ಶಿಗ್ಗಾವ್

ಅಂಗನವಾಡಿ ಮಕ್ಕಳಿಗೆ ಅಂಕಲಿಪಿ ವಿತರಣೆ

ಅಂಗನವಾಡಿ ಮಕ್ಕಳಿಗೆ  ಅಂಕಲಿಪಿ ವಿತರಣೆ

ಲೋಕದರ್ಶನ ವರದಿ 

ಶಿಗ್ಗಾವಿ 01:  ಅಂಗನವಾಡಿಗಳಿಗೆ ಹೋಗುವ ಬಡಕುಟುಂಬದ ಮಕ್ಕಳು ಸಹ ಕಾನ್ವೆಂಟ್ ಶಾಲೆ  ಮಾದರಿಯ ಶಿಕ್ಷಣ ಪಡೆಯುವಂತಾಗಲಿ ಎಂಬ ಉದ್ದೇಶದಿಂದ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ವಿಶಿಷ್ಠ ಮಾದರಿಯ ಅಂಕಲಿಪಿಗಳನ್ನು ಮುದ್ರಿಸಿ ಶಿಗ್ಗಾವಿ-ಸವಣೂರ ತಾಲೂಕಿನ ಸುಮಾರು 11500 ಮಕ್ಕಳಿಗೆ ವಿತರಿಸುತ್ತಿದೆಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು. 

ತಾಲೂಕಿನ ದುಂಡಸಿ ಗ್ರಾಮದಗ್ರಾಮ ಪಂಚಾಯತ ಕಚೇರಿಯ ಸಭಾ ಕೊಠಡಿಯಲ್ಲಿ ದುಂಡಸಿ ಭಾಗದ ಅಂಗನವಾಡಿ ಮಕ್ಕಳಿಗೆ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ವತಿಯಿಂದ ಅಂಕಲಿಪಿ ವಿತರಿಸಿ ಅವರು ಮಾತನಾಡಿದರು. ಕಾನ್ವೆಂಟ್ ಶಾಲೆಯ ಸಂಸ್ಕೃತಿ ತಪ್ಪಿಸಿ ಮಕ್ಕಳು ಅಂಗನವಾಡಿಯತ್ತ ಗಮನ ಹರಿಸುವಂತೆ ಸರ್ಕಾರ ಗ್ರಾಮೀಣ ಭಾಗಗಳಲ್ಲಿನ ಅಂಗನವಾಡಿಗಳಲ್ಲಿ ಉತ್ತಮ ಶಿಕ್ಷಣ ದೊರಕುವಂತೆ ಮಾಡಬೇಕು. ಊಟ, ಪೌಷ್ಠಿಕ ಆಹಾರದಜತೆ ಮಕ್ಕಳ ಶೈಕ್ಷಣಿಕಅಭಿವೃದ್ಧಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಎಲ್ಲವನ್ನೂ ಸರ್ಕಾರವೇಕೊಡಲಿ ಎನ್ನುವ ಬದಲು ದಾನಿಗಳು ಸಹ ಅಂಗನವಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದೆ ಬರಬೇಕು. ಇದರಿಂದ ಸರ್ಕಾರದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. 

ನಾವು ಮಕ್ಕಳ ವಿದ್ಯಾಬ್ಯಾಸಕ್ಕೆ ಹಲವು ಬಗೆಯ ಉಚಿತ ವ್ಯವಸ್ಥೆಗಳನ್ನು ಮಾಡುತ್ತಿರುವುದು ಪ್ರಚಾರಕ್ಕಲ್ಲ. ಬದಲಿಗೆ ನಮ್ಮ ಕೆಲಸ ಬೇರೆಯವರಿಗೆ ಪ್ರೇರಣೆಯಾಗಿಅವರು ಮುಂದೆ ಬಂದು ತಮ್ಮ ಕೈಲಾದಷ್ಟು ಸಹಾಯ ಮಾಡಲಿ ಎನ್ನುವುದು ನಮ್ಮ ಉದ್ದೇಶವಾಗಿದೆ. ಮಕ್ಕಳ ಮನಸ್ಸಿನಲ್ಲಿರುವ ಬಡತನ ಹೋಗಲಾಡಿಸಲು ಎಲ್ಲರೂ ಕೈಜೋಡಿಸೋಣ ಎಂದರು. 

ಗ್ರಾಮ ಪಂಚಾಯತಅಧ್ಯಕ್ಷ ಬಸವಣ್ಣಯ್ಯ ಹಿರೆಮಠ ಮಾತನಾಡಿ, ಶಶಿಧರ ಯಲಿಗಾರ ಅವರು ಕಾರ್ಯ ವೈಖರಿಯನ್ನು ಜನಒಪ್ಪಿಕೊಂಡಿದ್ದಾರೆ. ಅವರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾಡುತ್ತಿರುವಉಚಿತ ಸಮಾಜಮುಖಿ ಕೆಲಸಗಳು ಶ್ಲಾಘನೀಯವಾಗಿದೆ ಎಂದರು. 

ಗ್ರಾ.ಪಂ ಸದಸ್ಯ ಮಹಮ್ಮದರಫೀಕ ಶಿರಗೊಡ, ಎಮ್‌.ಎಚ್‌. ಬುಕ್ಕಿಟಗಾರ, ನೀಲಪ್ಪ ಕೊಳಲ, ಖಾದರಗೌಸ್‌ಜಮಾದಾರ, ಮಲ್ಲಿಕಾರ್ಜುನ ಸುರಗೊಂಡ, ಬಸವರಾಜ ಕುರಗೋಡಿ, ಚನ್ನಬಸಪ್ಪ ಕೌದಿ, ನೀಲಕಂಠ ಹುಲಸೋಗಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ