ನ್ಯೂಮೋನಿಯಾ ವಿರುದ್ಧ ಮೊದಲ ಸ್ವದೇಶಿ ಲಸಿಕೆ ಅಭಿವೃದ್ಧಿ
ನವದೆಹಲಿ,
ಡಿಸೆಂಬರ್ 24: ಸೆರಮ್ ಭಾರತೀಯ ವೈದ್ಯಕೀಯ ಸಂಸ್ಥೆ
(ಎಸ್ ಐಐ) ನ್ಯೂಮೋನಿಯಾ ವಿರುದ್ಧ ಮೊದಲ ಸ್ವದೇಶಿ ಲಸಿಕೆ ಅಭಿವೃದ್ಧಿಪಡಿಸಿದೆ. ಇದನ್ನುಕೇಂದ್ರ ಅರೋಗ್ಯ
ಸಚಿವ ಡಾ. ಹರ್ಷವರ್ಧನ್ ಬಿಡುಗಡೆ ಮಾಡಲಿದ್ದು, ಮುಂದಿನ ವಾರದ ಆರಂಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ
ಲಭ್ಯವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಎರಡು ವಿದೇಶಿ ಕಂಪನಿಗಳು ತಯಾರಿಸಿದ ಈ ಲಸಿಕೆಯು ಈಗಿರುವುದಕ್ಕಿಂತ ಕಡಿಮೆ ದರದಲ್ಲಿ ಜನರಿಗೆ ದೊರಕಲಿದೆ. ಪುಣೆ ಮೂಲದ ಸಂಸ್ಥೆ ಸಲ್ಲಿಸಿದ 1, 2 ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗ ದತ್ತಾಂಶವನ್ನು ಪರಿಶೀಲಿಸಿದ ನಂತರ, ನ್ಯೂಮೋಕೋಕಲ್ ಪಾಲಿಸ್ಯಾಕರೈಡ್ ಕಾಂಜುಗೇಟ್ ಲಸಿಕೆಗೆ ಭಾರತದ ಔಷಧ ನಿಯಂತ್ರಕಾರಿಗಳು ಜುಲೈ ನಲ್ಲಿ ಮಾರುಕಟ್ಟೆ ಅನುಮೋದನೆಯನ್ನು ನೀಡಿದ್ದರು.
ಈ ಲಸಿಕೆಯನ್ನು ಶಿಶುಗಳಲ್ಲಿ 'ಸ್ಟ್ರೆಪ್ಟೊಕಾಕಸ್ ನ್ಯುಮೋನಿಯಾ' ದಿಂದ ಉಂಟಾಗುವ ರೋಗ ಮತ್ತು ನ್ಯುಮೋನಿಯಾದ ವಿರುದ್ಧ ಸಕ್ರಿಯ ಲಸಿಕೆಗಾಗಿ ಬಳಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಈ ಹಿಂದೆ ಹೇಳಿತ್ತು.
ಸೀರಮ್
ಇನ್ ಸ್ಟಿಟ್ಯೂಟ್ ಭಾರತ ಮತ್ತು ಆಫ್ರಿಕಾ ದೇಶ ಗ್ಯಾಂಬಿಯಾದಲ್ಲಿ ಲಸಿಕೆಯ 1, 2 ಮತ್ತು 3ನೇ ಹಂತದ
ವೈದ್ಯಕೀಯ ಪ್ರಯೋಗಗಳನ್ನು ನಡೆಸಿದೆ. 'ನ್ಯುಮೋನಿಯಾ ದ ಕ್ಷೇತ್ರದಲ್ಲಿ ಇದು ಮೊದಲ ಭಾರಿಗೆ ದೇಶೀಯವಾಗಿ
ಅಭಿವೃದ್ಧಿಪಡಿಸಿದ ಲಸಿಕೆಯಾಗಿದೆ ಎಂದೂ ಅಧಿಕೃತ ಮೂಲಗಳು ತಿಳಿಸಿವೆ.