ಬಳ್ಳಾರಿ

ಆಹಾರ ಧಾನ್ಯಗಳ ಕಿಟ್ ವಿತರಣೆ

ಆಹಾರ ಧಾನ್ಯಗಳ ಕಿಟ್ ವಿತರಣೆ

ಬಳ್ಳಾರಿ 23: ಸನ್ಮಾರ್ಗ ಗೆಳೆಯರ ಬಳಗ ಮತ್ತು ಅಜೀಂ ಪ್ರೇಮಜೀ ಪೌಂಡೇಶನ್ ಬಳ್ಳಾರಿ ಇವರ ಸಹಯೋಗದಲ್ಲಿ ಕೋವಿಡ್‌ನಿಂದ ಮರಣಹೊಂದಿದ ಕಡು ಬಡ ಕುಟುಂಬಗಳಿಗೆ ಹಾಗೂ ದೇವದಾಸಿಯರಿಗೆ ಒಂದು ತಿಂಗಳಿಗೆ ಆಗುವಷ್ಟು  ಆಹಾರ ಧಾನ್ಯಗಳ ಕಿಟಗಳನ್ನು ಕಪ್ಪಗಲ್ ಸಿರಿವಾರ ಪಿಡಿ ಹಳ್ಳಿ ಮೋಕ ಶಿವಪುರ ಬರದನಳ್ಳಿ ಮಾಸದಿಪುರ ಗುಡುದುರು ಇವರಿಗೆ ವಿತರಣೆ ಮಾಡಿದರು. 

ಗ್ರಾಮೀಣ ಪಿಎಸ್‌ಐ ವೈ ಎಸ್ ಹನುಮಂತಪ್ಪ ಮಾತನಾಡಿ ಕೊರೊನಾ ರೋಗಕ್ಕೆ ಮದ್ದು ಎಂದರೆ ಎಚ್ಚರಿಕೆ. ಆದು  ಪ್ರತಿ ಒಬ್ಬರು ಕೂಡ ಎಚ್ಚರ ದಿಂದ ಇರಬೇಕು ನೀವು ಮೈ ಮರೆತರೆ ರೋಗ ನಿಮಗೆ ನಿಮ್ಮ ಕುಟುಂಬಕ್ಕೆ ನಿಮ್ಮ ಅಕ್ಕಪಕ್ಕದವರಿಗೆ ಜೊತೆಯಾಗುತ್ತೆ. ಸರ್ಕಾರದ ಕ್ರಮಗಳು ನಿಮ್ಮ ರಕ್ಷಣೆಗಾಗಿ  ಅದನ್ನು ನೀವು ಪಾಲಿಸಿ ರೋಗವನ್ನು ತಡೆಗಟ್ಟಿ ನಿಮ್ಮ ಜೊತಗೆ ನಾವು ಇದ್ದೇವೆ  ಎಂದರು.  

ಪಿಡಿ ಹಳ್ಳಿ ಪಿಎಸ್‌ಐ ಶಶಿಧರ ವೈ ತಿಮ್ಮಪ್ಪ ಈ ಬಾರಿ ಜಿಲ್ಲಾ ಆಡಳಿತ ಜೊತೆಗೆ ಹಲವಾರು ಸಂಘ-ಸಂಸ್ಥೆಗಳು ಕೈ ಜೋಡಿಸಿ ತಮ್ಮ ಕೈಲಾದ ಸಹಾಯವನ್ನು ಸ್ಮರಿಸಿ ಆ ನಿಟ್ಟಿನಲ್ಲಿ ಸನ್ಮಾರ್ಗ ವಿಶಿಷ್ಟ ರೀತಿಯಲ್ಲಿ ತನ್ನ ಸೇವೆಯನ್ನು ಮಾಡುತ್ತಿರುವುದು ಅಭಿನಂದನಿಯ ಎಂದರು. 

ಅಜೀಂ ಪ್ರೇಮಜೀ ಪೌಂಡೇಶನ್ ಗಿರಿಧರ ವೈದ್ಯೆ ವೈಷ್ಣವಿ ಮುಖ್ಯ ಗುರುಗಳಾದ ಮಹೆತಾಬ್ ಕೆಪಿ ಮಲ್ಲಿಕಾರ್ಜುನ ಗೌಡ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್ ಲೇಪಾಕ್ಷಿಗೌಡ ಸಿದ್ದು ವಣೆನೂರು ಇದ್ದರು. 


ಸುದ್ದಿ ಓದಿ