ಹೊಳಗುಂದಿಯಲ್ಲಿ ದೀನ್ದಯಾಳ್ ಜನ್ಮ ದಿನಾಚರಣೆ
ಲೋಕದರ್ಶನ ವರದಿ
ಹೂವಿನ ಹಡಗಲಿ 25: ತಾಲೂಕಿನ ಹೊಳಗುಂದಿ ಬಿಜೆಪಿ ಗ್ರಾಮ ಘಟಕದಿಂದ ಶನಿವಾರ ಗ್ರಾಮದ ಕೆರೆದುರುಗಮ್ಮ ದೇವಸ್ಥಾನದಲ್ಲಿ ಪಂಡಿತ್ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಕ್ತಿಯಿಂದ 105ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಪುಟಾಣಿ ಬಸವರಾಜ ಮಾತನಾಡಿ ಶ್ಯಾಮ್ ಪ್ರಸಾದ ಮುಖರ್ಜಿ ಭಾರತೀಯ ಜನ ಸಂಘ ಕಟ್ಟಿದರು, ಪಂಡಿತ್ ದೀನ್ ದಯಾಳ್ ಉಪಾಧ್ಯಯರು ಜನ ಸಂಘಕ್ಕೆ ನಿಯುಕ್ತಿಗೊಂಡು ಅವರ ಶ್ರೇಷ್ಠ ರಾಜಕೀಯ ವ್ಯಕ್ತಿತ್ವಳ್ಳ ಮತ್ತು ಅಳವಾದ ತತ್ವಜ್ಞಾನಿಯಾಗಿದ್ದರು. ಸಂಘದ ಶಾಖೆಗಳನ್ನು ಹಳ್ಳಿಗಳಲ್ಲಿ ತೆರೆಯುವ ಮೂಲಕ ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಯ ಮೂಲಕ ರಾಷ್ಟ್ರೀಯ ಹಿತಾಸಕ್ತಿಯನ್ನು ಬೋಧಿಸಿದ್ದರು.ರೈಲ್ವೆ ನಿಲ್ದಾಣದಲ್ಲಿ ಸಂದೇಹಾಸ್ಪದ ರೀತಿಯಲ್ಲಿ ನಿಧನರಾದರು ಎಂದು ಹೇಳಿ ಪಂಡಿತ್ ದೀನ್ ದಯಾಳ್ ಅವರ ಆದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಮುದೇಗೌಡ್ರ ಪ್ರಕಾಶ್,ಉಪನ್ಯಾಸಕ ಹಾವನೂರು ಚಂದ್ರ್ಪ,ಹೆಚ್.ಕರಿಬಸವರಾಜ,ಪ್ರಶಾಂತ,ತಳವಾರ ಕೊಟ್ರೇಶ ಮಾತನಾಡಿದರು. ಹಾವನೂರು ಅಜ್ಜಪ್ಪ,ವಿನಾಯಕ, ವೀರೇಶ, ತುಪ್ಪದ ಕೊಟ್ರೇಶ, ಗಡ್ಡದ ಕೊಟ್ರೇಶ,ಟಿ.ನವೀನ, ಕೆ. ಮಲ್ಲೇಶ, ಕಾತ್ರಿಕಿ ಕರಿಬಸವರಾಜ ಎ.ಎಂ.ಪಿ.ಸುನೀಲ್,ಹೆಚ್.ಎಂ.ಉಮೇಶ ಇದ್ದರು.