ಹಗರಿಬೊಮ್ಮನಹಳ್ಳಿ

ವಿವಿಧ ಸಮುದಾಯಗಳಿಗೆ ದಿನಸಿ ಕಿಟ್ ವಿತರಣೆ

ವಿವಿಧ ಸಮುದಾಯಗಳಿಗೆ ದಿನಸಿ ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ 29: ಪಟ್ಟಣದ ಕೊಟ್ಟೂರು ರಸ್ತೆಯಲ್ಲಿ ವಾಸವಿರುವ ಅಲೆಮಾರಿ,ಸಿಂಧೋಗಿ,ಅಕ್ಕಿ ಪಿಕ್ಕಿ ಸಮುದಯದ ಕುಟುಂಬಗಳಿಗೆ ಬ್ರೆಡ್ಸ್‌ ಬೆಂಗಳೂರು ಡಾನ್‌ಬಾಸ್ಕೋ ಸಮಾಜ ಸೇವಾ ಸಂಸ್ಥೆ ಹೊಸಪೇಟೆ ಹಾಗೂ ತಾಲೂಕಾಡಳಿತದ ಸಂಯುಕ್ತಾಶ್ರಯದಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಿದರು. 

ತಹಶಿಲ್ದಾರ್ ಶರಣಮ್ಮ ಮಾತನಾಡಿ ಬ್ರೆಡ್ಸ್‌ ಬೆಂಗಳೂರು ಡಾನ್‌ಬಾಸ್ಕೋ ಸಮಾಜ ಸೇವಾ ಸಂಸ್ಥೆಯಿಂದ ಕರೋನಾ ಅಲೆಯ ಅಬ್ಬರಕ್ಕೆ ದುಸ್ತರಗೊಂಡ ಹಲವಾರು ಬಡ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ನೀಡುತ್ತಿರುವುದು ಶ್ಲಾಘನೀಯ, ಪ್ರಥಮವಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಅಕ್ಕಪಕ್ಕದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ,ಸ್ವಚ್ಛ ಸುಂದರ ಪರಿಸರದಿಂದ ಉತ್ತಮ ಆರೋಗ್ಯ,ಇದರ ಜೊತೆ ಮಾಸ್ಕ್‌,ಸಾಮಾಜಿಕ ಅಂತರದಿಂದ ಕಾಪಾಡುವುದುರ ಮುಖಾಂತರ ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವೆಂದರು. 

ನಿರ್ದೇಶಕ ಫಾದರ್ ಅನಂದ ಮಾತನಾಡಿ ನಮ್ಮ ಸಂಸ್ಥೆಯಿಂದ 100ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ನಿಡುತ್ತಿದ್ದೆವೆ,ಕರೋನಾ ವೈರಸ್‌ನ ಹಾವಳಿಯಿಂದ ದುಡಿಮೆಗೆ ಕತ್ತರಿ ಹಾಕಿದ್ದು,ಜೀವನ ದುಸ್ತರವಾಗಿದೆ  ಕರೋನಾ ಹರಡುವಿಕೆ ತೀವ್ರವಾಗಿದ್ದು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ತಿಳಿಸಿದರು. 

ಈ ಸಂಧರ್ಭದಲ್ಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕ ಪರಮೇಶ್ವರ, ಡಾನ್‌ಬಾಸ್ಕೋ ಸಂಸ್ಥೆಯ ಸಿಬ್ಬಂದಿ ಬ್ರದರ್ ಸಂದೇಶ್, ಶರಣಪ್ಪ, ಬಾಣದ ನಾಗರಜ್, ಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ