ರಾಷ್ಟ್ರೀಯ

ಪುಲ್ವಾಮಾದಲ್ಲಿ ಅಲ್-ಬದರ್‍ನ ನಾಲ್ವರು ಸ್ಥಳೀಯ ಮಟ್ಟದ ಕಾರ್ಯಕರ್ತರ ಬಂಧನ

ಪುಲ್ವಾಮಾದಲ್ಲಿ ಅಲ್-ಬದರ್‍ನ ನಾಲ್ವರು ಸ್ಥಳೀಯ ಮಟ್ಟದ ಕಾರ್ಯಕರ್ತರ ಬಂಧನ

ಶ್ರೀನಗರ, ಡಿಸೆಂಬರ್ 24: ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಲ್-ಬದರ್‍ ಉಗ್ರ ಸಂಘಟನೆಯ ನಾಲ್ವರು ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ಗುರುವಾರ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿನ ತ್ರಾಲ್‍  ಮತ್ತು ಸಂಗಮ್‍ನಲ್ಲಿ ನಲ್ಲಿ ಜೈಶ್-ಎ-ಮೊಹಮ್ಮದ್  ಸಂಘಟನೆಯ ಆರು ಕಾರ್ಯಕರ್ತರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ(ಎಸ್‌ಒಜಿ), ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‌ಪಿಎಫ್ ದದ್ಸಾರ ಮತ್ತು ಲಾರ್ಮೋವಾ ಗ್ರಾಮದಲ್ಲಿ ಇಂದು ಮುಂಜಾನೆ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು ಎಂದು ಅವರು ಹೇಳಿದ್ದಾರೆ.

ಕಾರ್ಯಾಚರಣೆ ವೇಳೆ ಅಮಾನಾಸ್ಪದವಾಗಿ ತಿರುಗಾಡುತ್ತಿದ್ದ ಉಗ್ರರ ಕಾರ್ಯಕರ್ತರನ್ನು ಬಂಧಿಸಿ ವಿಚಾರಿಸಿದಾಗ, ತಾವು ಅಲ್‍ ಬದರ್ ಸಂಘಟನೆಗೆ ನೆರವು ಒದಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಾರ್ಯಕರ್ತರಿಗೆ ಸೇರಿದ ಜಾಗಗಳನ್ನು ಶೋಧ ನಡೆಸಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಇದರಲ್ಲಿ ಒಂದು ಎಕೆ 56 ರೈಫಲ್ ಮ್ಯಾಗಜೀನ್ ಮತ್ತು 28 ಸುತ್ತುಗಳ ಜೀವಂತ ಮದ್ದುಗುಂಡುಗಳು ಮತ್ತು ಕೈ ಗ್ರೆನೇಡ್ ಸೇರಿವೆ.

ಸುದ್ದಿ ಓದಿ