ಬಳ್ಳಾರಿ

ವರ್ಲ್ಡ್‌ ವಿಷನ್ ವತಿಯಿಂದ ಆಹಾರ ಕಿಟ್ ವಿತರಣೆ

ವರ್ಲ್ಡ್‌ ವಿಷನ್ ವತಿಯಿಂದ ಆಹಾರ ಕಿಟ್ ವಿತರಣೆ

ಬಳ್ಳಾರಿ 19: ವರ್ಲ್ಡ್‌ ವಿಷನ್ ಇಂಡಿಯಾ ವತಿಯಿಂದ ಬಳ್ಳಾರಿ ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಆಹಾರ ಧಾನ್ಯಗಳ ವಿತರಣೆ ಮಾಡಲಾಯಿತು. 

ಗ್ರಾಮೀಣ ಭಾಗದ ಹೊಸ ಮೋಕಾ ಗ್ರಾಮದ ವ್ಯಾಪ್ತಿಯಲ್ಲಿ ಮತ್ತು ಬಳ್ಳಾರಿಯ ಇಂದಿರಾ ನಗರದಲ್ಲಿ 6 ಲೀಟರ್ ಅಡಿಗೆ ಎಣ್ಣೆ, 5 ಕೆ.ಜಿ ಗೋಧಿ ಹಿಟ್ಟು, 6 ಕೆ.ಜಿ ತೋಗರಿಬೇಳೆ, 6ಕೆ.ಜಿ ಜೋಳ ಒಳಗೊಂಡ ಆಹಾರ ಕಿಟ್ಟನ್ನು 27 ಹಳ್ಳಿಗಳಲ್ಲಿರುವ ಸುಮಾರು 168 ಬಡ ಹಾಗೂ ದುರ್ಬಲ ಕುಟುಂಬಗಳಿಗೆ ಗುರುವಾರ ಮತ್ತು ಶುಕ್ರವಾರ ವಿತರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ವರ್ಲ್ಡ್‌ ವಿಷನ್ ಇಂಡಿಯಾ ವ್ಯವಸ್ಥಾಪಕರಾದ ಪ್ರೇಮಲತಾ ಹಾಗೂ ಸಿಬ್ಬಂದಿ ಮತ್ತು ಇತರರು ಇದ್ದರು. 


ಸುದ್ದಿ ಓದಿ