ಬಳ್ಳಾರಿ

ರಾಣಿತೋಟದ ಅಂಗನವಾಡಿ ಕೇಂದ್ರದಲ್ಲಿ ಕೋವಿಡ್ ವ್ಯಾಕ್ಸಿನ್ ವಿತರಣೆ

ರಾಣಿತೋಟದ ಅಂಗನವಾಡಿ ಕೇಂದ್ರದಲ್ಲಿ ಕೋವಿಡ್ ವ್ಯಾಕ್ಸಿನ್ ವಿತರಣೆ

ಬಳ್ಳಾರಿ 11: ಕೊರೊನಾ ಮೂರನೇ ಅಲೆಯ ಭೀತಿ ಹಿನ್ನಲೆಯಲ್ಲಿ ಬಳ್ಳಾರಿ ಮಹಾನಗರದ ರಾಣಿತೋಟದ ಅಂಗನವಾಡಿ ಕೇಂದ್ರದಲ್ಲಿ ಈ ನೂರಾರು ಮಂದಿಗೆ ಕೋವಿಡ್ ವ್ಯಾಕ್ಸಿನ್ ವಿತರಣೆಗೆ ಸಮುದಾಯ ಆರೋಗ್ಯ ಕೇಂದ್ರ ಮುಂದಾಗಿತ್ತು. ಹತ್ತನೇ ವಾರ್ಡಿನ ವ್ಯಾಪ್ತಿಗೆ ಒಳಪಡುವ ರಾಣಿತೋಟದ ಅಂಗನವಾಡಿ ಕೇಂದ್ರದಲ್ಲಿ ಮಹಾನಗರ ಪಾಲಿಕೆ ಸದಸ್ಯ ಕೋನಂಕಿ ತಿಲಕ್ ಅವರು ಸ್ಥಳದಲ್ಲೇ ಬೀಡುಬಿಟ್ಟು ರಾಣಿತೋಟದ ನಿವಾಸಿಗಳಿಗೆ ಕೋವಿಡ್ ವ್ಯಾಕ್ಸಿನ್ ಅನ್ನ ಹಾಕಿಸೋ ಮುಖೇನ ವಿಶೇಷ ಗಮನ ಸೆಳೆದ್ರು.ಬೆಳಿಗ್ಗೆಯಿಂದಲೇ ಶುರುವಾದ ಈ ಕೋವಿಡ್ ವ್ಯಾಕ್ಸಿನ್ ವಿತರಣಾ ಕಾರ್ಯವು ಸಂಜೆಯವರೆಗೂ ನಡೆಯಿತು. ಸಾಲಾಗಿ ನಿಲ್ಲುವಂತೆ ಸೂಚಿಸಿದ್ದಲ್ಲದೇ, ಖುದ್ದಾಗಿ ಒಬ್ಬೊಬ್ಬರಾಗಿ ಬಂದಂತಹ ನಿವಾಸಿಗಳಿಗೆ ಕೋವಿಡ್ ವ್ಯಾಕ್ಸಿನ್ ಕೊಡಿಸಲು ಸ್ವತಃ ಕೋನಂಕಿ ತಿಲಕ್ ಅವರೇ ಮುಂದಾಗಿರೋದು ಇನ್ನೂ ವಿಶೇಷ ಎನಿಸಿತ್ತು. 


ಸುದ್ದಿ ಓದಿ