ಹಣ್ಣು ಹಂಪಲ ವಿತರಣೆ
ಬಳ್ಳಾರಿ 10: ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ದಿ. 10ರಂದು ಬೆಳಿಗ್ಗೆ 10.00 ಗಂಟೆಗೆ ನಾಡ ಸೇನಾನಿ, ಕನ್ನಡ ಭೀಷ್ಮ ಲಕ್ಷಾಂತರ ಕನ್ನಡದ ಕಲಿಗಳಿಗೆ ಕನ್ನಡದ ದೀಕ್ಷೆಯನ್ನು ನೀಡಿದ ಭುವನೇಶ್ವರಿಯವರ ಪುತ್ರರು ನಮ್ಮೆಲ್ಲರ ಪ್ರೀತಿಯ ನಾಯಕ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರವರ ಜನ್ಮದಿನವನ್ನು ಬಳ್ಳಾರಿ ನಗರದಲ್ಲಿ ಮಹಾಪೌರರು ರಾಜೇಶ್ವರಿ ಸುಬ್ಬರಾಯುಡು ಮತ್ತು ಕಸಾಪ ಅಧ್ಯಕ್ಷ ನಿಷ್ಠಿರುದ್ರಪ್ಪ ಮತ್ತು ಮಹಾನಗರ ಪಾಲಿಕೆಯ ಸದಸ್ಯ ಮತ್ತು ಪ್ರಧಾನ ಧರ್ಮಕರ್ತ ಪಿ.ಗಾದೆಪ್ಪ, ಇವರ ನೇತೃತ್ವದಲ್ಲಿ ಹಣ್ಣು ಮತ್ತು ಬ್ರೆಡ್ಗಳನ್ನು ಓಪಿಡಿ ಹತ್ತಿರ ಇರುವ ಅನಾಥ ಆಶ್ರಮದಲ್ಲಿ ಹಂಚುವ ಮೂಲಕ ಅರ್ಥಗಭರ್ಿತವಾಗಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಿ ಎಲ್ಲಾ ಬುದ್ದಿಮಾಂಧ್ಯರಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.
ಸನ್ಮಾನ ಕಾರ್ಯಕ್ರಮವನ್ನು ಮಹಾಪೌರರು ರಾಜೇಶ್ವರಿ ಸುಬ್ಬರಾಯುಡು ಮತ್ತು ಕ.ಸಾ.ಪ. ಅಧ್ಯಕ್ಷ ನಿಷ್ಠಿರುದ್ರಪ್ಪ ಮತ್ತು ಮಹಾನಗರ ಪಾಲಿಕೆ ಪಾಲಿಕೆ ಸದಸ್ಯ ಪಿ.ಗಾದೆಪ್ಪ ಇವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಕರವೇ ಕುಟುಂಬದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಕನ್ನಡದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜನ್ಮದಿನದ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಉಪಾಧ್ಯಕ್ಷರಾದ ಶಿವಕುಮಾರ್, ತಾಲ್ಲುಕು ಅಧ್ಯಕ್ಷರಾದ ಅಂಗಡಿ ಶಂಕರ್, ಆತ್ಮನಂದರೆಡ್ಡಿ, ಮೋಕಾ ಪೊಂಪನಗೌಡ, ಶಶಿಕುಮಾರ್ ಬೆಟ್ಟಪ್ಪ, ವಿರೇಶ್ ತೋಟದ, ವಿಶ್ವನಾಥ, ಮಂಜುನಾಥ ಬೆಳ್ಳಿಗಾರ್, ಗಂಗಾವತಿ ವಿರೇಶ್, ಸಿಂಧಿಗೇರಿ ಗೋವಿಂದ, ಶಿವಕುಮಾರ್, ರಾಜೇಶ್ ಶಂಕರಬಂಡೆ, ಕುಮಾರ್, ಶಿವಕುಮಾರ್ ಕುಡತಿನಿ, ಮಸ್ಕಿ ಮಹಾಂತೇಶ್, ಮಲ್ಲಿಕಾಜರ್ುನ ಚಾನಾಳ್ ಮುಂತಾದವರು ಉಪಸ್ಥಿತರಿದ್ದರು