ಧರ್ಮಸ್ಥಳ ಯೋಜನೆಯಿಂದ ಬಡ ಜನರಿಗೆ ಕಿಟ್ ವಿತರಣೆ
ಬೈಲಹೊಂಗಲ 09: ಸಮಾಜದ ಏಳ್ಗೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ವಿಧಾಯಕ ಕಾರ್ಯಗಳಿಂದ ಜನ ಮನ್ನಣೆ ಪಡೆದಿದ್ದು ಕೊವಿಡ್ ಸಾಂಕ್ರಾಮಿಕ ರೋಗದ ಅಂಗವಾಗಿ ಲಾಕಡೌನ ಸಂದರ್ಭದ ಸಂಕಷ್ಟದಲ್ಲಿ ಬಡ ಜನರಿಗೆ ದಿನಸಿ ಕಿಟ್ಟ ವಿತರಿಸಿದ್ದು ಹೆಮ್ಮೆಯಾಗಿದೆ ಎಂದು ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ ಹೇಳಿದರು. ಅವರು ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಬಡ ಜನರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಸುಮಾರು ವರ್ಷಗಳಿಂದ ಈ ಭಾಗದಲ್ಲಿ ಸಂಸ್ಥೆಯು ಪ್ರತಿ ವರ್ಗಕ್ಕೂ ಉಪಯೋಗವಾಗುವಂತಹ ಯೋಜನೆಗಳನ್ನು ರೂಪಿಸಿ ಆ ಮೂಲಕ ಆಶಾದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ತಹಶೀಲ್ಧಾರ ಬಸವರಾಜ ನಾಗರಾಳ, ಈಶ್ವರ ಕೊಪ್ಪದ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮುತ್ನಾಳ, ವಿಜಯ ಪತ್ತಾರ, ತಾಲೂಕಾ ಯೋಜನಾಧಿಕಾರಿ ಪುರಸೋತ್ತಮ ಕೆ, ಮೇಲ್ವಚಾರಕಿ ಸರೋಜ ಪಟಗಾರ, ಸೇವಾ ಪ್ರತಿನಿಧಿಗಳಾದ ಸುವರ್ಣ ಅಬ್ಬಾಯಿ, ಲಕ್ಷ್ಮೀ ಶಿಂತ್ರಿ, ಗೀತಾ ಪಾಟೀಲ, ರಾಜೇಶ್ವರಿ ಈಟಿ, ನವಿನಾ ಮಹಮ್ಮದ ಹಾಗೂ ಒಕ್ಕೂಟದ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ ಅವರು ಸಸಿ ನಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೈಲಹೊಂಗಲದ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡಿಯಲ್ಲಿ ಬಡ ಜನರಿಗೆ ಕಿಟ್ ವಿತರಿಸಲಾಯಿತು