ತಾಳಿಕೋಟಿ

ಅಭಿವೃದ್ಧಿ ಕಾರ್ಯಗಳೇ ಶಾಸಕ ಸೋಮನಗೌಡರಿಗೆ ಶ್ರೀರಕ್ಷೆ

ಅಭಿವೃದ್ಧಿ ಕಾರ್ಯಗಳೇ ಶಾಸಕ ಸೋಮನಗೌಡರಿಗೆ ಶ್ರೀರಕ್ಷೆ

ತಾಳಿಕೋಟಿ: ದೇ. ಹಿಪ್ಪರಗಿ ಮತಕ್ಷೇತ್ರದಲ್ಲಿ ಹಿಂದೆಂದೂ ಆಗದಂಥಹ ಅಭಿವೃದ್ಧಿಯ ಕಾರ್ಯಗಳು ನಡೆಯುತ್ತಿವೆ. ಕ್ಷೇತ್ರದ ಜನರಿಗೆ ಕೊಟ್ಟ ವಚನವನ್ನು ಉಳಿಸಿಕೊಂಡು ಶಾಸಕ ಸೋಮನಗೌಡ ಪಾಟೀಲರು ಕೆಲಸ ಮಾಡುತ್ತಿದ್ದಾರೆ. ಬರಲಿರುವ 2023ರ ಚುನಾವಣೆಯಲ್ಲಿ ಅವರ ಈ ಕಾರ್ಯ ಸಾಧನೆಯೇ ಅವರಿಗೆ ಶ್ರೀರಕ್ಷೆ ಆಗಲಿವೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದು ಬುಳ್ಳಾ ಹೇಳಿದರು. 

ಇತ್ತೀಚಿಗೆ ತಾಲೂಕಿನ ಬಿಂಜಲಭಾವಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲು ಶಾಸಕ ಸೋಮನಗೌಡರು ಆಗಮಿಸಿದಾಗ ಗ್ರಾಮಸ್ಥರು ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.  

ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸೋಮನಗೌಡ ಪಾಟೀಲರು ನೀವು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡು ಹೊಗುವನಿಟ್ಟಿನಲ್ಲಿ ನಿಮ್ಮ ಋಣ ತೀರಿಸುವಹಾಗೆ ಕೆಲಸ ಮಾಡುತ್ತಿದ್ದೇನೆ. ನಾನು ನಿಮ್ಮ ಶಾಸಕ ಅನ್ನುವದಕ್ಕಿಂತಲೂ ನಿಮ್ಮ ಸೇವಕನಾಗಿರಲು ಬಯಸುತ್ತೇನೆ. ನಿಮ್ಮ ಸೇವೆ ನನ್ನ ಕರ್ತವ್ಯವಾಗಿದೆ. ನಾನು ಕೆಲಸ ಮಾಡುವಾಗ ತಪ್ಪಿದ್ದಲ್ಲಿ ನನ್ನನ್ನು ತಿದ್ದುವ ಹಕ್ಕು ನಿಮಗಿದೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸದಾ ಬದ್ದನಾಗಿರುವೆ ಎಂದರು. 

ಈ ಸಮಯದಲ್ಲಿ ಗ್ರಾಮದ ಗಣ್ಯರಾದ ಅಮರೇಶಗೌಡ ನಾಡಗೌಡ ಕಾಸಪ್ಪ ಮಾದರ, ಸೋಮನಗೌಡ ಬಿರಾದಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಬಿ. ಆರ್‌. ಬಿರಾದಾರ, ಸೋಮನಗೌಡ ಹಾದಿಮನಿ, ಸಜ್ಜನ ಸರ್, ರಾಯನಗೌಡ ನೀರಲಗಿ, ಎಇಇ ತಾರಾನಾಥ ರಾಠೋಡ, ಎಇ ಎ. ಎಚ್‌. ತುಂಬಗಿ, ಗುತ್ತಿಗೆದಾರ ಎಸ್‌. ಆರ್‌. ಸೂಳೇಬಾವಿ, ನಾನಾಗೌಡ ಬಿರಾದಾರ ಇದ್ದರು.. 


ಸುದ್ದಿ ಓದಿ