ಮುದ್ದೆಬಿಹಾಲ್

ನಂಬಿಕೆ, ವಿಶ್ವಾಸಗಳಿಂದ ಸಹಕಾರಿ ಸಂಘಗಳು ಅಭಿವೃದ್ಧಿ: ಸುನಿಲಗೌಡ ಪಾಟೀಲ

ನಂಬಿಕೆ, ವಿಶ್ವಾಸಗಳಿಂದ ಸಹಕಾರಿ ಸಂಘಗಳು ಅಭಿವೃದ್ಧಿ: ಸುನಿಲಗೌಡ ಪಾಟೀಲ

ಮುದ್ದೇಬಿಹಾಳ 31: ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸಗಳಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ.ಈ ನಿಟ್ಟಿನಲ್ಲಿ ಲಿಂಗೈಕ್ಯ ವಿಜಯಪುರ ಜ್ಞಾನಯೋಗಿ ಶ್ರೀಸಿದ್ದೇಶ್ವರ ಶ್ರೀಗಳು ಹಾಗೂ ಕತ್ನಳ್ಳಿಯ ಶಿವಯ್ಯ ಮಹಾಸ್ವಾಮಿಗಳು ಕೃಪಾರ್ಶಿವಾದ ಮಾರ್ಗದರ್ಶನದ ಮೇರೆಗೆ ಉತ್ತಮ ಕ್ರಿಯಾತ್ಮಕ ಅನುಭವಿ ಆಡಳಿತ ಮಂಡಳಿಯನ್ನು ರಚಿಸುವ ಮೂಲಕ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲರವರ ಜನ್ಮದಿನದ ನಿಮಿತ್ಯ ಅಕ್ಟೋಬರ 2022ರಂದು ಪ್ರಾರಂಭಗೊಂಡು ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ಬಡವರಿಗೆ, ಮದ್ಯಮ ವರ್ಗದವರಿಗೆ ಸಾಲದ ರೂಪದಲ್ಲಿ ಆರ್ಥಿಕ ಅನುಕೂಲ ಮಾಡುವ ಉದ್ದೇಶದಿಂದ ಸಧ್ಯ ಬಿಜಾಪುರ ಲಿಂಗಾಯತ ಡೆವಲಪ್‌ಮೇಂಟ್ ಸೌಹಾರ್ಧ ಸಹಕಾರಿ ಸಂಘ ಸ್ಥಾಪಿಸಲಾಗಿದೆ. (ಬಿಎಲ್ ಡಿ ಸೌಹಾರ್ಧ)  ಕಾರಣ ಎಲ್ಲರ ವಿಶ್ವಾಸದದಿಂದ  ಪ್ರಾಮಾಣಿಕ ಜವಾಬ್ದಾರಿಯೊಂದಿಗೆ ಮುನ್ನಡೆದುಕೊಂಡು ಬರುತ್ತಿದೆ. ಕಾರಣ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ ಹೇಳಿದರು. 

ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ನಾವದ ಕಾಂಪ್ಲೇಕ್ಸ್‌ನಲ್ಲಿ  ನೂತನವಾಗಿ ಬಿಜಾಪುರ ಲಿಂಗಾಯತ ಡವಲಪ್‌ಮೇಂಟ್ ಸೌಹಾರ್ಧ ಸಹಕಾರಿ ಸಂಘ ನಿಯಮಿತ ವಿಜಯಪುರ (ಬಿಎಲ್‌ಡಿ ಸೌಹಾರ್ಧ) 10ನೇ ಶಾಖೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು..  

ಈಗಾಗಲೇ ಸರಕಾರದ ಸೌಹಾರ್ಧ ನಿಯಮಾನುಸಾರ ಎಲ್ಲ ರೀತಿಯ ಆಧುನಿಕ ತತ್ರಜ್ಞಾನದೊಂದಿಗೆ ಮುನ್ನಡೆದುಕೊಂಡು ಬಂದು ವಿಜಯಪುರ ನಗರದಲ್ಲಿ ನಾಲ್ಕು, ಜಮಖಂಡಿ, ಬಾಗೇವಾಡಿ, ತಾಳಿಕೋಟಿ, ಇಂಡಿ, ಸಾವಳಗಿ ಸೇರಿದಂತೆ ಸಧ್ಯ ಬಿಎಲ್ ಡಿ ಸೌಹಾರ್ಧ ಸಂಘ ಸ್ಥಾಪನೆಗೊಂಡಿದೆ, ಒಟ್ಟು 400 ಕೋಟಿ ಯವ ವ್ಯವಹಾರ, ಇದರಲ್ಲಿ 225 ಕೋಟಿ ಠೇವಣಿ ಸಂಗ್ರಹ, 175 ಕೋಟಿ ಸಾಲ ವಿತರಿಸಲಾಗಿದೆ, ಪ್ರಸ್ಥುತದಲ್ಲಿ ಒಟ್ಟು 5 ಸಾವಿರ ಜನ ಸದಸ್ಯರನ್ನು ಹೋಂದುವ ಮೂಲಕ ಗ್ರಾಹಕರ ವಿಶ್ವಾಸಾರ್ಹ ಬ್ಯಾಂಕಾಗಿ ಪರಿವರ್ತನೆಗೊಂಡಿದೆ. ಮುಂಬರುವ ಮಾರ್ಚ 2025ರೋಳಗಾಗಿ ಸುಮಾರು 500 ಕೋಟಿ ವ್ಯವಹಾರ ಮಾಡುವ ಗುರಿ ಹೊಂದಿದೆ. ಜೊತೆಗೆ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಬ್ಯಾಂಕಿನ ಸೌಲಭ್ಯ ಒದಗಿಸುವಲ್ಲಿ ಆನ್ ಲೈನ್ ನೇಟ್ ಬಾಂಕಿಂಗ ವ್ಯವಸ್ಥೆ ಸೇರಿದಂತೆ ಇತರೇ ಮಹತ್ತರ ವಿಶೇಷ ಪ್ರಯತ್ನ ನಮ್ಮ ಸೌಹಾರ್ಧ ಬ್ಯಾಂಕಿನ ವ್ಯವಸ್ಥೆಯ ಒಂದು ಭಾಗವಾಗಿದೆ ಎಣಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು. 

ಕುಂಟೋಜಿ ಭಾವೈಕ್ಯತಾ ಹಿರೇಮಠದ ಶ್ರೀಗುರು ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಬಿ ಎಲ್ ಡಿ ಸೌಹಾರ್ಧ ಸಂಘದ ನಿರ್ಧೇಶಕ ವಿಜಯಕುಮಾರ ಕನಮಡಿ,  ಆಡಳಿತಾಧಿಕಾರಿ ಎಸ್ ಎಸ್ ಪಾಟೀಲ,  ಸಲಹಾ ಸಮೀತಿ ಸದಸ್ಯ ವಿಜಯಕುಮಾರ ಜತ್ತಿ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ರಾಯನಗೌಡ ತಾತರಡ್ಡಿ, ಸಂಗನಗೌಡ ಬಿರಾದಾರ(ಜಿಟಿಸಿ)ಸಿ. ಬಿ ಅಸ್ಕಿ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವಾಯ್ ಎಚ್ ವಿಜಯಕರ, ಅಪ್ಪು ದೇಗಿನಾಳ, ಶ್ರೀಶೈಲ ಮರೋಳ, ಸಂತೋಷ ಚವ್ಹಾಣ, ಶ್ರೀಕಾಂತ ಚಲವಾದಿ, ರಾಜೇಂದ್ರ ರಾಯಗೊಂಡ, ರಾಜು ಕೊಂಗಿ, ನ್ಯಾಯವಾದಿಗಳಾದ ಎಸ್‌.ಎಸ್‌. ಮಾಲಗತ್ತಿ, ಎಂ. ಎಚ್ ಹಾಲಣ್ಣವರ, ಮಹ್ಮದರಫಿಕ ಶಿರೋಳ, ಸದ್ದಾಂ ಕುಂಟೋಜಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ