ಹಗರಿಬೊಮ್ಮನಹಳ್ಳಿ

ಆಟೋ ಚಾಲಕರಿಗೆ ಆಹಾರ ಕಿಟ್ ವಿತರಣೆ

ಆಟೋ ಚಾಲಕರಿಗೆ ಆಹಾರ ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ 18 : ತಾಲೂಕಿನ ತಂಬ್ರಹಳ್ಳಿ ಗ್ರಾಮದ ಆಟೋ ಚಾಲಕರಿಗೆ ಮಾಜಿ ಶಾಸಕ ನೇಮರಾಜ್ ನಾಯ್ಕ್‌ ಆಹಾರ ಕಿಟ್‌ಗಳನ್ನು ವಿತರಿಸಿದರು. 

ಕರೋನಾ ಅಲೆಯ ಅಬ್ಬರಕ್ಕೆ ಜನ ಜೀವನ ದುಸ್ತರವಾಗಿದ್ದು, ಮನ ಕಲಕುವ ಘಟನೆಗಳು ನಡೆದಿವೆ ಇಂತಹ ಸಂದಿಘ್ದ ಪರಿಸ್ಥಿತಿಯಲ್ಲಿ ಅಟೊ ಚಾಲಕರಿಗೆ ಆಹಾರ ಕಿಟ್‌ಗಳನ್ನು ನೀಡಿ ಅವರು ಮಾತನಾಡಿ ಕೋವೀಡ್ ಲಸಿಕೆಯ ಕೊರತೆಯಿಲ್ಲ, ಈಗಾಗಲೇ 73ಸಾವಿರಕ್ಕೂ ಹೆಚ್ಚು ಜನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದರು. 

ಕೊರೊನಾ ಲಸಿಕೆಯನ್ನು ಸರಕಾರ ಸಮರ​‍್ಕವಾಗಿ ವಿತರಣೆ ಮಾಡುತ್ತಿದೆ. 18ವರ್ಷ ಮೇಲ್ಪಟ್ಟವರಿಗೆ ತಾಲೂಕಿನಲ್ಲಿ 4ಸಾವಿರಕ್ಕೂ ಹೆಚ್ಚು ಲಸಿಕೆ ಹಾಕಲಾಗಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಯುವ ಮೋರ್ಚಾದವರು *ಸೇವಾಯೇ ಸಂಘಟನ್* ಎಂಬುವ ಕಲ್ಪನೆ ಇಟ್ಟುಕೊಂಡು ಬೂತ್ ಮಟ್ಟದಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಮೊಬೈಲೈಜ್ ಮಾಡುತ್ತಿದ್ದಾರೆ. ತಾಲೂಕಿನ ತಹಶೀಲ್ದಾರರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ನಮ್ಮ ಯುವಮೋರ್ಚಾದವರು ಜಾಗೃತಿ ಮೂಡಿಸುತ್ತಿರುವುದನ್ನು ಟೀಕಿಸುತ್ತಿರುವುದು ಸಮಂಜಸವಲ್ಲ. ನಮ್ಮ ಯುವಕರು ಬಿಜೆಪಿ ಬ್ಯಾನರ್ ಅಡಿ ಲಸಿಕೆ ಹಾಕಿಸುತ್ತಿಲ್ಲ ಎಂಬುದನ್ನು ತಹಶೀಲ್ದಾರರು ತಿಳಿಯಬೇಕಿದೆ. ಕಾಂಗ್ರೆಸ್‌ನವರು ಲಸಿಕೆ ಹಾಕಿಸುವಂತೆ ಜಾಗೃತಿ ಮೂಡಿಸಲಿ ತಪ್ಪಲ್ಲ. ತಹಶೀಲ್ದಾರ್ ಶರಣಮ್ಮ ಕಾಂಗ್ರೆಸ್ ಶಾಸಕರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ತಹಶೀಲ್ದಾರರು ಹಿಂದೆ ಕೆಲಸ ಮಾಡುತ್ತಿದ್ದ ರೋಣ ಮತ್ತು ಬ್ಯಾಡಗಿಯಲ್ಲಿ ರೈತರ ಪರಿಹಾರದ ಹಣ ಲಪಾಟಾಯಿಸಿದ್ದರಿಂದ ಇವರ ವಿರುದ್ದ 420ಕೇಸ್ ದಾಖಲಾಗಿದೆ. ನಮ್ಮ ಯುವ ಬಿಜೆಪಿ ಮೋರ್ಚಾದವರನ್ನ ಪ್ರಶ್ನಿಸುವ ನೈತಿಕತೆ ಇವರಿಗಿಲ್ಲ. ಪಟ್ಟಣದ ಹಳೆವೂರಿನಲ್ಲಿ ನಮ್ಮ ಕಾರ್ಯಕರ್ತರೇ ಲಸಿಕೆ ಹಾಕಿಸಿಕೊಳ್ಳಿ ಪಟ್ಟಣದ ಕಾಲೋನಿಗಳಲ್ಲಿ ಡಂಗೂರ ಹಾಕಿಸಿ ಜಾಗೃತಿ ಮೂಡಿಸಿದ್ದಾರೆ.  

ಅಭಿವ್ದೃ ಕಡೆಗಣನೆ: ಸರಕಾರ ಅಭಿವ್ದೃಗೆ ಸಾಕಷ್ಟು ಹಣ ನೀಡಿದೆ ಇಲ್ಲಿನ ಜನಪ್ರತಿನಿಗಳು ಬಳಕೆ ಮಾಡಿಕೊಳ್ಳುತ್ತಿಲ್ಲ. ಎಷ್ಟೋ ಕಡೆ ಹಳ್ಳಿಗಳಿಗೆ ಸಮರ​‍್ಕವಾದ ರಸ್ತೆಯಿಲ್ಲ, ಶಾಸಕರು ತಮ್ಮ ಸ್ವಂತ ತೋಟದ ಮನೆಗೆ ಕೋಟಿರೂ ವೆಚ್ಚದ ರಸ್ತೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಅಭಿವ್ದೃ ಹಣವನ್ನು ತನ್ನ ತೋಟದ ಮನೆಗೆ ರಸ್ತೆ ಹಾಕಿಸಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ. ನಿಮ್ಮ ಸ್ವಂತ ಹಣದಲ್ಲಿ ನಿಮ್ಮ ತೋಟದ ಮನೆಗೆ ರಸ್ತೆ ಮಾಡಿಕೊಳ್ಳಿ ಎಂದು ಶಾಸಕ ಭೀಮನಾಯ್ಕ ವಿರುದ್ದ ಗುಡುಗಿದರು. ಇವರು ತಮ್ಮ ವೈಯಕ್ತಿಕ ಹಣದಲ್ಲಿ ಆಸ್ಪತ್ರೆಗೆ ಯಾವುದೇ ಬೆಡ್‌ಗಳನ್ನು ಕೊಡಿಸಿಲ್ಲ,  ಎಸ್‌ಎಲ್‌ಆರ್‌ನವರು ಕೊಟ್ಟಿರುವ ಬೆಡ್‌ಗಳನ್ನು ನಾನು ಕೊಟ್ಟಿರುವೆ ಎಂದು ಸುಳ್ಳು ಹೇಳುತ್ತಿದ್ದಾರೆ. ತಂಬ್ರಹಳ್ಳಿ ಚಿಲುಗೋಡು ಗ್ರಾಮದ ರೈತರ ಹೊಲಗಳಿಗೆ ನೀರುಣಿಸುವ ಕುದುರೆ ಕಾಲುವೆ ಯೋಜನೆಗೆ ಬಂದ ಅನುದಾನ ಶಾಸಕರ ಕಮಿಷನ್ ಆಸೆಯಿಂದಾಗಿ ವಾಪಾಸು ಹೋಗಿದೆ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ,ಕಮಿಷನ್ ಆಸೆಯಿಂದ ನೀರಾವರಿ ಯೋಜನೆ ಸ್ಥಗಿತಗೊಳ್ಳುವಂತಾಗಿದೆ. ಇಂತಹ ಶಾಸಕನಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ. ತಾಲೂಕಿನ 3500ಕಿಟ್‌ಗಳನ್ನು ಅಟೋ ಚಾಲಕರಿಗೆ ವಿತರಿಸಲಾಗುತ್ತಿದೆ. ಎಲ್ಲಾ ಬಿಜೆಪಿ ಕಾರ್ಯಕರ್ತರು ಸೇರಿ ಕಿಟ್‌ಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.  

ವೈರಸ್‌ನಿಂದಾಗಿ ಗ್ರಾಮದ ಮ್ಯಗಳಮನಿ ಬಸವರಾಜಪ್ಪನವರ ಮನೆಯೊಂದರಲ್ಲಿ ಮೂರು ಜನ ಮೃತಪಟ್ಟಿದ್ದರಿಂದ ಅವರ ಮನೆಗೆ ಬೇಟೀನೀಡಿ ಸಾಂತ್ವನ ಹೇಳಿದರು. ಈ ವೇಳೆ ಜಿ.ಪಂ.ಸದಸ್ಯೆ ಶಾರದಮ್ಮ ಶೇಖರ​‍್ಪ, ಗ್ರಾ.ಪಂ.ಸದಸ್ಯರಾದ ಮಡಿವಾಳ ಮಂಜುನಾಥ(ಹನಿ), ಸಂಡೂರು ಮೆಹಬೂಬ್‌ಬಾಷ, ಸಿದ್ದಾರೆಡ್ಡಿ, ಬಿಜೆಪಿ ಮುಖಂಡರಾದ ಭದ್ರವಾಡಿ ಚಂದ್ರಶೇಖರ, ಕೆ.ರೋಹಿತ್, ಎಸ್‌.ಎಂ.ಪ್ರಕಾಶ, ಗಂಗಾಧರಗೌಡ, ಸೊಬಟಿ ಹರೀಶ್, ಮೋರಿಗೇರಿ ವಿಶ್ವನಾಥ, ಕಡ್ಡಿ ಕೊಟ್ರೇಶ, ಕಿತ್ನೂರು ಶಿವಕುಮಾರ, ಮಡಿವಾಳರ ಆನಂದ, ಬಿ.ನಿಂಗರಾಜ, ಪರಮೇಶ್ವರ​‍್ಪ, ಬಾಳಿಹಣ್ಣಿ ಚನ್ನಪ್ಪ, ನರೇಗಲ್ ಕೊಟ್ರೇಶ, ಗಡಿಹಳ್ಳಿ ಪ್ರವೀಣ, ಹನಸಿ ರಂಗನಾಥ, ರಾಜು ಪಾಟೀಲ್, ಬಾಗಳಿ ವೆಂಕಟೇಶ, ಆನೇಕಲ್ ಕೊಟ್ರೇಶ, ಸಿದ್ದರಾಜು ಇತರರಿದ್ದರು. 


ಸುದ್ದಿ ಓದಿ