ಬಳ್ಳಾರಿ

ಬಿ ಎಮ್ ಪಾಟೀಲ ದೇವರಾಜ್ ಅರಸು ರಾಜ್ಯ ಪ್ರಶಸ್ತಿ

ಬಿ ಎಮ್ ಪಾಟೀಲ ದೇವರಾಜ್ ಅರಸು ರಾಜ್ಯ ಪ್ರಶಸ್ತಿ

ಬಳ್ಳಾರಿ 24: ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘ ಕೊಡ ಮಾಡುವ ರಾಜ್ಯ ಡಿ ದೇವರಾಜ್ ಅರಸು ಪ್ರಶಸ್ತಿಯನ್ನು ಹಿಂದುಳಿದ ವರ್ಗದ ನಾಯಕ ಕೆಪಿಸಿಸಿ ರಾಜ್ಯ ವಕ್ತಾರರು ಸಂಯೋಜಕರಾದ ಬಿಎಮ್ ಪಾಟೀಲ ರವರಿಗೆ ಇಂದು ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪತ್ರ ಮತ್ತು ಅರಸು ಸ್ಮಾರಕವನ್ನು ವಿತರಣೆ ಮಾಡಲಾಯಿತು. 

 ಈ ಸಂದರ್ಭದಲ್ಲಿ ಬಿ ಎಮ್ ಪಾಟೀಲ ಮಾತನಾಡಿ ರಾಜ್ಯದಲ್ಲಿ ಈ ರೀತಿಯ ಪ್ರಶಸ್ತಿ ನನಗೆ ದೊರಕಿರುವುದು ಸಂತಸದ ವಿಚಾರವಾಗಿದೆ. ಹಿಂದುಳಿದ ವರ್ಗದವರನ್ನು ಒಗ್ಗೂಡಿಸುವ ಜವಾಬ್ದಾರಿ ಇನ್ನು ನನಗೆ ಹೆಚ್ಚಾಗಿದೆ. ಅದಕ್ಕಾಗಿ ರಾಜ್ಯಾದ್ಯಂತ ಹಿಂದುಳಿದ ವರ್ಗದವರನ್ನು ಒಗ್ಗೂಡಿಸುವಿಕೆಗಾಗಿ ಶ್ರಮಿಸುತ್ತೇನೆ. ಪ್ರಶಸ್ತಿ ಕೊಡಮಾಡಿದ ಸಂಯೋಜಕರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಮಾಜಿ ಶಾಸಕರು ರವೀಂದ್ರನಾಥ್ ಬಾಬು, ಕಲ್ಲುಕಂಬ ಪಂಪಪಾತಿ, ಡಾ. ಭೀಮಣ್ಣ ಮೇಟಿ, ಮೌಲಾಲಿ, ಯಮುನೇಶ್, ಕೆಪಿಎಸ್‌ಸಿ ಮಾಜಿ ಸದಸ್ಯ ಶ್ರೀಕಾಂತ್, ಸುಮಾ, ಗಸ್ತಿ, ಕಾರ್ಯಕ್ರಮ ಆಯೋಜಕರು ಸೈದಪ್ಪ ಗುತ್ತೇದಾರ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಸಂಘಟನ  ಕಾರ್ಯದರ್ಶಿ ಮಂಜುನಾಥ್ ದಳವಾಯಿ, ರಾಯಚೂರು ಜಿಲ್ಲಾಧ್ಯಕ್ಷ ರಮೇಶ್ ಮೂಡಲದಿನ್ನಿ, ಬಳ್ಳಾರಿ ಜಿಲ್ಲಾಧ್ಯಕ್ಷ ಬಂಡಿಹಟ್ಟಿ ಕೆ. ರಾಮಲಿಂಗ, ಪ್ರಧಾನಕಾರ್ಯದರ್ಶಿ ನರಸಣ್ಣ ಶಾಸ್ತ್ರೀ, ಸಂಚಾಲಕರು ಗೌಡ್ರು, ತಿಮಪ್ಪ, ಶಿರವಾರ ತಾಲ್ಲೂಕು ಅಧ್ಯಕ್ಷ ಮಾಳಿಂಗರಾಯ, ಲಿಂಗರಾಜ್, ಶರಣಪ್ಪ, ರಾಯಚೂರು ನಗರ ಅಧ್ಯಕ್ಷ ಶ್ರೀನಿವಾಸ್, ಹನುಮಂತಪ್ಪ ವಕೀಲರು, ಬಸವರಾಜ್, ಶರತ್, ಇನ್ನು ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ