ಪೌರ ಕಾರ್ಮಿಕಕರಿಗೆ ದಿನಸಿ ಕಿಟ್ ವಿತರಣೆ
ಶಿಗ್ಗಾವಿ 20: ಕೊರೊನಾ ಮಹಾಮಾರಿ ವೈರಸ್ ತಡೆಗಟ್ಟಲು ಸಕರ್ಾರ ಕೈಗೊಂಡ ಲಾಕ್ಡೌನ್ನಿಂದಾಗಿ ಆಟೋ ಚಾಲಕರ ಹಾಗೂ ಪುರಸಭೆ ಪೌರ ಕಾಮರ್ಿಕರ ಕುಟುಂಬಗಳು ಸಂಖಷ್ಟಕ್ಕೆ ಸಿಲುಕಿದ್ದು, ಅವರಿಗೆ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಆಶ್ರಯದಲ್ಲಿ ದಿನಸಿ ಕಿಟ್ಗಳನ್ನು ಜಿಲ್ಲಾದ್ಯಂತ ವಿತರಿಸಲಾಗುತ್ತಿದೆ ಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ಬಂಕಾಪೂರ ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಪೌರ ಕಾಮರ್ಿಕರಿಗೆ ಹಾಗೂ ಆಟೋ ಚಾಲಕರಿಗೆ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು, ಕಳೆದ ವರ್ಷ ನಾನು ಕೂಡಾ ಕೊರೊನಾ ಸೋಂಕಿಗೆ ಒಳಗಾಗಿ ಸಾವು ಬದುಕಿನ ಮಧ್ಯ ಹೋರಾಡಿ ಪುನರ್ಜನ್ಮ ಪಡೆದು ಬಂದಿರುವೆ. ನಾನು ಸೋಂಕಿಗೆ ಒಳಗಾದಾಗ ವೈದ್ಯರು, ನರ್ಸ ನೀಡಿದ ಸೇವೆ ಅವಿಸ್ಮರಣೀಯ ಸೇವೆಗಳಲ್ಲೋಂದಾಗಿರುವುದನ್ನು ಮನಗಂಡು ಕಳೆದ ಒಂದು ವರ್ಷಗಳಿಂದ ನಮ್ಮ ತಂದೆಯಯವರ ಹೆಸರಿನಲ್ಲಿ ರಚಿಸಲಾದ ಸಿ.ಬಿ.ಯಲಿಗಾರ ಟ್ರಸ್ಟ್ ಮೂಲಕ ಕೊರೊನಾ ವಾರಿಯರ್ಸ್ ಗಳಿಂದ ಹಿಡಿದು ಬಡ ಬಗ್ಗ ಕೂಲಿ ಕಾಮರ್ಿಕರಿಗೆ ನನ್ನ ಕೈಲಾದ ಸಹಾಯ ಸಹಕಾರ ನೀಡುತ್ತಿದ್ದೇನೆ. ಈ ನನ್ನ ಸೇವೆ ಇತರ ಉಳ್ಳವರಿಗೆ ಪ್ರೇರಣೆ ಯಾಗಲಿ ಎಂಬುದೆ ನನ್ನ ಆಶಯವಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಮಾತನಾಡಿ, ಶಶಿಧರ ಯಲಿಗಾರ ರವರು ಯಾವುದೇ ರಾಜಕೀಯ ಪಕ್ಷಕ್ಕೆ ಸಿಮಿತವಾದ ವ್ಯಕ್ತಿ ಅವರಲ್ಲ. ಯಾವುದೇ ಆಶೆ ಆಮಿಶಗಳಿಲ್ಲದೇ ಅವರು ಬಡವ, ದೀನದಲಿತರಿಗೆ ಮಾಡುತ್ತಿರುವ ಸೇವೆ ನಿಷ್ಕಲ್ಮಶ ಸೇವೆಗಳಲ್ಲೋಂದಾಗಿದೆ. ಹಾಗಾಗಿ ಅವರು ಜಿಲ್ಲೆಯ ಜನರ ಮನದಲ್ಲಿ ಶಾಸ್ವತವಾಗಿ ನೇಲಸಿದವರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎರಡನೂರಕ್ಕೀಂತಲೂ ಅಧಿಕ ಕಿಟ್ಗಳನ್ನು ವಿತರಿಸಲಾಯಿತು. ಸಮಸ್ತ ಪಟ್ಟಣದ ಜನತೆ ಪರವಾಗಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಶಿಧರ ಯಲಿಗಾರರವರನ್ನು ಸನ್ಮಾನಿಸಲಾಯಿತು.ರೈತ ಧ್ವನಿ ಟಿ.ವಿ.ಚಾಲನ್ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕುರಗೋಡಿ, ಜೆ.ಡಿ.ಎಸ್. ರಾಜ್ಯ ಕಾರ್ಯದಶರ್ಿ ರವಿ ಕುರಗೋಡಿ, ಕನರ್ಾಟಕ ಪತ್ರಕರ್ತ ಸಂಘದ ತಾಲೂಕಾ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ಆಟೋ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಪೌರ ಕಾಮರ್ಿಕ ಸಂಘದ ಅಧ್ಯಕ್ಷ ನಿಂಗಪ್ಪ ಹೊಸಮನಿ, ಹೊಸೂರ ಯತ್ನಳ್ಳಿ ಗ್ರಾ.ಪಂ.ಸದಸ್ಯ ನಾಗರಾಜ ಸೂರಗೋಂಡ ಸೇರಿದಂತೆ ನೂರಾರು ಆಟೋ ಚಾಲಕರು, ಪೌರ ಕಾಮರ್ಿಕರು ಉಪಸ್ಥಿತರಿದ್ದರು. ಎಂ.ವಿ.ಗಾಡದ ನಿರೂಪಿಸಿದರು