ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಅಂಗವಿಕಲರು: ನೂಲಾನವರ
ಸಿಂದಗಿ 23: ಕೋವಿಡ್-19 ಎರಡನೇಯ ಅಲೆಯಿಂದ ಅದೆಷ್ಟೋ ಅಂಗವಿಕಲರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ ಹೇಳಿದರು. ಪಟ್ಟಣದ ಕನರ್ಾಟಕ ಜನಸ್ಪಂದನ್ ಟ್ರಸ್ಟ್ ವಿಜಯಪುರ ಜಿಲ್ಲಾ ಘಟಕ ಹಾಗೂ ಅಂಗವಿಕಲರ ಐಕ್ಯತಾ ವೇದಿಕೆ ಸಿಂದಗಿ ಇವುಗಳ ಸಹಯೋಗದಲ್ಲಿ ಕನರ್ಾಟಕ ಜನಸ್ಪಂದನ್ ಟ್ರಸ್ಟ್ವತಿಯಿಂದ ಕೊರೊನಾ ಎರಡನೇಯ ಅಲೆಗೆ ಅದೇಷ್ಟೋ ಅಂಗವಿಕಲರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು.
ಸಮಾಜದ ಅನೇಕ ಸವಾಲುಗಳ ಜೊತೆಗೆ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಸುಂದರ ಬದುಕು ಸಾಗಿಸುತ್ತಿರುವವರ ಮಧ್ಯದಲ್ಲಿ ಯಮರೂಪಿ ಕಾಯಿಲೆಯಾದ ಕೊರೋನದಿಂದ ಕುಟುಂಬಗಳು ಬೀದಿಗೆ ಬಿದ್ದಿವೆ ಕೊರೊನಾ ಎರಡನೇಯ ಅಲೆ ಹೆಚ್ಚಾಗಿ ಜನರ ಪ್ರಾಣ ಹಿಂಡುತ್ತಿದೆ. ಸೊಂಕಿಗೆ ಒಳಗಾದವರಲ್ಲಿ ಸಾವಿರಾರು ಜನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಒಂದು ಕಡೆ ಕೊರೊನಾ ಭೀತಿ ಇನ್ನೊಂದು ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೇ ಆಥರ್ಿಕ ಸಂಕಷ್ಟಕ್ಕೆ ಸಿಲುಕಿ ಮೂಲಭೂತ ಅವಶ್ಯಕತೆಯನ್ನು ಪಡೆದುಕೊಳ್ಳಲು ಪರದಾಡುತ್ತಿದ್ದಾರೆ ಎಂದರು.
ಅಂಗವಿಕಲರ ಐಕ್ಯತಾ ವೇದಿಕೆ ಅಧ್ಯಕ್ಷೆ ಸಬೀಯಾಬೇಗಂ ಮತರ್ೂರ ಮಾತನಾಡಿ, ಕೊರೊನಾ ಕಾರಣದಿಂದ ಅಂಗವಿಕಲರ ಮಾಶಾಸನ ನೀಡದೇ ಇರುವದರಿಂದ ಅದೇಷ್ಟೋ ಕುಟುಂಬಗಳು ಸಂಕಷ್ಟವನ್ನು ಅನುಭವಿಸುತ್ತಿದ್ದು ಅಂತಹ ಕುಟುಂಬಗಳಿಗೆ ದುಡಿಮೆ ಇಲ್ಲದೇ ಇರುವಾಗ ಬೇಯಿಸಿ ತಿನ್ನೊಣವೆಂದರೆ ಮನೆಯಲ್ಲಿ ಧಾನ್ಯಗಳಿಲ್ಲದೇ ಇರುವಾಗ ಕನರ್ಾಟಕ ಜನಸ್ಪಂದನ್ ಟ್ರಸ್ಟವು ಅವರ ಮನೆ ಬಾಗಿಲಿಗೆ ಬಂದು ಕುಶಲೋಪರಿ ವಿಚಾರಿಸಿ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಇವರ ಕಾರ್ಯಕ್ಕೆ ಸಂತ್ರಸ್ಥರು ಅಭಿನಂದಿಸಿದ್ದಾರೆ ಸುಮಾರು 180 ಕುಟುಂಬಗಳಿಗೆ 15 ಸಾಮಗ್ರಿಗಳುಳ್ಳ ಕಿಟ್ ವಿತರಣೆ ಮಾಡುತ್ತಿರುವುದು ಕಾರ್ಯವು ಶ್ಲಾಘನೀಯವಾದದ್ದು ಎಂದರು. ದಾವಲಸಾಬ ಮತರ್ೂರ, ನವೀನ ಶೆಳ್ಳಗಿ, ಸಿದ್ಧಲಿಂಗ ಕಿಣಗಿ, ಪ್ರದೀಪ ಕತ್ತಿ, ಸಾಹೇಬಗೌಡ ದುದ್ದಗಿ, ರವಿಚಂದ್ರ ಮಣೂರ, ಭಾಗಣ್ಣ ತಮದೊಡ್ಡಿ, ದಯಾನಂದ ಜಾಡರ್, ಆನಂದ ಚಿಮ್ಮಲಗಿ, ಕಲ್ಮೇಶ ಹಿಪ್ಪರಗಿ, ಬಸವರಾಜ ದೇಸಾಯಿ, ಶಿವಾನಂದ ಮುಡಸಿ, ಬಸವರಾಜ ಗುರಶೆಟ್ಟಿ, ಶಿವರಾಯಗೌಡ ಖೈನೂರ, ವಿಜಯ ಭಜಂತ್ರಿ, ಸಲೀಮ ಮಂದೇವಾಲಿ, ರಾಜು ಯಡ್ರಾಮಿ, ಹೇಮಾ ಕಾಸರ್, ಗಣೇಶ ಜಿ. ಸೇರಿದಂತೆ ಇನ್ನಿತರರು ಇದ್ದರು.