ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರ ದಂಡು....!
ತಿರುವನಂತಪುರಂ,
ಡಿಸೆಂಬರ್ 26: ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪವಿತ್ರ ಮಂಡಲ ಪೂಜೆ ಆರಂಭವಾಗಿದ್ದು, ಹಲವು ಕಡೆಗಳಿಂದ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದು, ಇಂದಿನ ಮಂಡಲ
ಪೂಜೆ ನಂತರ ದೇವಸ್ಥಾನವನ್ನು ಮುಚ್ಚಲಾಗುತ್ತದೆ.
ಕೊರೋನ ಸೋಂಕಿನ ನಡುವೆ ಅಯ್ಯಪ್ಪನ ದರ್ಶನಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು,
ಭಕ್ತರು ತಮ್ಮೊಂದಿಗೆ ಕೊರೊನಾ ಪರೀಕ್ಷೆಯ ಪ್ರಮಾಣ ಪತ್ರ ತರುವುದು ಕಡ್ಡಾಯವಾಗಿದೆ. ಕೊರೋನ ಆರ್ ಟಿ
ಪಿಸಿಆರ್ ಪರೀಕ್ಷೆ ನಡೆಸಿ, ಆ ಪ್ರಮಾಣ ಪತ್ರವನ್ನು ತಮ್ಮೊಂದಿಗೆ ತಂದವರಿಗಷ್ಟೆ ಪ್ರವೇಶಕ್ಕೆ ಅನುಮತಿ
ನೀಡುವಂತೆ ಕೇರಳ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರ
ನಿರ್ದೇಶನ ನೀಡಿದೆ.
ದೇವಸ್ಥಾನ
ಪ್ರವೇಶಿಸುವ 48 ಗಂಟೆಗಳ ಮುನ್ನ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಿದ ಪ್ರಮಾಣ ಪತ್ರ ತರುವುದು ಕಡ್ಡಾಯ
ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಕೂಡ ಭಕ್ತರಿಗೆ ಸೂಚನೆ ನೀಡಿದೆ. ದೇವಸ್ಥಾನ ಪ್ರವೇಶಕ್ಕೆ
ಮುನ್ನ, 48 ಗಂಟೆಗಳ ಒಳಗೆ ನಡೆಸಿದ ಕೊರೊನಾ ಪರೀಕ್ಷೆಯ ಪ್ರಮಾಣ ಪತ್ರ ತರುವುದು ಭಕ್ತರಿಗೆ ಕಡ್ಡಾಯಗೊಳಿಸಲಾಗಿದೆ.
ಶನಿವಾರದಿಂದ
ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.ಈಚೆಗೆ ಹೈಕೋರ್ಟ್,
ಶಬರಿಮಲೆಗೆ ಮಂಡಲ ಮಕರವಿಳಕ್ಕು ಅವಧಿ
ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯನ್ನೂ ಐದು ಸಾವಿರಕ್ಕೆ ಹೆಚ್ಚಿಸಿತ್ತು. ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ
ಇಲಾಖೆ ಶಬರಿಮಲೆಯಲ್ಲಿ ಆಂಟಿಜೆನ್ ಪರೀಕ್ಷೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಇಂದಿನ ಮಂಡಲ
ಪೂಜೆ ನಂತರ ದೇವಸ್ಥಾನವನ್ನು ಮುಚ್ಚಲಿದ್ದು, ಇದೇ 31ರ ಮಕರವಿಳಕ್ಕು ಪೂಜೆಗಾಗಿ ಮತ್ತೆ ತೆರೆಯಲಾಗುತ್ತದೆ.