ಮತದಾನದಂದು ಭಕ್ತರಿಗೆ ನಿರ್ಬಂಧ: ಯಲ್ಲಮ್ಮಾ ದೇವಿ ದೇವಸ್ಥಾನ ಭಣಭಣ
ಉಗರಗೋಳ 07: ಲೋಕಸಭೆ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸವದತ್ತಿ ತಾಲೂಕಿನ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಮಂಗಳವಾರ ಶ್ರೀದೇವಿಯ ದರ್ಶನ ಪಡೆಯಲು ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ಹಾಗಾಗಿ ಸದಾ ಭಕ್ತರಿಂದ ತುಂಬಿರುತ್ತಿದ್ದ ಯಲ್ಲಮ್ಮಾ ದೇವಿ ದೇವಸ್ಥಾನ ಭಣಗುಡುತ್ತಿತ್ತು.
ಪ್ರತಿ ಮಂಗಳವಾರ ಯಲ್ಲಮ್ಮನ ಗುಡ್ಡಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇದರಿಂದಾಗಿ ಮತದಾನ ಪ್ರಮಾಣ ತಗ್ಗಭಾರದೆಂಬ ಕಾರಣಕ್ಕೆ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ಕೊಡಲಿಲ್ಲ ಹಾಗಾಗಿ ಗುಡ್ಡದ ಪರಿಸಲ ಖಾಲಿ ಖಾಲಿಯಾಗಿತ್ತು ಅಲ್ಲಲ್ಲಿ ಕೆಲವರಷ್ಟೇ ಕಂಡು ಬಂದರು. ಅಧಿಕಾರಿಗಳು ಹಾಗೂ ಅರ್ಚಕರ ಸಮ್ಮುಖದಲ್ಲಷ್ಟೆ ಎಲ್ಲರ ಅಮ್ಮ ಶ್ರೀರೇಣುಕಾ ಯಲ್ಲಮ್ಮನಿಗೆ ವಿಶೇಷ ಪೂಜೆ ನೆರವೇರಿತು.