ಕೋವಿಡ್ ಪ್ರೋಟೆಕ್ಷನ್ ಕಿಟ್ ವಿತರಣೆ
ಮುಂಡಗೋಡ 29: ಲೊಯೋಲಾ ವಿಕಾಸ ಸಂಸ್ಥೆ ವತಿಯಿಂದ ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ಶುಕ್ರವಾರ ತಾಲೂಕಿನ ಅರಿಶಿಣಗೇರಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರದ ವಲಯದ 36 ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಪ್ರೋಟೆಕ್ಷನ್ ಕಿಟ್ ಹಾಗೂ ಡ್ರೈ ಪುಡ್ ಕಿಟ್ಗಳನ್ನು ತಹಸೀಲ್ದಾರ ಶ್ರೀಧರ ಮುಂದಲಮನಿ, ತಾಲೂಕಾ ಆಡಳಿತ ವೈದ್ಯಾಧಿಕಾರಿ ಎಚ್.ಎಫ್ ಇಂಗಳೆ ಹಾಗೂ ಲೊಯೋಲಾ ವಿಕಾಸ ಸಂಸ್ಥೆ ನಿರ್ದೇಶಕ ಜೆರಾಲ್ಡ್ ಡಿಸೋಜಾ ವಿತರಿಸಿದರು.
ಶ್ರೀಧರ ಮುಂದಲಮನಿ ಮಾತನಾಡಿ, ತಾಲೂಕಿನ ಪ್ರಮುಖ ಸಂಸ್ಥೆಯಾದ ಲೊಯೋಲ ವಿಕಾಸ ಕೇಂದ್ರವು ಸಮಾಜ ಸೇವೆಯಲ್ಲಿ ತೋಡಗಿದ್ದು, ಅದರಲ್ಲೂ ಕೋವಿಡ್ ಪರಿಸ್ಥಿತಿಯಲ್ಲಿ ಕೋವಿಡ್ ವಾರಿಯರ್ಸಗಳನ್ನು ಗುರುತಿಸಿ ನೆರವು ನೀಡುತ್ತಿರುವ ಸೇವೆಗೆ ಶ್ಲಾಘಿಸಿದರು
ಇದೇ ವೇಳೆ ಮುಂಡಗೋಡ ತಾಲೂಕಿನಲ್ಲಿರುವ ಎಚ್ ಐ ವಿ ಸೊಂಕಿತ 10 ಜನರಿಗೆ ಡ್ರೈ ಪುಡ್ ಕಿಟ್ಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿಗಳು ಭಾಗಿಯಾಗಿದ್ದರು.