ಬಳ್ಳಾರಿ

ಸಾಹಸ್ ಸಂಸ್ಥೆಯಿಂದ ನಿರಾಶ್ರಿತರಿಗೆ ಫುಡ್ ಕಿಟ್ ವಿತರಣೆ

ಸಾಹಸ್ ಸಂಸ್ಥೆಯಿಂದ ನಿರಾಶ್ರಿತರಿಗೆ ಫುಡ್ ಕಿಟ್ ವಿತರಣೆ

ಲೋಕದರ್ಶನ ವರದಿ  

ಹಗರಿಬೊಮ್ಮನಹಳ್ಳಿ 27: ಹಳೇ ಹಗರಿಬೊಮ್ಮನಹಳ್ಳಿಯ ಪಾಪುಸ್ವಾಮಿ ಪ್ರೌಢಶಾಲೆಯ ಬಳಿ ಇರುವ ನಿರಾಶ್ರಿತ ಕುಟುಂಬಗಳಿಗೆ ಸಾಹಸ್ ಸಂಸ್ಥೆಯಿಂದ ಮಂಗಳವಾರ ಫುಡ್ ಕಿಟ್‌ಗಳನ್ನು ವಿತರಿಸಲಾಯಿತು. 

ಸಂಸ್ಥೆಯ ಸಂಯೋಜಕರಾದ  ಚಂದ್ರಶೇಖರಯ್ಯ ಎಂ.ಎಂ. ಕಿಟ್ ವಿತರಿಸಿ ಮಾತನಾಡಿ ಈಗಾಗಲೇ ವಿಶ್ವದಾದ್ಯಂತ ಕರೊನಾ ಮಹಾಮಾರಿಗೆ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿ ಒಂದು ಹೊತ್ತಿನ ಗಂಜಿಗೂ ಪರದಾಡುವಂತಹ ಪರಿಸ್ಥಿತಿ ಏರ​‍್ಪಟಟಿದೆ, ಇಂತಹ ನೊಂದ ಕುಟುಂಬಗಳಿಗೆ ಸಾಹಸ್ ಸಂಸ್ಥೆಯಿಂದ ನಿರಾಶ್ರಿತರಿಗೆ ಸಾಧ್ಯವಾದಷ್ಟು ಸಹಾಯ ಹಸ್ತಚಾಚಿದ್ದು, ಮುಂದಿನ ದಿನಗಳಲ್ಲಿ ನಿರಾಶ್ರಿತರಿಗೆ ಹೆಚ್ಚಿನ ಸಹಾಯ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು. 


ಈ ಪ್ರದೇಶದಲ್ಲಿ ವಾಸಿಸುತ್ತಿರುವ 50 ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು  ವಿತರಿಸಲಾಯಿತು. ಫಲಾನುಭವಿಗಳಾದ ರಾಜೇಶ್ವರಿ, ಹಮ್ಜ, ಮುತ್ತಪ್ಪ, ರಮೇಶ್ ಮತ್ತು ಶಮೀನಾ ಇವರು ಮಾತನಾಡುತ್ತಾ, ನಮ್ಮಂತಹ ನಿರ್ಗತಿಕರನ್ನು ಗುರುತಿಸಿ ಸೂಕ್ತವಾದ ರೀತಿಯ ಆಹಾರ ಧಾನ್ಯಗಳನ್ನು ಸಾಹಸ್ ಸಂಸ್ಥೆ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು.ಅಷ್ಟೇ ಅಲ್ಲ ನಿಮ್ಮಂತಹ ದಾನಿಗಳನ್ನು ನಾವುಗಳು ಸದಾ ಸರಣೆ ಮಾಡಿಕೊಳ್ಳುತ್ತೇವೆಂದು ತಿಳಿಸಿದರು.  

ಈ ಸಂಧರ್ಭದಲ್ಲಿ  ಸಾಹಸ್ ಸಂಸ್ಥೆಯ ಮೇಲ್ವಿಚಾರಕರಾದ ಶಿವಕುಮಾರ್ ಮತ್ತುತಾತಯ್ಯ ಇನ್ನು ಮುಂತಾದವರು ಇದ್ದರು. 


ಸುದ್ದಿ ಓದಿ