ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಸರ್ ವಿತರಣೆ
ಹುನಗುಂದ 04: ಕೊರೊನಾ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಓಷಧಿ ವ್ಯಾಪಾರಸ್ಥರ ಸಂಘದ ತಾಲೂಕ ಘಟಕದ ವತಿಯಿಂದ ಮಾಸ್ಕ, ಸ್ಯಾನಿಟೈಸರ್ಗಳನ್ನು ವಿತರಿಸಲಾಯಿತು. ಪಿಎಸ್ಐ ಶರಣಬಸಪ್ಪ ಸಂಗಳದ,ಪ್ರೊಬಷನರಿ ಪಿಎಸ್ಐ ಅಶೋಕ.ಪಿ, ಓಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅನ್ನದಾನೇಶ್ವರ ಹಾದಿಮನಿ, ಮಹಾಂತೇಶ ಹಳ್ಳೂರ, ರಾಜಶೇಖರ ಚಿತ್ತರಗಿ, ಗೀರೀಶ ಕಂಕಣಮೇಲಿ, ಮುತ್ತು ಹಳ್ಳೂರ, ಮಹಾಂತೇಶ ಶಿವಪ್ಪಯ್ಯನಮಠ ಪೊಲೀಸ್ ಸಿಬ್ಬಂದಿ ಎಎಸ್ಐ ಎಸ್.ಬಿ.ಹೊಸಮನಿ, ಎಸ್.ಎಸ್.ಚಿಲಕಂತಿಮಠ, ಸಿ.ಟಿ.ಲಮಾಣಿ ಸೇರಿದಂತೆ ಅನೇಕರು ಇದ್ದರು.
ಪೊಟ್ಟಣ ವಿತರಣೆ: ಇಲ್ಲಿನ ಮಹಾಂತ ನಗರದ ಶಿವ-ಮಾರುತಿ ದೇವಸ್ಥಾನದ ಸ್ನೇಹ ಬಳಗದ ಯುವಕ ಬಳಗದವರು ಫಲಾವ್ದ ಆಹಾರ ಪೊಟ್ಟಣ ವಿತರಿಸಿದರು. ಕೊರೊನಾ ನಿಮಿತ್ಯ ಸ್ವಯಂ ಪ್ರೇರಣೆಯಿಂದ ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ತಿರುಗುವ ವಾಹನ ಚಾಲಕ ಮತ್ತು ಕ್ಲೀನರಗಳಿಗೆ ಆಹಾರ ಮತ್ತು ನೀರಿನ ಪೌಚ್ ವಿತರಿಸಲಾಯಿತು. ಇದೇ ವೇಳೆ ಬಿ.ಜಿ. ಸೋನಾರ, ಅಂಬು ಜೂಲಕಟ್ಟಿ, ಸರಕಾವಸ್, ಶೇಖರ ಬಡಿಗೇರ, ಸುರೇಶ ಪತ್ತಾರ, ವೀರೇಶ ಕುರ್ತಕೋಟಿ, ಇಮ್ಮಣ್ಣಿ ಧನ್ನೂರ ಸೇರಿದಂತೆ ಇತರರು ಇದ್ದರು.