ಬಡವರಿಗೆ ಸಾಲೇಶ್ವರ ಸಂಘದಿಂದ ಕಿಟ್ ವಿತರಣೆ
ಗುಳೇದಗುಡ್ಡ16: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಗುಳೇದಗುಡ್ಡ ಪಟ್ಟಣದ ಪ್ರತಿಷ್ಠಿತ ಸಾಲೇಶ್ವರ ಪತ್ತಿನ ಸಹಕಾರಿ ಸಂಘದ ವತಿಯಿಂದ ಸುಮಾರು 300ಕ್ಕೂ ಹೆಚ್ಚು ಜನರಿಗೆ ಆಹಾರದ ದಿನಸಿ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.
ಸಂಘದ ಸಭಾ ಭವನದಲ್ಲಿ ಬುಧವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಹಲವು ಬಡ ಜನರಿಗೆ ಸಾಂಕೇತಿಕವಾಗಿ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಅಗತ್ಯ ದಿನಸಿ ವಸ್ತುಗಳ ಕಿಟ್ಗಳನ್ನು ವಿತರಣೆ ಮಾಡಿದರು.
ಕಳೆದ ವರ್ಷವೂ ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದ ಗುಳೇದಗುಡ್ಡ ಪಟ್ಟಣದಲ್ಲಿನ ಬಡರಿಗೆ ಹಾಗೂ ನಿರ್ಗತೀಕ ಜನರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿದ್ದೇವೆ. ಅದರಂತೆ ಈ ವರ್ಷವೂ ಕೊರೊನಾ ಕಾರಣದಿಂದ ತೊಂದರೆಗೆ ಒಳಗಾದ ಬಡವರಿಗೆ ದಿನಸಿ ವಸ್ತುಗಳ ಕಿಟ್ಗಳನ್ನು ನೀಡುತ್ತಿದ್ದೇವೆ. ಸಾಂಕೇತಿಕವಾಗಿ ಈಗ ಹಲವು ಜನರಿಗೆ ಕಿಟ್ಗಳನ್ನ ವಿತರಣೆ ಮಾಡಿದ್ದೇವೆ. ಇನ್ನೂಳಿದವರಿಗೆ ಸಂಘದ ಸಿಬ್ಬಂದಿಗಳು ಅವರ ಮನೆ ಮನೆಗೆ ತೆರಳಿ ವಿತರಣೆ ಮಾಡಲಾಗುವುದು. ಬ್ಯಾಂಕಿನ್ ಗ್ರಾಹಕರಿಗೆ, ಬಡ ಜನರಿಗೆ ಮತ್ತು ನಿರ್ಗತಿಕರಿಗೆ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಜನರಿಗೆ ಹಲವು ವಸ್ತುಗಳನ್ನು ಒಳಗೊಂಡ ಕಿಟ್ಗಳನ್ನು ವಿತರಣೆ ಮಾಡುತ್ತಿದ್ದೇವೆಂದು ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರ ತಾಂಡೂರ ಹೇಳಿದರು.
ಸಾಲೇಶ್ವರ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಕೂಡ್ಲೆಪ್ಪ ಕಲ್ಯಾಣಿ, ಶಿವಾನಂದ ಎಣ್ಣಿ, ಮಲ್ಲಿಕಾರ್ಜುನ ಸಾರಂಗಿ, ಮಂಜುನಾಥ ಬಳಗಲಿ, ಪ್ರಕಾಶ ವಾಳದುಂಕಿ, ಮಂಜುನಾಥ ರಾಜನಾಳ, ಶೀವಾನಂದ ಜವಳಿ, ಕಾಶೀನಾಥ ಮುಳ್ಳಾನ್ನವರ, ಗಂಗಮ್ಮ ಜಿಡಗಿ, ನಾಗವೇಣಿ ತಿಪ್ಪಾ, ಸಲಹಾ ಸಮಿತಿಯ ಮಲ್ಲಿಕಾರ್ಜುನ ಬೆಣ್ಣಿ, ಸಂಗಪ್ಪ ನಾರಾ, ಸಂಘದ ವ್ಯವಸ್ಥಾಪಕ ರಮೇಶ ಜಿಡಗಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.