13 ಸಾವಿರ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿ: ಶೇಖರ ಬಾಬು
ಬಳ್ಳಾರಿ:ಮಾ (04) ನಗರದಲ್ಲಿನ ಕೊಳಗೇರಿ ನಿವಾಸಿಗಳಿಗೆ ಆದಷ್ಟು ಬೇಗ ಇನ್ನು13 ಸಾವಿರ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಬೇಕು. ನಗರದಲ್ಲಿ ಕೊಳಗೇರಿ ನಿವಾಸಿಗಳ ಸಘದ ಅಧ್ಯಕ್ಷ ಶೇಖರ ಬಾಬು ಹೇಳಿದರು.
ಶನಿವಾರ ನಗರದ ಬುಡಾ ಆವರಣದಲ್ಲಿ ಜರುಗಿದ ಕೊಳಗೇರಿ ನಿವಾಸಿಗಳ ಸಂಘದ ಜಿಲ್ಲಾ ಸಮಿತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಎಂಟು ಹತ್ತು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಗಮನಕ್ಕೆ ತರದೇ ಆದರೆ ಈಗ ಈ ಬಿಜೆಪಿ ಸರ್ಕಾರ ವತಿಯಿಂದ ನಗರದಲ್ಲಿ ಹಕ್ಕು ಪತ್ರ ಹಂಚಿಕೆ ಮಾಡಲಾಗಿದೆ. ಬಳ್ಳಾರಿ ನಗರದಲ್ಲಿ ಸತತವಾಗಿ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುವಂತೆ ಅಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಆದರೆ ಅಂದು ಯಾರೊಬ್ಬರಿಗೂ ಹಕ್ಕು ಪತ್ರ ವಿತರಣೆ ಮಾಡಿಲ್ಲ, ಅಲ್ಲದೆ ಇನ್ನು ಕೆಲವು ಸ್ಲಂ ಕುಟುಂಬಗಳಿಗೆ ಡಿಡಿ ಕಟ್ಟಿದರು ಸಹ ಅಲವು ಮನೆಗಳು ಪೂರ್ಣಗೊಂಡಿಲ್ಲ ಹಾಗೂ ಸಾಮಗ್ರಿಗಳು ಸಹ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ , ಎಂದು ಶೇಖರ ಬಾಬು ದೂರಿದರು.
ಇಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ನಗರದಲ್ಲಿ ಶಾಸಕ ಜಿ ಸೋಮಶೇಖರ ರೆಡ್ಡಿ ಅವರು ಅಂದು ಹೋರಾಟ ಮಾಡಿರುವ ನಮ್ಮನ್ನು ಕಡೆಗಣಿಸಿದ್ದಾರೆ. ಹಕ್ಕು ಪತ್ರ ವಿತರಣೆ ಮಾಡುವ ವೇಳೆ ನಮಗೆ ಮಾಹಿತಿಯನ್ನು ಸಹ ನೀಡಿಲ್ಲ ಎಂದರು.
ಕೊಳಗೇರಿ ನಿವಾಸಿಗಳ ಸಂಘದ ಮಾಜಿ ಅಧ್ಯಕ್ಷ ಎಂ ರಾಮಚಂದ್ರ್ಪನವರು ಮಾತನಾಡಿ ಸ್ಲಂ ಜನರೆಂದರೆ ಬಿಪಿಎಲ್ ಕಾರ್ಡ ನಂತರ ಅಂತೋದಯ ಕಾರ್ಡ್ ಹೊಂದಿದವರೇ ಬಹುಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ನಗರದ ಕೊಳಗೇರಿ ಪ್ರದೇಶದಲ್ಲಿರುವ ಕಾರ್ಮಿಕರು ಬಡತನ ರೇಖೆಗಿಂತ ಕೆಳಮಟ್ಟದವರು ಹಾಗೂ ಕಷ್ಟ. ಜೀವಿಗಳು ಆಗಿದ್ದಾರೆ. ಮೊದಲು ನಾವು ಅಧ್ಯಕ್ಷರಾದಾಗ ಇವೆಲ್ಲವನ್ನು ಪರಿಗಣಿಸಿ ಸ್ಲಂ ಜನಾಂಗದ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಆದರೆ ಯೋಜನೆಯು ಬರೆ ನಾಮಕ ವ್ಯವಸ್ಥೆ ಮಾತ್ರ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಕೂಳಗೇರಿ ಪ್ರದೇಶದ ಜನರಿಗೆ ಯೋಜನೆಗಳು ವಿಫಲವಾಗದಂತೆ ಎಚ್ಚರವಹಿಸಬೇಕೆಂದು ಮನವಿ ಮಾಡಿದರು.ಇನ್ನು ನಗರದಲ್ಲಿ 13000 ಸಾವಿರ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಬೇಕು ಅವರು 7 ಸಾವಿರ ಜನರಿಗೆ ಮಾತ್ರ ಹಕ್ಕು ಪತ್ರ ವಿತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾವು ಇದನ್ನ ಒಪ್ಪುವುದಿಲ್ಲ ನಗರದಲ್ಲಿನ 13000 ಸಾವಿರ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
ಸಭೆಯಲ್ಲಿ ಪರ್ವೀನ್ ಬಾನು ಎನ್, ಎಚ್. ಪ್ರಭು, ಅವರನ್ನು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿಗೆ ಆಯ್ಕೆ ಮಾಡಲಾಯಿತು.
ಬಿ ಗೋವಿಂದಪ್ಪ, ಪ್ರಸಾದ, ಪ್ರಶಾಂತ್, ಜಗದೀಶ್ ಗೌಡ. ಉಮೇಶ, ಕಾಸಿಮ್ ಸಾಬ್ ಸೇರಿದಂತೆ ಇತರರು ಇದ್ದರು.