ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಣೆ
ಬಳ್ಳಾರಿ 10: ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಸೋಮವಾರ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಕೋವಿಡ್ ಹಿನ್ನಲೆಯಲ್ಲಿ ಕೆಲಸವಿಲ್ಲದೇ ದುಡಿಯುವ ಕಾರ್ಮಿಕ ವರ್ಗವು ಸಂಕಷ್ಟದಲ್ಲಿರುವುದನ್ನು ಕಂಡು ಸರ್ಕಾರದಿಂದ ಹಾಗೂ ಶಾಸಕರಿಂದ ಸಿರುಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಿಸಿದರು.
5.ಕೆ.ಜಿ ಅಕ್ಕಿ, ಬೇಳೆ, ಗೋದಿಹಿಟ್ಟು, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು, ಕಾರ ಹಾಗೂ ಮಸಾಲೆ ಪದಾರ್ಥಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಇಲಾಖೆಯಿಂದ ಹಲವಾರು ಸೌಲಭ್ಯಗಳಿದ್ದು ಎಲ್ಲಾ ಕಟ್ಟಡ ಕಾರ್ಮಿಕರು ಪಡೆದುಕೊಳ್ಳಿ, ನಿಮ್ಮ ಜೀವನ ಸುಧಾರಣೆಗೆ ಸರ್ಕಾರದ ನೆರವು ಸದಾಕಾಲ ಹೀಗೆ ಇರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ತಾಫ್ ಕಮಲ್ ಅಹ್ಮದ್, ಕಾರ್ಮಿಕ ನೀರೀಕ್ಷಕ ಸಿ.ಎನ್ ರಾಜೇಶ, ಕಾರ್ಮಿಕ ಇಲಾಖೆ ಕಾರ್ಯನಿರ್ವಾಹಕರಾದ ದಾದಕಲಂದರ್, ಹನುಮಂತಪ್ಪ, ಮುಖಂಡರಾದ ಶಾಂತ ಸ್ವಾಮಿ, ಆರ್.ಸಿ.ಪಂಪನಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿ.ಸೋಮಪ್ಪ, ಗ್ರಾಮದ ಹಿರಿಯ ಮುಖಂಡರಾದ ಆರ್ ಟಿ ಆದಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಆರ್.ಟಿ.ಮಾದಣ್ಣ, ಅಂಬಿಕಾ ಸಿದ್ದನಗೌಡ, ಗ್ರಾಮದ ಮುಖಂಡರಾದ ಕೆ.ಎಂ.ಗಂಗಾಧರ್, ನಾಗರಾಜ್ ದೇವಿ ಪುತ್ರ ಸೇರಿದಂತೆ ಇತರರು ಇದ್ದರು.
700ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು.