ಮುದ್ದೆಬಿಹಾಲ್

ವಿವಿಧ ಮಹಿಳಾ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಣೆ

ವಿವಿಧ ಮಹಿಳಾ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಣೆ

ಮುದ್ದೇಬಿಹಾಳ 15: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರವರ ನೇತೃತ್ವದ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಉತ್ತಮ ಜನಪರ ಆಡಳಿತ ನಡೆಸುತಿದೆ ಮಾತ್ರವಲ್ಲದೇ ಮಹಿಳೆಯರ ಶಕ್ತಿ ತುಂಬಿದೆ ಕಾರಣ ಮಹಿಳೆಯರು ಹೆಚ್ಚೇಚ್ಚು ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸರಕಾರದ ಶಕ್ತಿ ತುಂಬಲು ಮುಂದಾಗಬೇಕು ಎಂದು ಶ್ರೀದೇವಿಕಾ ಸುಬ್ಬರಾವ ಪೌಂಡೇಷನ್ ಮುಖ್ಯಸ್ಥೇ ಹಾಗೂ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರ ಪುತ್ರಿ ಪಲ್ಲವಿ ನಾಡಗೌಡ ಹೇಳಿದರು. 

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶಾಸಕರ ಗ್ರಹ ಕಚೇರಿಯಲ್ಲಿ ತಾಲೂಕಿನ ವಿವಿಧ ಮಹಿಳಾ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. 

ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂದು ಜಾತಿ ಧರ್ಮಗಳ ಮದ್ಯೆ ಕಲಹಗಳನ್ನು ಸೃಷ್ಠಿಸಿ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇನ್ನು ಲಕ್ಷಾಂತರ ಜನರ ಬಡ ಮಹಿಳೆಯರು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳದೇ  ಅಸಹಾಯಕರಾಗಿದ್ದಾರೆ. ಮುಂದುವರೆದ ಜಾಗತೀಕ ತಂತ್ರಜ್ಞಾನದ ಕಾಲ್ಲದಲ್ಲಿಯೂ ಸಹ ಶೋಷಣೆಗೊಳಗಾಗುತ್ತಿರುವ ಘಟನೆಗಳನ್ನು ನಿತ್ಯ ಕೇಳುತ್ತಿದ್ದೇವೆ. ಈ ಹಿಂದಿನ ಬಿಜೆಪಿ ಸರಕಾರ ಮಹಿಳೆಯರ ರಕ್ಷಣೆಗಾಗಲಿ ಅಥವಾ ಅವಳ ಆತ್ಮಸ್ಥೈರ್ಯ ತುಂಬುವ ಯಾವ ಸಾಮಾಜಿಕ ಕಾರ್ಯವೂ ಮಾಡಲಿಲ್ಲ. ಆದರೇ ನಮ್ಮ ಸರಕಾರ   ಯಾರ ಹಂಗು ಇಲ್ಲದೇ ಮಹಿಳೆಯರು ಸ್ವತಂತ್ರವಾಗಿ ಸ್ವಾವಲಂಭಿಯಾಗಿ ತನ್ನ ಕುಟುಂಭವನ್ನು ರಕ್ಷಣೆ ಮಾಡಿಕೊಳ್ಳುವಂತಾಗಬೇಕು ಎನ್ನುವ ಸದುದ್ದೇಶದಿಂದ ನಮ್ಮ ಕಾಂಗ್ರೇಸ್ ಸರಕಾರ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರಗಳ ಹಣವನ್ನು ಮತ್ತು ರಾಜ್ಯದ ಎಲ್ಲ ಮೂಲೆಗಳಲ್ಲಿ ಉಚಿತ ಪ್ರಯಾಣಿಸುವಂತೆ ಮಾಡಿದೆ ಎನ್ನುವದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. 

ಕಳೇದ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ನಮ್ಮ ತಂದೆಯವರಾದ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರು ಯಾವತ್ತಿಗೂ ಜಾತಿ ಬೇಧವಾಗಲಿ ಅಥವಾ ಮೇಲು ಕೀಳು ಎನ್ನುವ ಬೇಧವಾಗಲಿ ಮಾಡಿಲ್ಲ, ಎಲ್ಲ ಕಾರ್ಯಕರ್ತರನ್ನು ಅತ್ಯಂತ ಪ್ರೀತಿಯಿಂದ ಗೌರವಿಸಿ ಸಮಾನತೆಗೆ ಸಾಕ್ಷಿಯಾಗಿದ್ದಾರೆ. ನಾಡಗೌಡರ ಅಭಿವೃದ್ಧಿ ಹಾಗೂ ಅವರ ಸಂಭಾವಿತ ಸ್ವಭಾವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ವಿರೋಧ ಪಕ್ಷದವರು ಸುಳ್ಳು ಹೇಳಿಕೆ ನೀಡಿ  ಜನರನ್ನು ದಾರಿ ತಪ್ಪಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಅಂತಹ ಉಹಾ ಪೋಹ ಸುಳ್ಳು ವದಂತಿಗಳಿಗೆ ಕಿವಿ ಕೊಡದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಮುನ್ನಡೆಯಬೇಕು ಜೊತೆಗೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ  ಮತ್ತು ಜನರ ಸೇವೆಗೆ ನಮ್ಮ ತಂದೆ ನಾಡಗೌಡರು ಸದಾಸಿದ್ದರಾಗಿದ್ದಾರೆ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ ಎಂದರು. 

ಈ ವೇಳೆ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಸಾವಿತ್ರಿ ಚಿತ್ರನಾಳ, ನಜೀರಾ ಅತ್ತಾರ,  ಕಾರ್ಯದರ್ಶಿಯಾಗಿ ಸಂಗಮ್ಮ ಗುರಿಕಾರ, ಚಂದ್ರಮ್ಮ ರುದ್ರಗಂಟಿ, ಗೀತಾ ಅಸ್ಕೀ, ರೇಣುಕಾ ಪೂಜಾರ, ಉಪಾಧ್ಯಕ್ಷೇಯಾಗಿ ಅಮೀದಾ ನವಲಿ,ಬಸಮ್ಮ ಮಳಗಿ, ಶಾಂತಮ್ಮ ಅಸ್ಕೀ, ಲಲೀತಮ್ಮ ಮೇದಿಕಿನಾಳ, ಮಡಿವಾಳಮ್ಮ ಗುರಿಕಾರ ಆಯ್ಕೆಯಾದ ಪದಾಧಿಕಾರಿಗಳಿಗೆ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು. 

ತಾಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶೋಭಾ ಶಳ್ಳಗಿ, ಸರಸ್ವತಿ ಪಿರಾಪೂರ, ಅಕ್ಷತಾ ಚಲವಾದಿ, ಲಳಿತಾ ಇಲಕಲ್ಲ, ನೀಲಮ್ಮ ಚಲವಾದಿ, ಕಮಲಾ ಭಜಂತ್ರಿ, ಅಚಿಜನಾ ಬಿರಾದಾರ, ದೇವಮ್ಮ ರಕ್ಕಸಗಿ, ಸುಜಾತಾ ಶಿಂಧೆ, ಮಮತಾಜ ಮುಲ್ಲಾ, ಶಿವಲೀಲಾ ಬಸರಕೋಡ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ