ಬಳ್ಳಾರಿ

ಯುವಶಕ್ತಿಯಿಂದ ಅನಾಥಾಶ್ರಮಕ್ಕೆ ಬೆಡ್‌ಶೀಟ್ ವಿತರಣೆ

ಯುವಶಕ್ತಿಯಿಂದ ಅನಾಥಾಶ್ರಮಕ್ಕೆ ಬೆಡ್‌ಶೀಟ್ ವಿತರಣೆ


ಬಳ್ಳಾರಿ21: ಕರ್ನಾಟಕ ರಕ್ಷಣ ವೇದಿಕೆ ಯುವಶಕ್ತಿವತಿಯಿಂದ ಅನಾಥಶ್ರಾಮದಲ್ಲಿರುವ ಸುಮಾರುಲ 48 ಜನ ಮಕ್ಕಳಿಗೆ ಬೆಡ್‌ಶೀಟ್‌ಗಳನ್ನು ವಿತರಿಸಲಾಗಿದೆ ಎಂದು ಕ.ರ.ವೇ ಯವಶಕ್ತಿಯ ಜಿಲ್ಲಾ ಅಧ್ಯಕ್ಷರಾದ ಕೆ ವೆಂಕಯ್ಯ ಮಡಿಯಾಳ ಇವರು ತಿಳಿಸಿರುತ್ತಾರೆ. ಛಳಿಗಾಲವಾದ್ದರಿಂದ ಇತ್ತಿಚಿನ ದಿನಗಳಲ್ಲಿ ವಿಪರೀತ ಚಳಿಯಿರುವುದರಿಂದ ಮಕ್ಕಳಿಗೆ ನಿದ್ರೆ ಮಾಡಲು ತೊಂದರೆಯಾಗುತ್ತಿದೆ ಕಾರಣ ಛಳಿಯಿಂದ ಅವರಿಗೆ ರಕ್ಷಣೆಪಡೆದುಕೊಳ್ಳುವುದಕ್ಕೋಸ್ಕರ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಆಶ್ರಮಕ್ಕೆ ನೀಡಿರುತ್ತಾರೆ.  

ಕರ್ನಾಟಕ ರಕ್ಷಣಾ ವೇದಿಕೆ ಯುವ ಶಕ್ತಿಯ ರಾಜ್ಯಾಧ್ಯಕ್ಷರಾದ ಆರ್, ವಿಜಯಕುಮಾರ್ ರವರ ಆದೇಶದ ಮೇರೆಗೆ ಯುವ ಘಟಕ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಇದರ ನಿಮಿತ್ತ ಯುವ ಘಟಕದ ಪದಾಧಿಕಾರಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ಸೇರಿಕೊಂಡು ಬೆಡ್‌ಶೀಟ್ ವಿತರಿಸಲಾಯಿತು.  

ಇದೇ ತಿಂಗಳ 28ರಂದು ಪ್ರತಿ ದಿನ ರಾತ್ರಿ ಫುಟ್‌ಬಾತ್ ಮೇಲೆ ಮಲಗುವ ಎಲ್ಲಾ ಅನಾಥರು, ವೃದ್ಧರಿಗೆ ಸಹ ಬೆಡ್‌ಶೀಟುಗಳನ್ನು ವಿತರಿಸಲಾಗುವುದೆನೆಂದರೆ,  

ಕರವೇ ಯುವಶಕ್ತಿಯ ಯುವ ಘಟಕದ ಅಧ್ಯಕ್ಷ ಬಿ ಮಹೇಶ್, ಕಾರ್ಮಿಕ ಘಟಕದ ಅಧ್ಯಕ್ಷ ರಾಮಾಂಜಿನಿ, ವಿದ್ಯಾರ್ಥಿ ಘಟಕದ ಎಂ ಶಶಿಧರ್, ಅಟೋ ಚಾಲಕರ ಅಧ್ಯಕ್ಷ ಷಣ್ಮುಖಪ್ಪ, ಮತ್ತು ಜಿಲ್ಲಾ ಪದಾಧಿಕಾರಿಗಳಾದ ಬಿ ನಾಗರಾಜು, ಭಿಮೇಶ್, ಬಿ ದುರುಗಣ್ಣ, ಸುಂಕಣ್ಣ, ಟಿ ನಾಗರಾಜ್, ಆನಂದ್, ಹೋನ್ನೂರಸ್ವಾಮಿ, ಉಪೇಂದ್ರ, ಸೋಮಣ್ಣ, ಪಾಂಡು, ನಬಿರಸೂಲ್, ಮಲ್ಲಿಕಾರ್ಜುನ, ಹುಲಿಗೆಪ್ಪ ಇವರುಗಳು ಸಂಘಟನೆಗೆ ಸೇರೆ​‍್ಡಗೊಂಡರು. 


ಸುದ್ದಿ ಓದಿ