ಸೋಂಕಿತರಿಗೆ ಹಣ್ಣು, ನೀರು, ಬಿಸ್ಕೇಟ್ ವಿತರಣೆ
ಹಗರಿಬೊಮ್ಮನಹಳ್ಳಿ 02 : ತಾಲೂಕಿನ ವರಲಹಳ್ಳಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿನ ಸೊಂಕಿತರಿಗೆ ಹನ್ಸಿ ಗ್ರಾಮ ಪಂಚಯತ್ ಸದಸ್ಯ ವೀರೇಶ್ ಹಣ್ಣು,ಬಿಸ್ಕೇಟ್ ಮತ್ತು ನೀರಿನ ಬಾಟಲ್ ನೀಡಿದರು.
ಕೋವಿಡ್ ಕೇರ್ ಸೆಂಟರ್‌ನಲ್ಲಿ ತಹಶೀಲ್ದಾರ್ ಶರಣಮ್ಮ ಸೊಂಕಿತರಿಗೆ ನೀಡಿದ ಆಹಾರ ಸಾಮಾಗ್ರಿಗಳನ್ನು ಪಡೆದುಕೊಂಡು ಮಾತನಾಡಿ ತಾಲೂಕಿನಲ್ಲಿ ಸೊಂಕಿತರ ಸಹಾಯಕ್ಕೆ ಅಪಾರ ಕಾಳಜಿ ವಹಿಸಿ ಸೊಂಕಿತರು ಬೇಗ ಗುಣಮುಖರಾಗಲೆಂದು ಹತ್ತಾರು ದಾನಿಗಳು ಮುಂದಾಗಿದ್ದಾರೆ. ಇಂದು ಹನ್ಸಿ ಗ್ರಾಮ ಪಂಚಾಯತ್ ಸದಸ್ಯ ವೀರೇಶ್ ಸೊಂಕಿತರಿಗೆ ನೀಡುತ್ತಿರುವುದು ಸಂತಸದ ವಿಷಯ ಎಂದರು.
ಸದಸ್ಯ ವೀರೇಶ್ ಮಾತನಾಡಿ ಸೊಂಕಿಗೆ ಎದೆಗುಂದದೆ ಧೈರ್ಯ ದಿಂದರಬೇಕು, ಧೈರ್ಯವೇ ಮೊದಲ ಓಷಧವೆಂದರೆ ತಪ್ಪಿಲ್ಲ, ಧೃತಿಗೆಡದೆ ವೈದ್ಯರ ಸಲಹೆಯನ್ನು ಚಾಚು ತಪ್ಪದೆ ಪಾಲಿಸಬೇಕು,ಸೊಂಕಿತರಿಗೆ ಅಲ್ಪ ಮಟ್ಟಗಿ ಸಹಾಯ ಮಾಡಬೇಕೆನ್ನುವ ಸದುದ್ದೇಶದಿಂದ ಇಂದು ನೀರಿನ ಬಾಟಲ್,ಬಿಸ್ಕೇಟ್,ಹಣ್ಣುಗಳನ್ನು ನೀಡಿದ್ದೆನೆ ಎಂದರು.
ಈ ಸಂಧರ್ಭದಲ್ಲಿ ತೋಟಗಾರಿಕಾ ಇಲಾಖೆ ನಿರ್ದೇಶಕ ಪರಮೇಶ್ವರ,ಟಿಹೆಚ್‌ಒ ಶಿವರಜ್,ಅಕ್ಕಿ ತೋಟೇಶ್,ಒವಾಡಿ ಹನುಮಂತಪ್ಪ ಸೇರಿದಂತೆ ಇನ್ನು ಮುಂತಾದವರು ಇದ್ದರು.