ಎತ್ತಿನ ಗಾಡಿ ಜತೆ ಜೋತಿಬಾ ಜಾತ್ರೆಯಿಂದ ವಾಪಸ್ ಬೆಳಗಾವಿಗೆ ಬಂದ ಭಕ್ತರಿಗೆ ಆರತಿ ಎತ್ತಿ ಸ್ವಾಗತ

ಎತ್ತಿನ ಗಾಡಿ ಜತೆ ಜೋತಿಬಾ ಜಾತ್ರೆಯಿಂದ ವಾಪಸ್ ಬೆಳಗಾವಿಗೆ ಬಂದ ಭಕ್ತರಿಗೆ ಆರತಿ ಎತ್ತಿ ಸ್ವಾಗತ

ಬೆಳಗಾವಿ : ಜೋತಿಬಾ ಚ್ ನಾವಾನ್ ಚಾಂಗ್ ಬಲ್ ಎಂಬ ಘೋಷದೊಂದಿಗೆ ಕಳೆದ 15 ದಿನಗಳ ಹಿಂದೆ ಎತ್ತಿನ ಗಾಡಿ(ಬಂಡಿ) ಮೂಲಕ ಕೊಲ್ಲಾಪುರದ ಜೋತಿಬಾ ದೇವಸ್ಥಾನಕ್ಕೆ ತೆರಳಿ ಜಾತ್ರೆಯ ನಂತರ ನಂತರ ಬೆಳಗಾವಿಗೆ ಆಗಮಿಸಿದ ಭಕ್ತರ ತಂಡಕ್ಕೆ ಆರತಿ ಎತ್ತುವ ಮೂಲಕ ಸ್ವಾಗತಿಸಿಕೊಳ್ಳಲಾಯಿತು. 

    16 ಎತ್ತಿನ ಗಾಡಿಗಳ ಮೂಲಕ ಬೆಳಗಾವಿಯ ಚವಾಟ್ ಗಲ್ಲಿ ಸೇರಿದಂತೆ ವಿವಿಧ ಪ್ರದೇಶದ ಭಕ್ತರು ಕಳೆದ 15 ದಿನಗಳಿಂದ ಕೊಲ್ಲಾಪುರದ ಜೋತಿಬಾ ದೇವಸ್ಥಾನಕ್ಕೆ ತೆರಳಿದ್ದರು. 

     ಬಳಿಕ ಜೋತಿಬಾ ದೇವಸ್ಥಾನ ಜಾತ್ರೆ ದರ್ಶನ ಮುಗಿಸಿ ತಾವು ತೆಗೆದುಕೊಂಡು ಹೋಗಿದ್ದ ಎತ್ತಿನ ಗಾಡಿಗಳ‌ ಮೂಲಕ ಪಾದಯಾತ್ರೆ ನಡೆಸುತ್ತಾ ಸೋಮವಾರ ರಾತ್ರಿ ಬೆಳಗಾವಿ ಚವಾಟ್ ಗಲ್ಲಿಗೆ ಆಗಮಿಸಿದರು. 

     ಈ ಸಂದರ್ಭದಲ್ಲಿ ನೂರಾರು ಸುಮಂಗಲಿಯರು ಆಗಮಿಸಿದ ಭಕ್ತರಿಗೆ ಹಾಗೂ ಎತ್ತಿನ ಗಾಡಿ ಹಾಗೂ ಪಲ್ಲಕ್ಕಿಗೆ ಆರತಿ ಎತ್ತುವ ಮೂಲಕ ಭಕ್ತಿ ಭಾವದೊಂದಿಗೆ ಸ್ವಾಗತಿಸಿಕೊಂಡರು. 

ಸುದ್ದಿ ಓದಿ