ಪುರಸಭೆ ಸಿಬ್ಬಂದಿಗೆ ಕೋವಿಡ್ ಕಿಟ್ ವಿತರಣೆ
ಹಗರಿಬೊಮ್ಮನಹಳ್ಳಿ 29: ಪುರಸಭೆ ಮುಖ್ಯಾಧಿಕಾರಿ ಕೃಷ್ಣಾನಾಯ್ಕ್ ತಮ್ಮ ಸ್ವಂತ ಖರ್ಚಿನಲ್ಲಿ ಪುರಸಭೆಯ ಪೌರಕಾರ್ಮಿಕ ಹಾಗೂ ನೀರು ಸರಬರಾಜುದಾರರಿಗೆ ಆಹಾರ ಕಿಟ್ ಸೇರಿದಂತೆ ಎನ್ 95ಮಾಸ್ಕ್, ಹ್ಯಾಂಡ್ಗ್ಲೌಸ್, ಹ್ಯಾಂಡ್ ಸ್ಯಾನಿಟೈಸರ್ ವಿತರಿಸಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಕಿಟ್ ವಿತರಿಸಿ ಅವರು ಮಾತನಾಡಿ ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಅವಿರತ ಶ್ರಮವಿದೆ, ಇಂದಿನ ಕೊರೊನಾ ವೈರಸ್ನ ಎರಡನೆ ಅಲೆಗೆ ಜೀವನ ಜರ್ಜರಿತವಾಗಿದೆ, ಕೊರೊನಾ ಸೊಂಕು ವಿಪರೀತವಾಗಿದ್ದು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕರೆ ನೀಡಿದರು.
ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಪ್ರಭಾಕರ ಮಾತನಾಡಿ ಪಟ್ಟಣದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಕಾರ್ಯದಲ್ಲಿ ಪುರಸಭೆ ಪೌರಕಾರ್ಮಿಕರು ಮುಂಚೂಣಿಯಲ್ಲಿರತ್ತಾರೆ ಹಾಗೂ ಪುರಸಭೆ ಪೌರಕಾರ್ಮಿಕ ಹಾಗೂ ನೀರು ಸರಬರಾಜುದಾರರಿಗೆ ಕೀಟ್ ನೀಡಿದ ಮುಖ್ಯಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.