ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ ವಿತರಣೆ
ಬಳ್ಳಾರಿ 27: ಗೆದ್ದ ಕಾರ್ಪೊರೇಟ್ ಗಳು ಎಲ್ಲೋ ಸಮಯ ವ್ಯರ್ಥ ಮಾಡುತ್ತಿದ್ದರೆ, ನಮ್ಮ ಭಾರತೀಯ ಜನತಾ ಪಾರ್ಟಿಯ ಸೋತ ಅಭ್ಯರ್ಥಿಗಳು ಜನರ ಸೇವೆ ಮಾಡಲು ಶ್ರಮವಹಿಸುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು.
ಸಚಿವ ನಗರದ ದೇವಿನಗರ ಮುಖ್ಯ ರಸ್ತೆಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಹತ್ತಿರ ಮುಂಭಾಗದಲ್ಲಿ ಭಾನುವಾರ ಬಿಜೆಪಿ ಮುಖಂಡ ವಿ.ಅನೂಪ್ ಕುಮಾರ್ ಮತ್ತು ಭೀಮಲಿಂಗ ಅವರು ಆಯೋಜಿಸಿದ ಅಸಂಘಟಿತ ಕಾರ್ಮಿಕರಿಗೆ ಉಚಿತ ಇ ಶ್ರಮ ಕಾಡ್ ವಿತರಣೆ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು ಹಾಗೂ ಶಾಸಕ ಸೋಮಶೇಖರ ರೆಡ್ಡಿ ಅವರು ಚಾಲನೆ ನೀಡಿದರು. ಈ ವೇಳೆ 1000ಕ್ಕೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ಸಚಿವ ಶ್ರೀರಾಮುಲು ಅವರು ಸೋತ ಎಲ್ಲಾ ಅಭ್ಯರ್ಥಿಗಳು ಸೇರಿ ಈ ಪ್ರಧಾನ ಮಂತ್ರಿಯವರ ಮಹತ್ವಕಾಂಕ್ಷಿ ಯೋಜನೆಯಾದ ಇ-ಶ್ರಮ ಕಾರ್ಡ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಜಾತಿ, ಧರ್ಮದವರು ಈ ಕಾರ್ಡ್ನ ಪ್ರಯೋಜನವನ್ನು ಪಡೆಯಬೇಕು. ಇದರಿಂದ ಒಂದು ವೇಳೆ ಯಾರಿಗಾದರೂ ಅಪಘಾತವಾದ ಸಮಯದಲ್ಲಿ ಒಂದು ಲಕ್ಷ ಅಪಘಾತದಲ್ಲಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಎರಡು ಲಕ್ಷ ಹಣವನ್ನು ಈ ಕಾರ್ಡ್ನಿಂದ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಪ್ರಧಾನಿಯವರು ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರಿಗೂ ಅನುಕೂಲವಾಗಲಿ ಅಂತ ಇ-ಶ್ರಮ ಕಾರ್ಡ್ ನಂತಹ ಮಹತ್ತರ ಯೋಜನೆಯನ್ನು ಮಾಡಿದ್ದಾರೆ. ಹಾಗಾಗಿ ತಾವೇಲ್ಲರು ಜಾತಿ, ಮತ ಬಿಟ್ಟು ಒಂದಾಗಬೇಕು ಎಂದರು.
ರೂಪಾಂತರಿ ವೈರಸ್ ಓಮಿಕ್ರಾನ ಬಂದಿದೆ ಎಲ್ಲಾರೂ ಜಾಗರುಕತೆಯಿಂದ ಇರಬೇಕು ಎಂದರು. ನಮ್ಮ ಸರ್ಕಾರ ಯಾವುದೇ ಜಾತಿ ಮತ ನೋಡದೆ ಕೆಲಸ ಮಾಡುತ್ತಿದೆ. ಚುನಾವಣೆ ಬಂದ್ರೆ ಬಿಜೆಪಿ ಕಾಂಗ್ರೆಸ್ ಎಂದೂ ಹಿಂದೂ, ಮುಸ್ಲಿಂ ಅಂತ ನಮ್ಮನ್ನು ವಿಭಜಿಸಿ ಓಟು ಹಾಕುತ್ತೀರಿ. ಆದರೆ ನಾವು ಹಾಗೇ ಮಾಡದೆ ಎಲ್ಲರಿಗೂ ಒಂದೆ ರೀತಿ ನೋಡುತ್ತಿದ್ದಿವಿ ಎಂದರು
ಕೋವಿಡ್ ಸಂದರ್ಭದಲ್ಲಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿಯವರು 78 ಸಾವಿರ ಕಿಟ್ಗಳನ್ನು ನೀಡಿ ಬಡವರಿಗೆ ನೆರವಾಗಿದ್ದಾರೆ ಎಂದರು. ನಮ್ಮ ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 10ಕೆಜಿ ಅಕ್ಕಿ ನೀಡುತ್ತಿದ್ದಾರೆ ಎಂದರು.
ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇ ಶ್ರಮ ಕಾರ್ಡ್ ಮಾಡಿಸುವುದರಿಂದ ಸರ್ಕಾರಿ ಕೆಲಸ ಮಾಡಿದವರಿಗೆ ಯಾವ ರೀತಿ ಸೌಲಭ್ಯಗಳು ಸಿಗುತ್ತವೆ. ಅದೇ ರೀತಿ ಖಾಸಗಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಸಮಾಜಿಕ ಭದ್ರತೆ ಯೋಜನೆಗಳನ್ನು ಜಾರಿ ಮಾಡಿದ್ದು ಎಲ್ಲಾರು ಇವುಗಲ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಾರ್ಡಿನಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಪಡೆಯಲು ವಾರ್ಡಿನಲ್ಲಿನ ಜನಸಂಪರ್ಕ ಕಚೇರಿಗೆ ಭೇಟಿ ನೀಡಿ ಎಂದು ಕಿವಿಮಾತು ಹೇಳಿದರು.
ಪ್ರಸ್ತಾವಿಕ ಮಾತುಗಳನಾಡಿದ ಬಿಜೆಪಿ ಮುಖಂಡ ಅನೂಪ್ ಕುಮಾರ್ ಅವರು ವಾರ್ಡಿನಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿಗೆ ಇಶ್ರಮ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಕೋವಿಡ್ ಸಮಸ್ಯೆಯದಲ್ಲಿ ವಾರ್ಡಿನ ಜನರಿಗೆ ಲಸಿಕೆ ಹಾಕಿಸಿರುವುದು ಅಲ್ಲದೇ ವಾರ್ಡಿನಲ್ಲಿನ ಚರಂಡಿ ಇನ್ನು ಯಾರೂ ಲಸಿಕೆ ಪಡೆದಿಲ್ಲವೋ ಅವರೆಲ್ಲರೂ ಬೇಗ ಲಸಿಕೆ ಹಾಕಿಸಿಕೊಳ್ಳಿ. ಈಗ ಮತ್ತೆ ಹೊಸ
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷರಾದ ಪಾಲಣ್ಣ, ರಾಜಾಕೋ ಹಾಲು ಒಕ್ಕೂಟದ ನಿರ್ದೇ ಶಕರಾದ ವೀರಶೇಖರ ರೆಡ್ಡಿ, ಎಪಿಎಂಸಿ ಅಧ್ಯಕ್ಷರಾದ ಉಮೇಶ್, ಪಾಲಿಕೆ ಸದಸ್ಯರಾದ ಕೋನಂಕಿ ತಿಲಕ್, ಹನುಮಂತು ಗುಡಿಗಂಟೆ, ಬಿಜೆಪಿ ಮುಖಂಡರಾದ ಏ.ಕೆ ಬಸಪ್ಪ, ಉಜ್ವಲ ಶ್ರೀಧರ್ ಸೇರಿದಂತೆ ವಾರ್ಡಿನ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.