ವಿಜಯಪುರ

ಅಣ್ಣಪ್ಪ ಪೂಜಾರಿಕರ್ತವ್ಯಕ್ಕೆ ಅಡ್ಡಿ: ಕೆಆರ್‌ಎಸ್ ಪಕ್ಷದ ಅಧ್ಯಕ್ಷ ಅಣ್ಣಪ್ಪ ಪೂಜಾರಿ ಬಂಧನ

ಅಣ್ಣಪ್ಪ ಪೂಜಾರಿಕರ್ತವ್ಯಕ್ಕೆ ಅಡ್ಡಿ: ಕೆಆರ್‌ಎಸ್ ಪಕ್ಷದ ಅಧ್ಯಕ್ಷ ಅಣ್ಣಪ್ಪ  ಪೂಜಾರಿ ಬಂಧನ

ಚಡಚಣ 29 : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಪ್ತಾ ವಸೂಲಿಗೆ ಬೇಡಿಕೆ ಇಟ್ಟಿದ್ದ ಚಡಚಣ ಕೆ.ಆರ್‌.ಎಸ್ ಪಕ್ಷದ ಚಡಚಣ  ನಗರ ಘಟಕದ ಅಧ್ಯಕ್ಷ,  ರೌಡಿ ಸೀಟರ್  ಅಣ್ಣಪ್ಪ ಪೂಜಾರಿ ಅವರ ಮೇಲೆ ಸ್ಥಳಿಯ ಬಿಇಓ ಕಚೇರಿ ಡಿ.ದರ್ಜೆ ನೌಕರ ಅಶೋಕ ಕಟ್ಟಿಮನಿ ಹಾಗೂ ಶಿಕ್ಷಕ ಸಂಗಣ್ಣ ಪಾಟೀಲ ಅವರು ನೀಡಿದ ದೂರಿನ ಮೇಲೆ ಸ್ಥಳಿಯ ಪೋಲಿಸರು ಮಂಗಳವಾರ ರಾತ್ರಿ ಅಣ್ಣಪ್ಪ ಪೂಜಾರಿ ಅವರನ್ನು   ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ  ಸ್ಥಳಿಯ ಬಿಇಓ ಕಚೇರಿಯ ಡಿ.ದರ್ಜೆ ನೌಕರ ಅಶೋಕ ಕಟ್ಟಮನಿ ಎಂಬುವವರು ಕರ್ತವ್ಯದಲ್ಲಿದ್ದ ಸಮಯದಲ್ಲಿ ಕಚೇರಿಗೆ ಆಗಮಿಸಿದ ಅಣ್ಣಪ್ಪ ಪೂಜಾರಿ ಅನಗತ್ಯವಾಗಿ ಕಿರುಕಳ ನೀಡುವದಲ್ಲದೆ ಹಪ್ತಾ ನೀಡುವಂತೆ ಒತ್ತಾಯಿಸಿದ್ದಾನೆ. ಸ್ಥಳದಲ್ಲಿದ್ದ ಶಿಕ್ಷಕ ಸಂಗಣ್ಣ ಪಾಟೀಲ ಈ ಬಗ್ಗೆ ಪ್ರಶ್ನಿಸಿದಾಗ ಅವರ ಮೇಲೂ ಹಲ್ಲೆ ನಡೆಸಿ,  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.  


ಸುದ್ದಿ ಓದಿ