ವಿಜಯಪುರ

ಸೌಕರ್ಯಗಳಿಲ್ಲದ ಧೂಳಖೇಡ ಬಸ್ ನಿಲ್ದಾಣವಿಲ್ಲ.; ಶಂಕರಲಿಂಗ ದೇವಾಲಯದ ಅಭಿವೃದ್ಧಿ ನಿರ್ಲಕ್ಷ್ಯ

ಸೌಕರ್ಯಗಳಿಲ್ಲದ ಧೂಳಖೇಡ ಬಸ್ ನಿಲ್ದಾಣವಿಲ್ಲ.; ಶಂಕರಲಿಂಗ ದೇವಾಲಯದ ಅಭಿವೃದ್ಧಿ ನಿರ್ಲಕ್ಷ್ಯ

ಸೌಕರ್ಯಗಳಿಲ್ಲದ ಧೂಳಖೇಡ ಬಸ್ ನಿಲ್ದಾಣವಿಲ್ಲ.; ಶಂಕರಲಿಂಗ ದೇವಾಲಯದ ಅಭಿವೃದ್ಧಿ ನಿರ್ಲಕ್ಷ್ಯ     

ಚಡಚಣ 18:  ಕರ್ನಾಟಕ - ಮಹಾರಾಷ್ಟ್ರ ರಾಜ್ಯಗಳ ಗಡಿ ಅಂಚಿನಲ್ಲಿರುವ, ಭೀಮಾ ನದಿಯ ಬಲದಂಡೆಯಲ್ಲಿರುವ ’ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿ ಪಡೆದ ಧೂಳಖೇಡ ಗ್ರಾಮಕ್ಕೆ ಬೇಕಿದೆ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.ಪ್ರಸಿದ್ಧಿ ಹೊಂದಿದ್ದ ಶಂಕರಲಿಂಗ ದೇವಾಲಯದ ಅಭಿವೃದ್ಧಿಗೆ ಪುರಾತತ್ವ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ದೇವಾಲಯಕ್ಕೆ ಹೋಗಲು ಉತ್ತಮವಾದ ಡಾಂಬರ್ ರಸ್ತೆಯೂ ಇಲ್ಲದೇ ಸುತ್ತಲು ಧೂಳು ಮಣ್ಣು ಅವರಿಸಿಕೊಂಡಿದೆ.ಈ ದೇವಾಲಯದ ಸುತ್ತಲು ಇದ್ದ ಹಳೆ ಧೂಳಖೇಡನ್ನು ಸ್ಥಳಾಂತರಿಸಿ, ರಾಷ್ಟ್ರೀಯ ಹೆದ್ದಾರಿ 52 ರ ಪಕ್ಕ ಅಭಿವೃದ್ಧಿ ಪಡಿಸಲಾಗಿದೆ. ಸ್ಥಳಾಂತರಗೊಂಡು ಹಲವು ದಶಕಗಳು ಕಳೆದರೂ ಈ ಗ್ರಾಮವು ಹಲವು ಮೂಲಸೌಕರ್ಯಗಳಿಂದ ವಂಚಿತಗೊಂಡಿದೆ.ಗ್ರಾಮದಲ್ಲಿ ಉತ್ತಮ ಹಾಗೂ ವಿಶಾಲವಾದ ರಸ್ತೆಗಳಿದ್ದರೂ ಚರಂಡಿ ವ್ಯವಸ್ಥೆ ಇಲ್ಲ. ಈ ಗ್ರಾಮಕ್ಕೆ ಸುತ್ತಲಿನ ಸುಮಾರು 10 ಗ್ರಾಮಗಳ ಜನರು ನಿತ್ಯ ಆಗಮಿಸಿ, ವಿಜಯಪುರ ಸೋಲಾಪುರದಂತ ರಾಜ್ಯ, ಅಂತರರಾಜ್ಯಕ್ಕೆ ಹೋಗುವದು ಅನಿವಾರ್ಯ. ಆದರೆ, ಈ ಗ್ರಾಮಕ್ಕೆ ಒಂದು ಉತ್ತಮವಾದ ಬಸ್ ನಿಲ್ದಾಣವಿಲ್ಲ.ಬಸ್ ನಿಲ್ದಾಣ: ಜನರು ಮಳೆ, ಬಿಸಿಲು ಎನ್ನದೇ ರಸ್ತೆಯ ಪಕ್ಕದಲ್ಲಿಯೇ ಬಸ್ಸಿಗಾಗಿ ಕಾಯಬೇಕು. ವಿದ್ಯಾರ್ಥಿಗಳು, ಮಹಿಳೆಯರಿಗಾಗಿ ಕುಡಿ ಯುವ ನೀರು, ಶೌಚಾಲಯವಾಗಲಿ ಸೌಕರ್ಯ ಇಲ್ಲ.ಗ್ರಾಮದ ಬಹುತೇಕ ಜನರಿಗೆ ಬಯಲು ಶೌಚಾಲಯವೇ ಗತಿ. ಗಡಿ ಅಂಚಿನ ಪ್ರಮುಖ ವ್ಯಾಪಾರಿ ಕೇಂದ್ರವಾದ ಈ ಗ್ರಾಮಕ್ಕೆ ನಿತ್ಯ ಹೊರ ರಾಜ್ಯಗಳಿಂದ ಸಹಸ್ರಾರು ವಾಹನಗಳು ಆಗಮಿಸುತ್ತವೆ. ಆದರೆ, ಗಡಿ ಅಂಚಿನಲ್ಲಿ ಒಂದು ಪೊಲೀಸ್ ಉಪ ಠಾಣೆಯಾಗಲಿ, ಚೆಕ್ ಪೋಸ್ಟ್‌ ಆಗಲಿ, ಸಿಸಿ ಕ್ಯಾಮೆರಾಗಳ ವ್ಯವಸ್ಥೆಯಾಗಲಿ ಇಲ್ಲ. ಸೂಕ್ತ ಭದ್ರತೆ ಇಲ್ಲದಿರುವುದರಿಂದ ಗ್ರಾಮಸ್ಥರು ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ.   

   ಕುಡಿಯುವ ನೀರು: ಶುದ್ಧ ಕುಡಿಯುವ ನೀರಿನ ಘಟಕ, ಸಾರ್ವಜನಿಕ ಶೌಚಾಲಯ ನಿರ್ಮಾಣ ಸೇರಿದಂತೆ ಸೌಕರ್ಯ ಅವಶ್ಯಕತೆ ಇದ್ದು, ಇನ್ನಾದರೂ ಸೌಲಭ್ಯ ವಂಚಿತ ಈ ಗ್ರಾಮಕ್ಕೆ ಕಾಯಕಲ್ಪ ಒದಗಿಸುವವರೇ ಎಂಬುದನ್ನು ಕಾದು ನೋಡಬೇಕಿದೆ.ಅಕ್ರಮ ಚಟುವಟಿಕೆಗೆ ಬ್ರೇಕ್‌: ಗಡಿ ಭಾಗದಲ್ಲಿ ಕೊಲೆ, ದರೋಡೆಗಳು ಹೆಚ್ಚಾಗಿ ನಡೆಯುತ್ತಿವೆ. ಕೂಡಲೇ ಪೊಲೀಸ್ ಇಲಾಖೆ ಗಡಿ ಚೆಕ್ ಪೋಸ್ಟ್‌ ಸ್ಥಾಪಿಸಿ, ಕಾಯಂ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು.ರಮೇಶ ಬೆಳ್ಳೆನವರ, ಗ್ರಾಮಸ್ಥ ಶಂಕರಲಿಂಗ ದೇವಾಲಯ ಕಂದಾಯ ಇಲಾಖೆ ಸುಪರ್ದಿಯಲ್ಲಿದೆ.ಭಕ್ತರಿಗೆ ಮೂಲಸೌಲಭ್ಯ, ಸಭಾಭವನ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕುಶಿವಬಾಳ ಗೋಲಿ, ನಿವೃತ್ತ ಶಿಕ್ಷಕಬಾಕ್ಸ್‌:-*ಪುರಾತನ ಶಂಕರಲಿಂಗ ದೇವಾಲಯ*ಭೀಮಾ ನದಿ ದಂಡೆಯಲ್ಲಿರುವ ಶಂಕರಲಿಂಗ ದೇವಾಲಯವನ್ನು ದಕ್ಷಿಣ ಗಂಗೆ, ಭೂ ಕೈಲಾಸ, ಮುಕ್ತಿ ಮಂದಿರವೆಂದು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖವಾಗಿವೆ.ಪುರಾತನ ಶಂಕರಲಿಂಗ ದೇವಾಲಯವು ಚಾಲುಕ್ಯ ಕಾಲದಲ್ಲಿ ನಿರ್ಮಾಣಗೊಂಡಿದೆ. ದೇವಾಲಯದ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಭೀಮಾ ನದಿಯು ದಕ್ಷಿಣ ಮುಖವಾಗಿ ಹರಿಯುತ್ತದೆ.ಈ ನದಿಯಲ್ಲಿಯೇ ಸ್ವಯಂಭೂ ಶಂಕರಲಿಂಗ ವಿಗ್ರಹವಿದೆ. ಈ ವಿಗ್ರಹದ ಮೇಲೆ ಯುಗಾದಿ ಹಬ್ಬದಂದು ಸೂರ್ಯನ ಕಿರಣಗಳು ಮೊದಲು ಈ ಲಿಂಗದ ಮೇಲೆ ಬೀಳುತ್ತಿರುವುದು ವಿಶೇಷ.ಎಂಟನೇ ಶತಮಾನದಲ್ಲಿ ಶೃಂಗೇರಿಯಿಂದ ಉತ್ತರ ಭಾರತದ ಕಡೆಗೆ ಧರ್ಮ ಯಾತ್ರೆಗೆ ಹೊರಟ ಸಮಯದಲ್ಲಿ ಶಂಕರಾಚಾರ್ಯರು ಭೇಟಿ ನೀಡಿ, ಕ್ಷೇತ್ರದ ಮಹತ್ವ ತಿಳಿದುಕೊಂಡಿದ್ದರು ಎನ್ನಲಾಗಿದೆ. ಹಲವಾರು ಶಾಸನಗಳು, ಪ್ರಾಚೀನ ವಸ್ತುಗಳು ಈ ದೇವಾಲಯದಲ್ಲಿ ಪತ್ತೆಯಾಗಿವೆ. ಈಗ ಮುಜರಾಯಿ ಇಲಾಖೆಗೆ ಈ ದೇವಾಲಯ ಒಳಪಟ್ಟಿದೆ. 


ಸುದ್ದಿ ಓದಿ