ಸೆಕ್ಯೂರಿಟಿ ಗಾರ್ಡಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
ಬಳ್ಳಾರಿ 23: ಸನ್ಮಾರ್ಗ ಗೆಳೆಯರ ಬಳಗ ಹಾಗೂ ಮಲಭಾರ ಗೋಲ್ಡ್ ಇವರ ಸಹಯೋಗದಲ್ಲಿ ಸಂಚಾರಿ ಪೊಲೀಸ್ ಠಾಣೆಯಿಂದ ಬಳ್ಳಾರಿ ನಗರದಲ್ಲಿರುವ ವಿವಿಧ ಕಛೇರಿ ಎಟಿಎಂ ಕೇಂದ್ರದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಸೆಕ್ಯೂರಿಟಿ ಗಾರ್ಡಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
ಮಾಡಿ ಮಾತನಾಡಿದ ಟ್ರಾಫಿಕ್ ಸಿಪಿಐ ನಾಗರಾಜ ಎಂ ಮಾಡಳ್ಳಿ ಕೊರೊನಾ ಸಂಕಷ್ಟದಲ್ಲಿ ಬರುವ ಸಂಬಳ ದಿಂದ ಜೀವನ ಸಾಗಿಸಲು ಹೆಣಗಾಡುತ್ತಿರುವ ಸೆಕ್ಯೂರಿಟಿ ಗಾರ್ಡಗಳನ್ನು ಗುರುತಿಸಿ ಅವರಿಗೆ ಆಹಾರ ಧಾನ್ಯಗಳ ನೀಡುವುದು ಪುಣ್ಯದ ಕೆಲಸ ಕೂಡುವ ದಾನಿಗಳು ಮದ್ಯೆ ಸನ್ಮಾರ್ಗ ಸೇತುವೆಯಾಗಿ ಕೆಲಸ ನಿರ್ವಹಿಸುವ ಕಾರ್ಯದಲ್ಲಿ ನಾವು ಭಾಗಿಯಾಗುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ ಇಂತಹ ಸತ್ಕಾರ್ಯಕ್ಕೆ ಕೈಜೋಡಿಸಿದ ಮಲಬಾರ್ ಗೋಲ್ಡ್ ಸಂಸ್ಥೆಗೆ ಇವರ ಪರವಾಗಿ ಕೃತಜ್ಞತೆಗಳು ಎಂದರು ಸನ್ಮಾರ್ಗ ಅಧ್ಯಕ್ಷರಾದ ಎಚ್ ಲಕ್ಷ್ಮಿಕಾಂತ ರೆಡ್ಡಿ ಸೇವೆಗಾಗಿ ಹುಟ್ಟಿದ್ದು ಸನ್ಮಾರ್ಗ ಹಾಗಾಗಿ ಎಷ್ಟು ಕೂಡುವ ಸಂಸ್ಥೆಗಳು ನಮ್ಮ ಜೊತೆ ಸೇರಿಕೂಂಡು ಸಹಾಯ ಹಸ್ತಕ್ಕೆ ಮುಂದುಹಾಗುತ್ತೆವೆ ಅವರ ಸಮ್ಮುಖದಲ್ಲಿ ಅವರು ನೀಡಿದ ಕಿಟ್ ವಿತರಣೆ ನಡೆಸುತ್ತೆವೆ ಎಂದರು.
ಮಲಬಾರ್ ಗೋಲ್ಡ್ ಸಂಸ್ಥೆಯ ಮುಖ್ಯಸ್ಥ ವಿಜಯ ಕುಮಾರ್ , ಸತೀಶ್ ಕುಮಾರ್ ಗೌರವ ಅಧ್ಯಕ್ಷ ಕೆ. ಪಂಪಾಪತಿ ತೇಜರಘುರಾಮರಾವ್ ಎ ಎರಿಸ್ವಾಮಿ ಚಂದ್ರ ಶೇಖರ್ ಆಚಾರ್ ಅಪ್ಪು ಮಂಜುನಾಥ ಕೆ ವಿಶ್ವನಾಥ ಉಪಸ್ಥಿತರಿದ್ದರು.