ಯಕ್ರಮದಲ್ಲಿ  ಕಪ್ಪಗಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷರು ಓಂಕಾರಪ್ಪ, ಉಪಾಧ್ಯಕ್ಷರು ಸಾವಿತ್ರಮ್ಮ ಬಸವರಾಜ್, ಬಳ್ಳಾರಿ ಸೇವಾ ಸಮಿತಿ ಗೌರವಾಧ್ಯಕ್ಷರು ಸತ್ಯನಾರಾಯಣರಾವ್, ಸದಸ್ಯರು  ಗೋವಿಂದರೆಡ್ಡಿ,ವಿ. ರಾಮಚಂದ್ರಪ್ಪ,  ಕಪ್ಪಗಲ್ಲು ಚಂದ್ರಶೇಖರ್ ಆಚಾರಿ, ಎಪಿಎಂಸಿ ರಾಮಾಂಜನೇಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಜಿಲ್ಲಾಧ್ಯಕ್ಷರು ಗಿರಿ ಯಾದವ್, ಕಪ್ಪಗಲ್ ಸರ್ಕಾರಿ ಶಾಲೆ ಮುಖ್ಯ ಗುರುಗಳು  ಟಿ ಮಲ್ಲಪ್ಪ, ಶಿವಕುಮಾರ್, ಸರಸ್ವತಿ, ಜ್ಯೋತಿ  ಸೇರಿದಂತೆ ಗ್ರಾಮ ಮುಖ್ಯಸ್ಥರು  ಹಾಗೂ ಸಂಗನಕಲ್ಲು  .ಎಸ್.ಸಿ. ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳು ವಿಜಯ್ ಕುಮಾರ್,  ಶಬ್ಬೀರ್ಸುಲ್ತಾನ್, ಸಗಾಯ್ಮೇರಿ, ಸಹನಾ   ಸೇರಿದಂತೆ ಶಾಲೆಯ ಉಪಾಧ್ಯಾಯರು ಸಿಬ್ಬಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು  ಇದ್ದರು 

ಸುದ್ದಿ ಓದಿ