ಜಿಲ್ಲಾ ಕಾರ್ಯದರ್ಶಿಯಾಗಿ ದೇವಪ್ಪ ಹರಿಜನ ನೇಮಕ
ತಾಳಿಕೋಟಿ: ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಎಸ್.ಸಿ. ಘಟಕದ ವಿಜಯಪುರ ಜಿಲ್ಲಾ ಕಾರ್ಯದರ್ಶಿಯಾಗಿ ಗೊಟಖಂಡಕಿ ಗ್ರಾಮದ ದೇವಪ್ಪ ಅಡಿವೆಪ್ಪ ಹರಿಜನ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ದೇವಪ್ಪ ಹರಿಜನ ಅವರು ಪಕ್ಷದ ಸಂಘಟನೆಯಲ್ಲಿ ತೋರಿದ ಕ್ರಿಯಾಶೀಲತೆಯನ್ನು ಗುರುತಿಸಿದ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ ಅವರು ಅವರನ್ನು ಜಿಲ್ಲಾ ಎಸ್.ಸಿ. ಘಟಕದ ಕಾರ್ಯದರ್ಶಿಯಾಗಿ ಕೂಡಲೇ ನೇಮಕ ಮಾಡಲು ಜಿಲ್ಲಾ ಅಧ್ಯಕ್ಷ (ಎಸ್.ಸಿ. ಘಟಕ) ಸುಭಾಸ ದೇವಜಿ ನಾಯಕ ಅವರನ್ನು ನಿರ್ದೇಶಿಸಿದ್ದರು. ಅವರ ಆದೇಶದ ಮೇರೆಗೆ ಸುಭಾಸ ನಾಯಕ ಅವರು ದೇವಪ್ಪ ಅಡಿವೆಪ್ಪ ಹರಿಜನ ಇವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಗುರುತರವಾದ ಜವಾಬ್ದಾರಿಯನ್ನು ದೇವಪ್ಪ ಅಡಿವೆಪ್ಪ ಹರಿಜನ ಅವರು ವಹಿಸಿಕೊಂಡು ಸಕ್ರೀಯವಾಗಿ ಕಾರ್ಯನಿರ್ವಹಿಸಿ ಪಕ್ಷದ ತತ್ವ ಸಿದ್ಧಾಂತಗಳನ್ನು ನಿಷ್ಠೆಯಿಂದ ಪಾಲಿಸಲು ಮುಂದಾಗಬೇಕೆಂದು ಸುಭಾಸ ದೇವಜಿ ಹರಿಜನ ಅವರು ತಮ್ಮ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.