ಪರಸ್ಪರ ಹೊಂದಾಣಿಕೆಯಿಂದ ಅಭಿವೃದ್ಧಿ ಸಾಧ್ಯ: ಮಹೇಶ್ವರ ಶ್ರೀ
ಹಗರಿಬೊಮ್ಮನಹಳ್ಳಿ 08: ಧಾರ್ಮಿಕ ಬಾವನೆಗಳಿಂದ ಮನಸ್ಸು ಹಾಗೂ ಮನುಜ ಸುಸಂಸ್ಕೃತನನ್ನಾಗಿಸುತ್ತವೆ ಎಂದು ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಗ್ರಾಮದೇವತಾ ಭಜನಾ ಮಂಡಳಿಯವರು ಮತ್ತು ದೇವಸ್ಥಾನ ಸಮಿತಿಯವರು ಹಮ್ಮಿಕೊಂಡಿದ್ದ ಊರಮ್ಮ ದ್ಯಾಮಮ್ಮ ದೇವಿಯರಿಗೆ ಕುಂಕುಮಾರ್ಚನೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮದೇವತೆಯ ಜಾತ್ರೆಯನ್ನು ಮಾಡಿದರ ಫಲವಾಗಿ ಗ್ರಾಮದ ಮತ್ತು ದೇವಿಯ ದೇವಸ್ಥಾನ ಅಭಿವೃಧ್ದಿ ನಿರಂತರವಾಗಿ ನಡೆದಿದೆ. ಜಾತ್ರೆಯ ನಂತರ ಸಾಕಷ್ಟು ಕಾರ್ಯಕ್ರಮಗಳು ನಡೆದಿರುವುದು ದೇವಿಯ ಶಕ್ತಿಯಿಂದ. ಗ್ರಾಮಸ್ಥರು ಪರಸ್ಪರ ಹೊಂದಾಣಿಕೆ ಇರುವುದರಿಂದ ತಂಬ್ರಹಳ್ಳಿ ಗ್ರಾಮ ಅಭಿವೃಧ್ದಿಯಲ್ಲಿ ಮುಂದಿದೆ. ಮಾಡುವ ಕೆಲಸದಲ್ಲಿ ಶ್ರದ್ದೆ ಇದ್ದಾಗ ಎಲ್ಲಾ ಕೆಲಸಗಳು ಸಿದ್ದಿಸುತ್ತವೆ. ಶಾಸಕರು ಮತ್ತು ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್ರವರ ಇಚ್ಚಾಶಕ್ತಿಯಿಂದ ಗ್ರಾಮ ಅಭಿವೃಧ್ದಿಯಲ್ಲಿ ತಾಲೂಕಿನಲ್ಲಿಯೇ ಮುಂದಿದೆ ಎಂದು ತಿಳಿಸಿದರು.
ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ ಮಾತನಾಡಿ, ಮನುಷ್ಯ ಏಕಾಗ್ರತೆಯನ್ನು ಹೊಂದಲು ಧಾರ್ಮಿಕ ಆಸಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ದೈವ, ದರ್ಮದ ಹೆಸರಿನಲ್ಲಿ ಅನ್ಯಾಯ ಮಾಡುವುದು ಸಮಂಜಸವಲ್ಲ. ಗ್ರಾಮದ ದೇವಸ್ಥಾನಗಳ ಅಭಿವೃಧ್ದಿಯಿಂದ ಪರಸ್ಪರ ಭಾವೈಕ್ಯತೆ ಹೆಚ್ಚುತ್ತದೆ ಎಂದು ತಿಳಿಸಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಗೌರಜ್ಜನವರ ಬಸವರಾಜಪ್ಪ, ಗ್ರಾ.ಪಂ.ಉಪಾಧ್ಯಕ್ಷ ಮೈಲಾರ ಶಿವಕುಮಾರ, ಧರ್ಮಕರ್ತ ಉದಯಬಾಸ್ಕರ್, ಸಮಿತಿಯ ಕಡ್ಡಿ ಚನ್ನಬಸಪ್ಪ, ಗಂಗಾಧರಗೌಡ, ಗದ್ದಿಕೇರಿ ವೀರಣ್ಣ, ಬಾಳಿಕಾಯಿ ಚಿದಾನಂದಪ್ಪ, ಬಿ.ಲಕ್ಷ್ಮಣ, ಸಪ್ಪರದ ವೀರೇಶ್ಬಾಬು, ಡಿ.ಎಂ.ತೋಟಯ್ಯ, ಟಿ.ಪಾಂಡುರಂಗ, ಕೋರಿ ಬಸವರಾಜ, ಚಲವಾದಿ ಕೊಟ್ರೇಶ, ವಿಠಲ, ಶ್ರೀನಿವಾಸ, ಮ್ಯಗಳಮನಿ ದೇವೆಂದ್ರಪ್ಪ, ಕಾಳಪ್ಪ ಆಚಾರಿ, ಹಿರೇತನದ ಕೊಟ್ರೇಶ, ಎಸ್.ಎಂ.ಉಮೇಶ, ಹೊಟ್ಟಿ ಬಸವರಾಜ, ಶಾಂತಪ್ಪ ಇತರರಿದ್ದರು.
ಗ್ರಾಮದ ಬಣಕಾರ ಕೊಟ್ರಪ್ಪ ಅನ್ನಪೂರ್ಣಮ್ಮ ಮನೆಯಿಂದ ಕಳಸ ತಂದು ದೇವಿಯರಿಗೆ ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು. ಇದೇವೇಳೆ ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಗ್ರಾಮದ ಮಲ್ಲಯ್ಯ ಸ್ವಾಮಿಗಳನ್ನು ಭಜನಾ ಮಂಡಳಿಯವರು ಸನ್ಮಾನಿಸಿ ಗೌರವಿಸಿದರು.