ವರ್ಲ್ಡ್ ವಿಷನ್ ಇಂಡಿಯಾದಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ
ಬಳ್ಳಾರಿ, ಮೇ 28: ಬಳ್ಳಾರಿ ಗ್ರಾಮಾಂತರ ಪ್ರದೇಶಗಳಲ್ಲಿ ವರ್ಲ್ಡ್ ವಿಷನ್ ಇಂಡಿಯಾ ವತಿಯಿಂದ ತಲಾ ಎರಡು ಸಾವಿರ ಮೊತ್ತದ 111 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ಗುರುವಾರ ವಿತರಿಸಲಾಯಿತು.
ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಬಡಕುಟುಂಬಗಳಿಗೆ ಜೀವನ ಕಷ್ಟಕರವಾಗಿರುವುದನ್ನು ಮನಗಂಡು ಆಹಾರ ಕಿಟ್ಗಳನ್ನು ವಿತರಿಸಲಾಯಿತು.
ಇದರಲ್ಲಿ 11 ಕುಟುಂಬಗಳಿಗೆ ಕೊರೊನಾ ಸೋಂಕಿದ್ದು, ಅವರಿಗೂ ಸಹ 6 ಕೆಜಿ ತೊಗರಿ ಬೇಳೆ, 6 ಕೆಜಿ ಗೋಧಿ ಹಿಟ್ಟು, 6 ಕೆಜಿ ಜೋಳ ಮತ್ತು 6 ಕೆಜಿ ಅಡುಗೆ ಎಣ್ಣೆ ಯನ್ನು ಒಳಗೊಂಡ ಕಿಟ್ಟನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ವ್ಯವಸ್ಥಾಪಕರಾದ ಪ್ರೇಮಲತಾ ಹಾಗೂ ಸಿಬ್ಬಂದಿ ಹಾಜರಿದ್ದರು.