ಮುಂಡರಗಿ

ಮುಂಡರಗಿಗೆ ಡಿಪ್ಲೋಮಾ ಕೋರ್ಸ ಕಾಲೇಜು ಅವಶ್ಯ: ಒತ್ತಾಯ

ಮುಂಡರಗಿಗೆ ಡಿಪ್ಲೋಮಾ ಕೋರ್ಸ ಕಾಲೇಜು ಅವಶ್ಯ:  ಒತ್ತಾಯ

ಮುಂಡರಗಿ 24:  ಗದಗ ಜಿಲ್ಲೆ ಮುಂಡರಗಿ ತಾಲೂಕ ತೀರ ಹಿಂದುಳಿದ ಪ್ರದೇಶವಾಗಿದೆ. ಈ ಭಾಗದಲ್ಲಿ  ಬಡವಿಧ್ಯಾರ್ಥಿಗಳು, ಕುಟುಂಬಗಳ ಸಂಖ್ಯೆ ಜಾಸ್ತಿ ಇದೆ. ತಾಲೂಕ ಕೇಂದ್ರವಾಗಿರುವ ಮುಂಡರಗಿಯಲ್ಲಿ ಹೇಳಿಕೊಳ್ಳುವಂತಹ ಡಿಪ್ಲೋಮಾ ಕೊರ್ಸಗಳಿಲ್ಲ. ನಗರದಲ್ಲಿ  ಆಯ್ ಟಿ ಐ ಮಾತ್ರ ಇದೆ. ಸುಸಜ್ಜಿತವಾದ ಕಟ್ಟಡವಿದೆ. ಸಾಕಷ್ಟು ಬಯಲು ಜಾಗೆ ಇರುವದರಿಂದ ಈಗಾಗಲೇ ಈ ಕಟ್ಟಡದಲ್ಲಿ ಎರಡು ಮೂರು ಕೋರ್ಸಗಳ ತರಬೇತಿ ನೀಡಲಾಗುತ್ತಿದೆ ಎಂದು ಆಯ್ ಎಂ ಸಿ, ಐಟಿಐ , ಆಡಳಿತ ಮಂಡಳಿ ಸದಸ್ಯ ನಾರಾಯಣ ಇಲ್ಲೂರ ಅವರು ಸರಕಾರಕ್ಕೆ ಹಾಗೂ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರಿಗೆ ತಹಶೀಲ್ದಾರ ಮುಖಾಂತರ ದಿ 24 ರಂದು ಶುಕ್ರವಾರ ಮನವಿ ಸಲ್ಲಿಸಿದರು. 

ಪ್ರತಿಯೊಬ್ಬರೂ ಸರಕಾರಿ ನೌಕರಿ ಸಿಗುವದು ಕಠಿಣ ವಾಗಿದೆ.  ಯುವಕರು ಸ್ವಯಂ ಉದ್ಯೋಗಿಗಳಾಗಬೇಕಾದರೇ  ವೃತ್ತಿಪರ ಶಿಕ್ಷಣ ಬೇಕು. ಅಂತಹ ಶಿಕ್ಷಣ ಮುಂಡರಗಿ ತಾಲೂಕ ಕೇಂದ್ರದಲ್ಲಿ ವ್ಯವಸ್ಥೆ ಇಲ್ಲ. ಖಪ್ಲೋಮಾ ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ತರಬೇತಿ ಪಡೆಯಲು ಗದಗ ಹುಬ್ಬಳ್ಳಿ ಬೆಂಗಳೂರ ಮೊದಲಾದ ನಗರಗಳಿಗೆ, ಹೋಗುವ ಪ್ರಸಂಗ ಬಂದಿದೆ.  ದಬಾರಿ ಫೀ ಕಟ್ಟಿ, ಶಿಕ್ಷಣ ಪಡೆಯುವದು ಇಂದಿನ ದಿನಮಾನಗಳಲ್ಲಿ ಬಡವರಿಗೆ ತೊಂದರೆ ಆಗಿದೆ. ಬಡತನ ಕುಟುಂಬದ ಈ ತಾಲೂಕಿನಲ್ಲಿ ಇಂತಹ ಶಿಕ್ಷಣದಿಂದ ಬಡ ವಿಧ್ಯಾರ್ಥಿಗಳು ಪ್ರತಿಭಾನ್ವಿತರು ವಂಚಿತರಾಗಿದ್ದಾರೆ.  

ಆದ್ದರಿಂದ ತಾವುಗಳು ಮುಂಡರಗಿ ನಗರಕ್ಕೆ ಸರಕಾರದಿಂದ ಡಿಪ್ಲೋಮಾ ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಿಕಲ್ ಮೊದಲಾದ ಕೊಸ್ ಪ್ರಾರಂಭಿಸಲು ಸೂಕ್ತಕ್ರಮ ಕೈಕೊಳ್ಳಬೇಕು ಇದರಿಂದ ಯುವಕರು ಸ್ವಯಂ ಉದ್ಯೋಗದೊಂದಿಗೆ ಆರ್ಥಿಕವಾಗಿ ಸಧೃಡರಾಗಿ ಬೆಳೆಯುತ್ತಾರೆ. ಸಚಿವರು ಈ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. 

ಮನವಿ ಸ್ವಿಕರಿಸಿದ ತಹಶೀಲ್ದಾರ ಆಶಪ್ಪ ಪೂಜಾರ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರುವದಾಗಿ ಹೇಳಿದರು. 

ಈ ಸಂದರ್ಭದಲ್ಲಿ  ವಕೀಲರು ಜಿ ಎಂ ಕುಲಕರ್ಣಿ, ಪುರಸಭೆ ವಿರೋಧ ಪಕ್ಷ ನಾಯಕ, ನಾಗರಾಜ ಹೊಂಬಳಗಟ್ಟಿ, ಪುರಸಭಾ ಸದಸ್ಯ, ಸಂತೋಷ ಹಿರೇಮನಿ, ಕಿಸಾನ ಜಾಗೃತ ವಿಕಾಸ ಸಂಘ ರಾಷ್ಟ್ರೀಯ ಉಪಾಧ್ಯಕ್ಷ ವಿಶ್ವನಾಥ ತಾಮ್ರಗುಂಡಿ, ಎಂ.ಆರ್‌.ಬೀಡನಾಳ, ಕೃಷ್ಣ.ಆರ್‌.ಸಾವಕಾರ, ಅಡಿವೆಪ್ಪ ಚಲವಾದಿ, ಸಂಗನಗೌಡ ಪಾಟೀಲ, ಮುಂಡವಾಡ ಎ.ಎಸ್‌.ಮಕಾಂದಾರ, ಶಿವಾನಂಧ ಇಟಗಿ, ದೇವಪ್ಪ ಇಟಗಿ, ಧ್ರುವ ಹೂಗಾರ, ಜಗದೀಶ ಪಾಟೀಲ, ಹಾಲಪ್ಪ ಕಬ್ಬೇರಹಳ್ಳಿ ಡಿ.ಎಸ್‌.ಮುರಡಿ, ಹನಮಂತ ಚನ್ನದಾಸರ, ಎಂ.ಎಚ್‌.ತಳಗಡೆ, ರವಿ ಮಡಿವಾಳರ, ಯಲ್ಲಪ್ಪ ಹೊಂಬಳಗಟ್ಟಿ, ಈರಣ್ಣ ಯಳಮಲಿ ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ