ಜಮಖಂಡಿ

ವಿದ್ಯಾರ್ಥಿಗಳಲ್ಲಿ ಶಿಸ್ತು ಅತ್ಯಂತ ಅವಶ್ಯಕ: ಬಿರಾದಾರ

ವಿದ್ಯಾರ್ಥಿಗಳಲ್ಲಿ ಶಿಸ್ತು ಅತ್ಯಂತ ಅವಶ್ಯಕ: ಬಿರಾದಾರ

ಲೋಕದರ್ಶನ ವರದಿ,

ಜಮಖಂಡಿ 10: ವಿದ್ಯಾರ್ಥಿಗಳಲ್ಲಿ ಶಿಸ್ತು ಅತ್ಯಂತ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಸಂಸ್ಕೃತಿ ರೂಢಿಸಿಕೊಳ್ಳದಿದ್ದರೆ ಅನೇಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ಅಪರಾಧದಲ್ಲಿ ತೊಡಗಿಕೊಂಡಲ್ಲಿ ಅವರೆಲ್ಲರ ಜೀವನ ನರಕವಾಗಲಿದೆ ಎಂದು ಗ್ರಾಮೀಣ ಠಾಣೆ ಪಿ.ಎಸ್.ಐ. ಗಂಗಾ ಬಿರಾದಾರ ಹೇಳಿದರು.

ತಾಲೂಕಿನ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಭವನದಲ್ಲಿ ಐ.ಕ್ಯೂ.ಎ.ಸಿ, ಸಮಾಜಶಾಸ್ತ್ರ ವಿಭಾಗ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಜಮಖಂಡಿ ಸಹಯೋಗದಲ್ಲಿ ಅಪರಾಧ ತಡೆಗಳ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ಬಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೇ ತಂಹ ವಿದ್ಯಾರ್ಥಿ ಜೀವನ ದುಸ್ಥರವಾಗುತ್ತದೆ. ಯಾವುದೇ ಸರ್ಕಾರಿ ನೌಕರಿ ಪಡೆಯಲು ಕಡ್ಡಾಯವಾಗಿ ಅಪರಾಧಗಳ ಕುರಿತು ತನಿಖೆ ನಡೆಸಿ ಯಾವುದೇ ಪ್ರಕರಣಗಳು ದಾಖಲಾತಿ ಕುರಿತು ವರದಿ ಪಡೆಯಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂದು ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದರು.

ಅಧ್ಯಕತೆ ವಹಿಸಿದ ಪ್ರಾಂಶುಪಾಲಕಿ ಡಾ.ಸುನಂದಾ ಶಿರೂರ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಗೊತ್ತುಗೊತ್ತಿಲ್ಲದೆ ತೊಡಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಹಾಗೂ ಜೀವನದ ಗುರಿಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ವೇದಿಕೆಯಲ್ಲಿ ಡಾ.ಸತೀಶಗೌಡ, ಡಾ.ವೀಣಾ ಮರಕಟ್ಟಿ  ಸೇರಿದಂತೆ ಅನೇಕರು ಇದ್ದರು. ರಾಣಿ ತಿಮ್ಮಗೌಡರ ಪ್ರಾರ್ಥಿಸಿದರು, ಪ್ರೊ.ಪಿ.ಡಿ.ಬಡಿಗೇರ ಸ್ವಾಗತಿಸಿದರು, ಡಾ.ಎನ್.ವಿ.ಅಸ್ಕಿ ನಿರೂಪಿಸಿದರು, ಪ್ರೊ. ಎಲ್.ಎಸ್.ಕೋರೆ ವಂದಿಸಿದರು,


ಸುದ್ದಿ ಓದಿ